ವಿರಾಜಪೇಟೆಯಲ್ಲಿ ಕಾವೇರಿ ತೀರ್ಥ ವಿತರಣೆ
ಕೊಡಗು

ವಿರಾಜಪೇಟೆಯಲ್ಲಿ ಕಾವೇರಿ ತೀರ್ಥ ವಿತರಣೆ

October 20, 2018

ವಿರಾಜಪೇಟೆ: ತಲಕಾವೇರಿ ಯಲ್ಲಿ ತೀರ್ಥೋದ್ಭವ ನಡೆದ ಬಳಿಕ ತೀರ್ಥವನ್ನು ವಿರಾಜಪೇಟೆಯ ಹಿಂದೂ ಅಗ್ನಿದಳ ಸಂಘಟನೆಯ ಸದಸ್ಯರು ತೀರ್ಥವನ್ನು ತೆರೆದ ವಾಹನದಲ್ಲಿ ಪಟ್ಟಣದ ಹಲವಾರು ಕಡೆಗಳಲ್ಲಿ ವಿತರಿಸಿ ದರು. ಈ ಸಂದರ್ಭ ಹಿಂದೂ ಅಗ್ನಿದಳ ಸಂಘಟನೆಯ ದೆನೇಶ್ ನಾಯರ್, ವಕೀಲ ಟಿ.ಪಿ. ಕೃಷ್ಣ, ಸೋಮಣ್ಣ, ಜನಾರ್ಧನ, ಪ್ರಸನ್ನಾ, ಕಿಶನ್, ಇತರರು ಉಪಸ್ಥಿತರಿದ್ದರು.

ಕಳೆದ 23 ವರ್ಷಗಳಿಂದಲೂ ಕಾವೇರಿ ತೀರ್ಥವನ್ನು ವಿತರಿಸುತ್ತಿರುವ ‘ವಿ’ ಪ್ರೇಂಡ್ಸ್ ವಿರಾಜಪೇಟೆ ಇವರು ಪಟ್ಟಣದ ಅಪ್ಪಯ್ಯಸ್ವಾಮಿ ರಸ್ತೆಯಲ್ಲಿರುವ ಕಾವೇರಿ ಆಶ್ರಮದಲ್ಲಿ ತೀರ್ಥಕ್ಕೆ ಪೂಜೆ ಸಲ್ಲಿಸಿದ ಬಳಿಕ ಪಟ್ಟಣದ ಮುಖ್ಯ ಬೀದಿಗಳಲ್ಲಿ ಸಾರ್ವಜನಿಕರಿಗೆ ಶ್ರೀ ಕಾವೇರಮ್ಮನ ತೀರ್ಥ ವನ್ನು ವಿತರಿಸಲಾಯಿತು. ಈ ಸಂದರ್ಭ ‘ವಿ’ಪ್ರೇಂಡ್ಸ್ ಸಂಸ್ಥೆಯ ಮುಖಂಡರು ಮತ್ತು ಪದಾಧಿಕಾರಿಗಳು ಭಾಗವಹಿಸಿದ್ದರು.

Translate »