ನೆರೆ ಸಂತ್ರಸ್ತರ ನೆರವಿಗಾಗಿ ಮೈಸೂರು ಪಾಲಿಕೆ ಸದಸ್ಯರಿಂದ ದೇಣಿಗೆ ಸಂಗ್ರಹ
ಮೈಸೂರು

ನೆರೆ ಸಂತ್ರಸ್ತರ ನೆರವಿಗಾಗಿ ಮೈಸೂರು ಪಾಲಿಕೆ ಸದಸ್ಯರಿಂದ ದೇಣಿಗೆ ಸಂಗ್ರಹ

August 17, 2019

ಮೈಸೂರು,ಆ,16(ಆರ್‍ಕೆಬಿ)-ರಾಜ್ಯದಲ್ಲಿ ಉಂಟಾದ ಪ್ರವಾಹದಿಂದ ಮನೆ ಕಳೆದು ಕೊಂಡು ಕಂಗಾಲಾಗಿರುವ ನೆರೆ ಸಂತ್ರಸ್ತರ ನೆರವಿಗಾಗಿ ಮೈಸೂರು ಮಹಾನಗರ ಪಾಲಿಕೆ ಮೇಯರ್, ಸದಸ್ಯರು, ಸಿಬ್ಬಂದಿ ಸಾರ್ವಜನಿಕರಿಂದ ನಿಧಿ ಸಂಗ್ರಹಿಸಿದರು. ಮೇಯರ್ ಪುಷ್ಪಲತಾ ಜಗನ್ನಾಥ್ ನೇತೃತ್ವದಲ್ಲಿ ಎಲ್ಲಾ 65 ಮಂದಿ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿ ಪ್ರಮುಖ ರಸ್ತೆಗಳಲ್ಲಿ ಪಾದಯಾತ್ರೆ ಮೂಲಕ ನೆರೆ ಸಂತ್ರಸ್ತರಿಗೆ ನೆರವಾಗುವಂತೆ ಜನರಲ್ಲಿ ಮನವಿ ಮಾಡಿದರು. 4 ತಂಡಗಳಲ್ಲಿ ನಡೆದ ಪಾದಯಾತ್ರೆ ವೇಳೆ ಹುಂಡಿಗಳಲ್ಲಿ ಸಾರ್ವಜನಿಕರಿಂದ ಒಟ್ಟು 3.50 ಲಕ್ಷ ರೂ.ಗಳಷ್ಟು ಹಣ ಸಂಗ್ರಹವಾಯಿತು. ಅಲ್ಲದೆ ಎಲ್ಲಾ 65 ಸದಸ್ಯರು ತಲಾ 10,000ದಂತೆ 6.50 ಲಕ್ಷ ರೂ. ನೆರೆ ಸಂತ್ರಸ್ತರ ನಿಧಿಗೆ ನೆರವು ನೀಡಿದ್ದಾರೆ. ಸದಸ್ಯರು ಮತ್ತು ಸಾರ್ವ ಜನಿಕರಿಂದ ಸಂಗ್ರಹವಾದ ಸುಮಾರು 10 ಲಕ್ಷ ರೂ.ಗಳನ್ನು ನೆರೆ ಸಂತ್ರಸ್ತರ ಪರಿಹಾರ ನಿಧಿಗೆ ಕಳುಹಿಸಲಾಗುವುದು ಎಂದು ಮೇಯರ್ ಪುಷ್ಪಲತಾ ಜಗನ್ನಾಥ್ ತಿಳಿಸಿದರು.

Translate »