ಶೀಘ್ರ ಸಂಪುಟ ವಿಸ್ತರಣೆಗೆ ಮಾಜಿ ಸಚಿವ ಹೆಚ್‍ಸಿಎಂ ಆಗ್ರಹ
ಮೈಸೂರು

ಶೀಘ್ರ ಸಂಪುಟ ವಿಸ್ತರಣೆಗೆ ಮಾಜಿ ಸಚಿವ ಹೆಚ್‍ಸಿಎಂ ಆಗ್ರಹ

August 17, 2019

ಮೈಸೂರು,ಆ.16(ಎಂಟಿವೈ)-ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿ ಜನರು ಸಂಕಷ್ಟದಲ್ಲಿ ದ್ದಾರೆ. ಈ ಹಿನ್ನೆಲೆಯಲ್ಲಿ ಸಂತ್ರಸ್ತರ ನೆರವಿಗೆ ಪರಿ ಣಾಮಕಾರಿ ಹಾಗೂ ತುರ್ತಾಗಿ ಪರಿಹಾರ ಕಾಮಗಾರಿ ಕೈಗೊಳ್ಳುವ ನಿಟ್ಟಿನಲ್ಲಿ ಕೂಡಲೇ ರಾಜ್ಯ ಸಚಿವ ಸಂಪುಟ ರಚಿಸಬೇಕೆಂದು ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಇಂದಿಲ್ಲಿ ಒತ್ತಾಯಿಸಿದ್ದಾರೆ.

ಮೈಸೂರು ನಗರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದರು. ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ಬಂದು 20 ದಿನ ಗಳಾದರೂ ಅಧಿಕಾರಿಗಳ ಮೂಲಕ ಧ್ವಜಾ ರೋಹಣ ಮಾಡಿಸಿರೋದು ಕರ್ನಾಟಕದ ಇತಿಹಾಸದಲ್ಲಿ ಇದೇ ಮೊದಲು. ಮೈಸೂರು, ಕೊಡಗು, ಮಂಡ್ಯ, ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ 17 ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿ, ಲಕ್ಷಾಂತರ ಜನ ಬೀದಿ ಪಾಲಾ ಗಿದ್ದಾರೆ. ಸಾಕಷ್ಟು ಜನ-ಜಾನುವಾರುಗಳ ಸಾವು ಸಂಭವಿಸಿದೆ. ಸಾವಿರಾರು ಮನೆ ಗಳು ಕುಸಿದಿವೆ. ಹಿಂದೆಂದೂ ಕಂಡರಿ ಯದಂತಹ ಸಂಕಷ್ಟಕ್ಕೆ ಜನರು ಸಿಲುಕಿ ದ್ದಾರೆ ಎಂದು ವಿಷಾದಿಸಿದರು.

2019ರ ದಸರಾ ಮಹೋತ್ಸವ ಉದ್ಘಾ ಟನೆಗೆ ಖ್ಯಾತ ಕಾದಂಬರಿಕಾರ ಡಾ. ಎಸ್.ಎಲ್.ಭೈರಪ್ಪ ಹೆಸರು ಆಯ್ಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ಸಿ.ಮಹ ದೇವಪ್ಪ, ಈ ಬಗ್ಗೆ ನಾನೇನು ಪ್ರತಿಕ್ರಿಯೆ ನೀಡಲ್ಲ. ಮುಖ್ಯಮಂತ್ರಿಗಳ ಅಧ್ಯಕ್ಷತೆಯ ಹೈಪವರ್ ಕಮಿಟಿಯಲ್ಲಿ ಇದನ್ನು ತೀರ್ಮಾನ ಮಾಡಿದ್ದಾರೆ. ದಸರಾ ಒಂದು ನಾಡಹಬ್ಬ ಆಗಿರುವ ಕಾರಣ ನಾನು ಯಾವುದೇ ಹೇಳಿಕೆ ನೀಡಿ ಗೊಂದಲ ಉಂಟು ಮಾಡಲ್ಲ ಎಂದರು.

ಹುಣಸೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಉಪಚುನಾವಣೆಗೆ ಪಕ್ಷ ಸಂಘಟನೆ ಮಾಡಲು ಪಕ್ಷ ನನ್ನನ್ನು ಉಸ್ತುವಾರಿಯನ್ನಾಗಿ ನೇಮಿ ಸಿದೆ. ಕೋಮುವಾದಿ ಪಕ್ಷ ಬಿಜೆಪಿಯನ್ನು ಹೊರಗಿಡುವ ಹಿನ್ನೆಲೆಯಲ್ಲಿ ಪಕ್ಷ ಸಂಘ ಟನೆ ಅಗತ್ಯವಾಗಿದೆ. ಆ ಮೂಲಕ ಗೆಲುವು ದಾಖಲಿಸಬೇಕಿದೆ ಎಂದು ಹೇಳಿದರು.

Translate »