ಫೋನ್ ಕದ್ದಾಲಿಕೆ ಯಾರೇ ಮಾಡಿದರೂ ತಪ್ಪೇ: ತನ್ವೀರ್
ಮೈಸೂರು

ಫೋನ್ ಕದ್ದಾಲಿಕೆ ಯಾರೇ ಮಾಡಿದರೂ ತಪ್ಪೇ: ತನ್ವೀರ್

August 17, 2019

ಮೈಸೂರು, ಆ.16(ಎಂಟಿವೈ)- ಫೋನ್ ಕದ್ದಾಲಿಕೆ ಯಾರೇ ಮಾಡಿದ್ದರೂ, ಅದು ದೊಡ್ಡ ಅಪರಾಧವಾಗಲಿದೆ. ಈ ಕುರಿತಂತೆ ಸಮಗ್ರ ತನಿಖೆ ನಡೆಸುವುದು ಅಗತ್ಯ ಎಂದು ಮಾಜಿ ಸಚಿವ ತನ್ವೀರ್ ಸೇಠ್ ಅಭಿಪ್ರಾಯಪಟ್ಟಿದ್ದಾರೆ.
ಮೈಸೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಆಡಳಿತಾತ್ಮಕ ದೃಷ್ಟಿಯಿಂದ ದೇಶದ್ರೋಹಿ ಚಟುವಟಿಕೆ ಮಾಡುವವರ ಫೋನ್ ಕz್ದÁಲಿಕೆ ಸಹಜ. ಅದು ಅಧಿಕೃತವು ಹೌದು. ಆದರೆ, ಈಗಿನ ಆರೋಪದಲ್ಲಿ ಜಪ್ರತಿನಿಧಿಗಳ ಫೋನ್ ಕz್ದÁಲಿಕೆ ಆಗಿದೆ. ಇದು ದೊಡ್ಡ ಅಪರಾಧ. ಅಧಿಕಾರ ಉಳಿಸಿಕೊಳ್ಳಲು ಈ ರೀತಿಯ ಕೆಲಸ ಮಾಡೋದು ಸರಿಯಲ್ಲ. ಇದರ ಬಗ್ಗೆ ಸಮಗ್ರ ತನಿಖೆ ಆಗಲಿ. ಅದು ಮೈತ್ರಿ ಸರ್ಕಾರÀದವರಾಗಿದ್ದರೂ ಸರಿ, ನಮ್ಮ ವಿರೋಧಿಗಳೇ ಆಗಿರಬಹುದು. ಈ ವಿಚಾರದಲ್ಲಿ ಯಾರೇ ಆಗಿದ್ದರೂ ತನಿಖೆ ನಡೆಸಿ ಸತ್ಯ ಬಹಿರಂಗಪಡಿಸಬೇಕು ಎಂದು ಹೇಳಿದರು.

ಸ್ವಾತಂತ್ರ್ಯ ದಿನಾಚರಣೆಯನ್ನು ಸರಳವಾಗಿ ಆಚರಿಸೋ ಆದೇಶ ಹೊರಡಿಸಿ ರುವುದು ಖಂಡನೀಯ. ಯಾಕಾಗಿ ಈ ಆದೇಶ ಕೊಟ್ಟಿದ್ದರೋ ನನಗೆ ಗೊತ್ತಿಲ್ಲ. ಇಂತಹ ದಿನವನ್ನು ಸರಳವಾಗಿ ಆಚರಿಸೋದು ಸರಿಯಲ್ಲ. ಇದಕ್ಕೆ ನನ್ನ ಖಂಡನೆ ಇದೆ ಎಂದರು. ದಸರಾ ಆಚರಣೆಯೂ ಸರಳ ಅನ್ನೋದು ತಪ್ಪು. ದೇವರ ಕಾರ್ಯ ಸರಳವಾಗಿ ಇರಬಾರದು. ದಸರಾ ಮಹೋತ್ಸವದಿಂದ ಈ ಭಾಗದ ಜನರ ಹಾಗೂ ನಗರದ ಆರ್ಥಿಕತೆ ಅಭಿವೃದ್ಧಿ ಆಗಲಿದೆ. ಇದಕ್ಕಾಗಿ ನಾವು ಮುಖ್ಯ ಮಂತ್ರಿಗಳ ಬಳಿ ಮನವಿ ಮಾಡಿz್ದÉೀವೆ. ಸರ್ಕಾರದ ಕಾರ್ಯಕ್ರಮಗಳು ಸರಳವಾಗಿ ಇರಬಾರದು. ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ನಡೆ ಸೋಣ ಎಂದು ಹೇಳಿz್ದÉೀವೆ. ಅದಕ್ಕೆ ಮುಖ್ಯಮಂತ್ರಿ ಒಪ್ಪಿಗೆ ನೀಡಿz್ದÁರೆ ಎಂದರು.

Translate »