ಮೈಸೂರು,ಆ.16(ಆರ್‍ಕೆ)- ಮೈಸೂರು ರೈಲು ನಿಲ್ದಾಣದ ಒಂದನೇ ಪ್ಲಾಟ್‍ಫಾರಂನಲ್ಲಿ ಎಸ್ಕಲೇಟರ್ ಸೇವೆಯನ್ನು ಸಂಸದ ಪ್ರತಾಪ್‍ಸಿಂಹ ಅವರು ಗುರುವಾರ ಉದ್ಘಾಟಿಸಿದರು.
1ರಿಂದ 6ನೇ ಪ್ಲಾಟ್ ಫಾರಂಗಳಿಗೆ ಪ್ರಯಾ ಣಿಕರು ತೆರಳಲು ಅನು ಕೂಲವಾಗುವಂತೆ ರೈಲ್ವೆ ಇಲಾಖೆಯ ಎಸ್ಕಲೇಟರ್ ಸೌಲಭ್ಯ ವನ್ನು ಒದಗಿಸಿದ್ದು, 73ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಗುರುವಾರದಿಂದ ಈ ಸೇವೆಯನ್ನು ಆರಂಭಿಸಲಾಗಿದೆ. ಸೆನ್ಸಾರ್‍ಗಳಿರುವ ಈ ಎಸ್ಕಲೇಟರ್ ಪ್ರಯಾಣಿಕರು ಬಂದಾಗ ಸ್ವಯಂ ಚಾಲನೆಗೊಳ್ಳಲಿದೆ. ಒಂದು ವೇಳೆ ಪ್ರಯಾಣಿಕರಿಲ್ಲದಿ ದ್ದರೆ ಸ್ಥಗಿತಗೊಳ್ಳುವುದರಿಂದ ವಿದ್ಯುತ್ ಉಳಿತಾಯವಾಗಲಿದೆ. ಲಗ್ಗೇಜ್ ಹೊಂದಿರುವ ವೃದ್ಧ, ಅಂಗವಿಕಲ ಹಾಗೂ ನಿಸ್ಸಾಹಾಯಕ ಪ್ರಯಾಣಿಕರು ಪ್ಲಾಟ್‍ಫಾರಂಗಳಿಗೆ ಮೇಲು ಸೇತುವೆ ಮೂಲಕ ಹೋಗಲು ಎಸ್ಕಲೇಟರ್ ಅನುಕೂಲವಾಗುತ್ತದೆ. ಇದೇ ವೇಳೆ ಮೈಸೂರು ರೈಲು ನಿಲ್ದಾಣದ ವೆಬ್ ಸೈಟ್ www.mysururailwaystation.com ಅನ್ನು ಸಂಸದ ಪ್ರತಾಪ್ ಸಿಂಹ ಉದ್ಘಾಟಿಸಿದರು. ಪ್ರಯಾಣಿಕರ ಸ್ನೇಹಿಯಾದ ವೆಬ್‍ಸೈಟ್‍ನಲ್ಲಿ ನೈರುತ್ಯ ರೈಲ್ವೆ ಸಂಪೂರ್ಣ ಮಾಹಿತಿ ಲಭ್ಯವಿದೆ. ಮೈಸೂರು ರೈಲ್ವೆ ಸ್ಟೇಷನ್ ಒದಗಿಸಿರುವ ಸೌಲಭ್ಯಗಳು, ಮೈಸೂರು ನಗರದ ಮಾಹಿತಿ, ತುರ್ತು ಸಂಪರ್ಕ ದೂರವಾಣಿ ಸಂಖ್ಯೆಗಳು, ಇನ್ನಿತರ ಪ್ರಯಾಣಿಕರಿಗೆ ಅಗತ್ಯ ವಿರುವ ಸಂಪೂರ್ಣ ಮಾಹಿತಿಯನ್ನು ವೆಬ್‍ಸೈಟ್‍ನಲ್ಲಿ ಒದಗಿಸಲಾಗಿದೆ.
ರೈಲು ನಿಲ್ದಾಣದ ಸರ್ಕುಲೇಟಿಂಗ್ ಏರಿಯಾದಲ್ಲಿ ಸಂಸದ ಪ್ರತಾಪ್‍ಸಿಂಹ ಮಾನ್ಯುಮೆಂಟಲ್ ಧ್ವಜಾರೋಹಣ ಮಾಡಿದರು. 100 ಅಡಿ ಉದ್ದದ ತ್ರಿವರ್ಣವು ಪಾಲಿಸ್ಟಾರ್ ಬಟ್ಟೆಯಿಂದ ತಯಾರಾದ ಧ್ವಜಕ್ಕೆ ವಿಶೇಷ ರೀತಿಯ ಚಕ್ರವನ್ನು ಮುದ್ರಿಸಲಾಗಿದೆ. ಆ ವೇಳೆ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಪರ್ಣ ಗರ್ಗ್ ಹಾಗೂ ಇತರ ಅಧಿಕಾರಿಗಳು ಹಾಜರಿದ್ದರು.