10 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಜಿಟಿಡಿ ಚಾಲನೆ
ಮೈಸೂರು

10 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಜಿಟಿಡಿ ಚಾಲನೆ

August 17, 2019

ಮೈಸೂರು,ಆ.16(ಎಸ್‍ಬಿಡಿ)-ಮೈಸೂರು-ಕೆಆರ್‍ಎಸ್ ಮುಖ್ಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮಾಜಿ ಸಚಿವ, ಹಾಲಿ ಶಾಸಕ ಜಿ.ಟಿ.ದೇವೇಗೌಡರು ಚಾಲನೆ ನೀಡಿ ದರು. ರೈಲ್ವೆ ಗೇಟ್‍ನಿಂದ ಕುಸುಮ ಚಂದ್ರಶೇಖರ್ ಕಲ್ಯಾಣ ಮಂಟಪದವರೆಗೆ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ 4ನೇ ಹಂತದ ಅನುದಾನದ 10.44 ಕೋಟಿ ರೂ. ಅಂದಾಜು ಮೊತ್ತದಲ್ಲಿ ಕೈಗೊಂಡಿರುವ ರಸ್ತೆ ಅಭಿವೃದ್ಧಿ ಕಾಮಗಾರಿ ಇದಾಗಿದ್ದು, ಚಾಮುಂಡೇಶ್ವರಿ ರೈಲ್ವೆ ಬಡಾವಣೆ, ಏಕಲವ್ಯನಗರ, ಶ್ಯಾದನಹಳ್ಳಿ, ನಾಗನ ಹಳ್ಳಿ, ಲಕ್ಷ್ಮಿಪುರ ಗ್ರಾಮಸ್ಥರ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ. ಮೈಸೂರು-ಕೆಆರ್‍ಎಸ್ ನಡುವೆ ನಿತ್ಯ ನೂರಾರು ಪ್ರವಾಸಿ ವಾಹನಗಳು ಸಂಚರಿಸುವ ಈ ರಸ್ತೆ ಅಭಿವೃದ್ಧಿ ಕಾಣುತ್ತಿರುವುದರಿಂದ ಸಾರ್ವ ಜನಿಕರು ಸಂತಸ ವ್ಯಕ್ತಪಡಿಸಿದ್ದಾರೆ.

ಇದೇ ಸಂದರ್ಭದಲ್ಲಿ ಕೆಆರ್‍ಎಸ್ ಮುಖ್ಯರಸ್ತೆಯಿಂದ ಶ್ಯಾದನಹಳ್ಳಿಗೆ ಸಂಪರ್ಕಿಸುವ ರಸ್ತೆ ಅಭಿವೃದ್ಧಿಗೂ ಚಾಲನೆ ನೀಡಿ ಮಾತನಾಡಿದ ಜಿ.ಟಿ.ದೇವೇಗೌಡರು, 5054 ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ 4ನೇ ಹಂತದಲ್ಲಿ ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯ ಇಲ ವಾಲ-ಕೆ.ಆರ್.ನಗರ(ಎಸ್.ಹೆಚ್.117) ಮಾರ್ಗದ 8 ಕಿ.ಮೀ. ನಡುವೆ ಎರಡು ಹಂತದ ರಸ್ತೆ ಅಭಿವೃದ್ಧಿಗೆ 3.37 ಕೋಟಿ ರೂ., ಕೆಆರ್‍ಎಸ್ ಜಿಲ್ಲಾ ಮುಖ್ಯರಸ್ತೆ ಕೂರ್ಗಳ್ಳಿ ಕೆ.ಐ.ಡಿ.ಬಿ. ಕೈಗಾರಿಕಾ ಪ್ರದೇಶದ 5.60 ಕಿ.ಮೀ.ವರೆಗಿನ ರಸ್ತೆ ಅಭಿವೃದ್ಧಿಗೆ 10.13 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲು ಅನುಮೋದನೆ ಸಿಕ್ಕಿದೆ ಎಂದರು. ಅಲ್ಲದೆ 7.39 ಕೋಟಿ ರೂ. ವೆಚ್ಚ ದಲ್ಲಿ ಇಲವಾಲ-ಸಾಗರಕಟ್ಟೆ ರಸ್ತೆಯಿಂದ ಛತ್ರದ ಕೊಪ್ಪಲು-ಕಲ್ಲೂರು-ಎಡಹಳ್ಳಿ ಮಾರ್ಗ ಮೀನಾಕ್ಷಿಪುರ ಸಂಪರ್ಕಿಸುವ 7.30 ಕಿ.ಮೀ., 3.41 ವೆಚ್ಚದಲ್ಲಿ ಇಲ ವಾಲ, ಯಲಚಹಳ್ಳಿ, ಚಿಕ್ಕನಹಳ್ಳಿ ಮಾರ್ಗ ಮಧ್ಯೆ 3.8 ಕಿ.ಮೀ., 6.73 ಕೋಟಿ ರೂ. ವೆಚ್ಚದಲ್ಲಿ ಜಯಪುರ-ಕಡಕೊಳ ರಸ್ತೆಯಿಂದ ಮಾರ್ಬಳ್ಳಿ-ಮಾರ್ಬಳ್ಳಿಹುಂಡಿ ಮಾರ್ಗ ದೂರ ಸಂಪರ್ಕಿಸುವ 10.10 ಕಿ.ಮೀ. ರಸ್ತೆ ವರೆಗೆ ಆಯ್ದ ಭಾಗಗಳು, 4.04 ಕೋಟಿ ರೂ. ವೆಚ್ಚ ದಲ್ಲಿ ಬೆಂಗಳೂರು-ಮೈಸೂರು ರಸ್ತೆಯಿಂದ ರಮ್ಮನ ಹಳ್ಳಿ, ಹಂಚ್ಯ, ಕೆಸರೆ, ಕಾಮನಕೆರೆಹುಂಡಿ, ಕೆ.ಆರ್. ಮಿಲ್ ಮಾರ್ಗವಾಗಿ ಬಂಡೀಪುರ ರಸ್ತೆ ಸೇರುವಲ್ಲಿ 3.25 ಕಿ.ಮೀ., 5 ಕೋಟಿ ರೂ. ವೆಚ್ಚದಲ್ಲಿ ಶೆಟ್ಟನಾಯಕನ ಹಳ್ಳಿ, ಬೊಮ್ಮೇನಹಳ್ಳಿ ಮಾರ್ಗ ನಾಗವಾಲ ರಸ್ತೆ, 5 ಕೋಟಿ ರೂ. ವೆಚ್ಚದಲ್ಲಿ ದಡದಹಳ್ಳಿ, ಬ್ಯಾತಹಳ್ಳಿ ಮಾರ್ಗ ದೊಡ್ಡಕಾನ್ಯ ರಸ್ತೆಯ 9 ಕಿ.ಮೀ.ವರೆಗೆ ಆಯ್ದಭಾಗ, 5 ಕೋಟಿ ರೂ. ವೆಚ್ಚದಲ್ಲಿ ಸಿಂಧುವಳ್ಳಿ-ಕಲ್ಲಹಳ್ಳಿ ರಸ್ತೆ 7.80 ಕಿ.ಮೀ.ವರೆಗೆ ಆಯ್ದ ಭಾಗಗಳ ಅಭಿವೃದ್ಧಿ ಕಾಮ ಗಾರಿಗಳು ಮಂಜೂರಾಗಿವೆ ಎಂದರು. ಈ ಸಂದರ್ಭ ದಲ್ಲಿ ಜಿ.ಪಂ.ಸದಸ್ಯ ನಾಗನಹಳ್ಳಿ ದಿನೇಶ್, ವಿವಿಧ ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಜೆಡಿಸ್ ಮುಖಂಡ ಹೆಚ್.ಸಿ.ರಾಜು ಸೇರಿದಂತೆ ಅನೇಕ ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು.

Translate »