ಮೈಸೂರಲ್ಲಿ ದಕ್ಷಿಣ ವಲಯ ಇಲಾಖಾ ವರಿಷ್ಠಾಧಿಕಾರಿಗಳೊಂದಿಗೆ ಡಿಜಿಪಿ ಪ್ರವೀಣ್ ಸೂದ್ ಪ್ರಥಮ ಸಭೆ
ಮೈಸೂರು

ಮೈಸೂರಲ್ಲಿ ದಕ್ಷಿಣ ವಲಯ ಇಲಾಖಾ ವರಿಷ್ಠಾಧಿಕಾರಿಗಳೊಂದಿಗೆ ಡಿಜಿಪಿ ಪ್ರವೀಣ್ ಸೂದ್ ಪ್ರಥಮ ಸಭೆ

February 11, 2020

ಮೈಸೂರು, ಫೆ. 10(ಆರ್‍ಕೆ)- ರಾಜ್ಯದ ಪೊಲೀಸ್ ಮುಖ್ಯಸ್ಥರಾಗಿ ಅಧಿಕಾರ ವಹಿಸಿ ಕೊಂಡ ನಂತರ ಮೊದಲ ಬಾರಿ ಡಿಜಿ ಹಾಗೂ ಐಜಿಪಿ ಪ್ರವೀಣ್‍ಸೂದ್ ಇಂದು ಮೈಸೂರಿಗೆ ಭೇಟಿ ನೀಡಿದ್ದರು. ಅವರು ಐಜಿಪಿ ಕಚೇರಿ ಮಿನಿ ಸಭಾಂಗಣದಲ್ಲಿ ದಕ್ಷಿಣ ವಲಯ ಇಲಾಖಾ ವರಿಷ್ಠಾಧಿಕಾರಿ ಗಳೊಂದಿಗೆ ಸಭೆ ನಡೆಸಿದರು.

ಬೆಳಿಗ್ಗೆ 8.45 ಗಂಟೆಗೆ ಆಗಮಿಸಿದ ಪ್ರವೀಣ್ ಸೂದ್‍ರನ್ನು ದಕ್ಷಿಣ ವಲಯ ಐಜಿಪಿ ವಿಪುಲ್‍ಕುಮಾರ್ ಹಾಗೂ ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಮೈಸೂ ರಿನ ನಜರ್‍ಬಾದ್‍ನಲ್ಲಿರುವ ಎಸ್‍ಪಿ ಕಚೇರಿ ಎದುರಿನ ಹಿರಿಯ ಪೊಲೀಸ್ ಅಧಿಕಾರಿ ಗಳ ಅತಿಥಿಗೃಹದ ಬಳಿ ಪುಷ್ಪಗುಚ್ಛ ನೀಡಿ ಆತ್ಮೀಯವಾಗಿ ಸ್ವಾಗತಿಸಿದರು.

ನಂತರ ಬೆಳಿಗ್ಗೆ 9.30 ಗಂಟೆಗೆ ಐಜಿಪಿ ಕಚೇರಿಗೆ ಆಗಮಿಸಿದ ಡಿಜಿಪಿ, ದಕ್ಷಿಣ ವಲಯ ಐಜಿಪಿ ವಿಪುಲ್‍ಕುಮಾರ್, ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಸೇರಿದಂತೆ 5 ಜಿಲ್ಲೆಗಳ ವರಿಷ್ಠಾಧಿಕಾರಿಗಳೊಂದಿಗೆ ಮಧ್ಯಾಹ್ನ 1.30 ಗಂಟೆವರೆಗೆ ಸಭೆ ನಡೆಸಿದರು.

ದೊಂಬಿ, ಗಲಾಟೆ, ರೌಡಿ ಚಟುವಟಿಕೆ, ಕೋಮು ವ್ಯಾಜ್ಯದ ಮೇಲೆ ನಿಗಾ ಇರಿಸಿ ಗುಂಪು-ಘರ್ಷಣೆ ಶಾಂತಿ ಭಂಗ ಉಂಟು ಮಾಡುವಂತಹ ಘಟನೆಗಳು ಸಂಭವಿಸ ದಂತೆ ಎಚ್ಚರ ವಹಿಸುವ ಮೂಲಕ ಕಾನೂನು -ಸುವ್ಯವಸ್ಥೆಯನ್ನು ಹತೋಟಿಗೆ ತರಬೇ ಕೆಂದು ಸೂದ್ ಸೂಚನೆ ನೀಡಿದರು.

ಮಕ್ಕಳು, ಮಹಿಳೆಯರು, ಹಿರಿಯ ನಾಗ ರಿಕರ ಹಕ್ಕುಗಳ ರಕ್ಷಣೆ, ಅಪ್ರಾಪ್ತ ಬಾಲಕಿ ಯರು, ಮಹಿಳೆಯರ ಮೇಲಿನ ಅತ್ಯಾಚಾರ, ಮಾನಸಿಕ ಹಾಗೂ ದೈಹಿಕ ಕಿರುಕುಳ, ಅಲ್ಪ ಸಂಖ್ಯಾತರು, ಎಸ್ಸಿ-ಎಸ್ಟಿ ಸಮುದಾಯ ದವರ ಪ್ರಾಣ, ಆಸ್ತಿ ರಕ್ಷಣೆ ಪೊಲೀಸರ ಮೂಲ ಕರ್ತವ್ಯ ಎಂಬುದನ್ನು ಗಮನ ದಲ್ಲಿರಿಸಿಕೊಂಡು ಕರ್ತವ್ಯ ನಿರ್ವಹಿಸಬೇ ಕೆಂದು ಕಿವಿಮಾತು ಹೇಳಿದರು.

ಮನೆ ಕಳವು, ಹೆದ್ದಾರಿ ದರೋಡೆ, ಸುಲಿಗೆ, ಕೊಲೆಯಂತಹ ಅಪರಾಧ ಪ್ರಕ ರಣಗಳು ನಡೆಯದಂತೆ ಎಚ್ಚರವಹಿಸುವ ಜತೆಗೆ ಅಪರಾಧ ಪ್ರಕರಣಗಳ ತನಿಖೆ ನಡೆಸಿ ಪತ್ತೆಗೂ ಹೆಚ್ಚು ಒತ್ತು ನೀಡುವ ಮೂಲಕ ಪೊಲೀಸರು, ಇಲಾಖೆ ಮೇಲೆ ಸಾರ್ವಜನಿಕರಿಗೆ ವಿಶ್ವಾಸ ಮೂಡುವಂತೆ ಮಾಡಿ. ಗಸ್ತು, ಇ-ಗಸ್ತು ವ್ಯವಸ್ಥೆಯನ್ನು ಸದೃಢಗೊಳಿಸಿ ‘ಜನಸ್ನೇಹಿ ಪೊಲೀಸ್’ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ಎಂದು ಪೊಲೀಸ್ ಅಧಿಕಾರಿಗಳಿಗೆ ಸಲಹೆ ನೀಡಿದರು.

ಎಸ್‍ಬಿ ಕಾನ್‍ಸ್ಟೇಬಲ್‍ಗಳ ಕಾರ್ಯ ಕೌಶಲವೃದ್ಧಿಸಿ ಸಮಾಜದಲ್ಲಿ ನಡೆಯುತ್ತಿ ರುವ ವಿದ್ಯಮಾನಗಳ ಬಗ್ಗೆ ನಿಖರ ಮಾಹಿತಿ ಸಂಗ್ರಹಿಸಿ ಸಂಭವಿಸಬಹುದಾದ ಅಹಿತ ಕರ ಘಟನೆಗಳನ್ನು ತಪ್ಪಿಸುವುದು, ಲಭ್ಯವಿ ರುವ ತಂತ್ರಜ್ಞಾನ ಬಳಸಿ ಸಂಪರ್ಕ ಜಾಲ ವೃದ್ಧಿಸಿ ತನಿಖಾ ಕಾರ್ಯ, ಆಂತರಿಕ ಭದ್ರತೆ ಹಾಗೂ ಸಮಾಜಘಾತುಕ ಶಕ್ತಿಗಳ ಶಮನಕ್ಕೆ ಕಟಿಬದ್ಧರಾಗಿ ಕರ್ತವ್ಯ ನಿರ್ವಹಿ ಸುವಂತೆ ಅವರು ನಿರ್ದೇಶಿಸಿದರು.

ಸಂಚಾರ ವ್ಯವಸ್ಥೆ ಸುಗಮಗೊಳಿಸುವುದು. ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಮೂಲಕ ಅಪಘಾತ ಗಳನ್ನು ತಪ್ಪಿಸಿ ಜನರ ಅಮೂಲ್ಯ ಪ್ರಾಣ ರಕ್ಷ ಣೆಗೆ ಆದ್ಯತೆ ನೀಡಿ ಎಂದ ಅವರು, ಸ್ಥಳೀಯ ಜನಪ್ರತಿನಿಧಿಗಳು, ಸರ್ಕಾರಿ ಸಂಸ್ಥೆಗಳ ಅಧಿ ಕಾರಿಗಳನ್ನು ವಿಶ್ವಾಸಕ್ಕೆ ಪಡೆದು ಜನಸಾಮಾ ನ್ಯರ ಆಶೋತ್ತರಗಳಿಗೆ ಪೂರಕವಾಗಿ ಪೊಲೀಸರು ಕರ್ತವ್ಯ ನಿರ್ವಹಿಸಿ ಸುಧಾರಣೆ ತರಬೇಕೆಂದೂ ಕಿವಿಮಾತು ಹೇಳಿದರು.

ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಸಿ.ಬಿ.ರಿಷ್ಯಂತ್, ಕೊಡಗು ಎಸ್ಪಿ ಸುಮನ್ ಡಿ ಪನ್ನೇಕರ್, ಚಾಮರಾಜನಗ ರದ ಆನಂದ್‍ಕುಮಾರ್, ಹಾಸನದ ಶ್ರೀನಿ ವಾಸ್‍ಗೌಡ, ಮಂಡ್ಯ ಎಸ್ಪಿ ಪರಶುರಾಂ ಹಾಗೂ ಮೈಸೂರು ನಗರ ಕಾನೂನು-ಸುವ್ಯವಸ್ಥೆ ಡಿಸಿಪಿ ಎಂ.ಮುತ್ತುರಾಜ್ ಸಭೆ ಯಲ್ಲಿ ಹಾಜರಿದ್ದರು. ಮಧ್ಯಾಹ್ನ 2 ಗಂಟೆಗೆ ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನ ಸುತ್ತೂರು ಮಠಕ್ಕೆ ಪತ್ನಿ ಶ್ರೀಮತಿ ವಿನಿತಾ ಸೂದ್‍ರೊಂದಿಗೆ ಭೇಟಿ ನೀಡಿದ ಪ್ರವೀಣ್ ಸೂದ್ ಅವರು ಶ್ರೀಗಳಿಂದ ಆಶೀರ್ವಾದ ಪಡೆದ ನಂತರ ಭೋಜನ ಸ್ವೀಕರಿಸಿ ಮಧ್ಯಾಹ್ನ 3.30ಕ್ಕೆ ಬೆಂಗಳೂರಿಗೆ ವಾಪಸ್ಸಾದರು.

Translate »