ಮೈಸೂರು, ಸೆ.23(ಎಸ್‍ಬಿಡಿ)- ಡಾ. ಲತಾ ರಾಜಶೇಖರ್ ಅವರು ಸರ್ವ ಧರ್ಮ ಮಹಾಕವಯತ್ರಿ ಎನಿಸಿಕೊಂಡಿ ದ್ದಾರೆ ಎಂದು ಹಿರಿಯ ಸಾಹಿತಿ ಡಾ. ಸಿ.ಪಿ.ಕೃಷ್ಣಕುಮಾರ್ ಶ್ಲಾಘಿಸಿದರು.
ಮೈಸೂರಿನ ಕೃಷ್ಣಮೂರ್ತಿಪುರಂ ಶ್ರೀರಾಮ ಮಂದಿರದಲ್ಲಿ ಹೊಯ್ಸಳ ಕನ್ನಡ ಸಂಘ ಹಾಗೂ ಸವಿಗನ್ನಡ ಪತ್ರಿಕಾ ಬಳಗದ ವತಿಯಿಂದ ಏರ್ಪಡಿಸಿದ್ದ ಮಹಾಕವಯಿತ್ರಿ ಡಾ.ಲತಾ ರಾಜಶೇಖರ್ ಅವರ 5ನೇ ಮಹಾಕಾವ್ಯ ಕುರಿತ `ಶ್ರೀ ರಾಮ ಮಹಾದರ್ಶನ-ಒಂದು ಅವ ಲೋಕನ’ ಕಾರ್ಯಕ್ರಮವನ್ನು ಉದ್ಘಾಟಿಸಿ, ಅವರು ಮಾತನಾಡಿದರು.
ಡಾ.ಲತಾ ರಾಜಶೇಖರ್ ಅವರು ಎಲ್ಲ ಧರ್ಮಗಳ ಪರಕಾಯ ಪ್ರವೇಶ ಮಾಡಿ, ಗಾಢವಾದ ಅಧ್ಯಯನ ನಡೆಸುವುದ ರೊಂದಿಗೆ ಶ್ರೀರಾಮ, ಮಹಾವೀರ, ಬುದ್ಧ, ಬಸವಣ್ಣ, ಏಸುಕ್ರಿಸ್ತರ ಕುರಿತು ಮಹಾಕಾವ್ಯಗಳನ್ನು ರಚಿಸಿದ್ದಾರೆ. ಈ ಮೂಲಕ ಅವರು ಸರ್ವಧರ್ಮ ಮಹಾ ಕವಯತ್ರಿ ಎನಿಸಿಕೊಂಡಿದ್ದಾರೆ. ಮುಂದಿನ ಮಹಾಕಾವ್ಯವನ್ನು ಪ್ರವಾದಿ ಮಹಮ್ಮದ್ ಪೈಗಂಬರ್ ಅವರನ್ನು ಕುರಿತು ರಚಿಸ ಬೇಕೆಂದು ಸಲಹೆ ನೀಡಿದರು.
ಲತಾ ರಾಜಶೇಖರ್ ಅವರು ಮಹಾ ಕಾವ್ಯಗಳ ಮೂಲಕ ಕನ್ನಡಕ್ಕೆ ಕೋಡು ಮೂಡಿಸುವುದರ ಜೊತೆಗೆ ವಿಶ್ವದಾಖಲೆ ಬರೆದಿದ್ದಾರೆ. ಜಗತ್ತಿನಲ್ಲಿ ದ್ವೇóಷ, ಅಸೂಯೆ ಪ್ರಕ್ಷುಬ್ಧವಾಗಿರುವ ಸಂದರ್ಭದಲ್ಲಿ ಸಹನೆ, ಶಾಂತಿ, ತ್ಯಾಗ, ನಿಷ್ಠೆ ಇನ್ನಿತರ ಮಾನವೀಯ ಮೌಲ್ಯಗಳನ್ನು ಸಾರಿದ ದಾರ್ಶನಿಕರ ಚಿಂತನೆಗಳನ್ನು ಕಾವ್ಯಗಳಲ್ಲಿ ಕಟ್ಟಿ, ಕನ್ನಡ ಭಾಷೆ, ಸಾಹಿತ್ಯವನ್ನು ಶ್ರೀಮಂತಗೊಳಿಸಿ ದ್ದಾರೆ. ಮಹಾಕಾವ್ಯಗಳ ಕಾಲ ಅಂತ್ಯ ವಾಯಿತು ಎನ್ನುವ ಸಂದರ್ಭದಲ್ಲಿ ರಸ ಋಷಿ ಕುವೆಂಪು ಅವರು `ಶ್ರೀರಾಮಾ ಯಣ ದರ್ಶನಂ’ ನೀಡಿದರು. ಈ ಪರಂ ಪರೆಯನ್ನು ಮುಂದುವರೆಸಿರುವ ಲತಾ ರಾಜಶೇಖರ್ ಅವರನ್ನು ಸಮಾಜ ಯಾವುದೇ ಪೂರ್ವಾಗ್ರಹ ಪೀಡಿತವಿಲ್ಲದೆ ಗುರುತಿಸಿ, ಗೌರವಿಸಬೇಕೆಂದು ಸಿಪಿಕೆ ಅಭಿ ಪ್ರಾಯಿಸಿದರು. ಕರ್ನಾಟಕ ಮುಕ್ತ ವಿಶ್ವ ವಿದ್ಯಾನಿಲಯದ ಸಹಪ್ರಾಧ್ಯಾಪಕಿ, ಗಮಕ ವಿದುಷಿ ಡಾ.ಜ್ಯೋತಿಶಂಕರ್ ವಿಶೇಷ ಉಪ ನ್ಯಾಸ ನೀಡಿದರು. ಗಮಕಿ ಅನ್ನಪೂರ್ಣ ನಾಗೇಂದ್ರ, ಶ್ರೀ ರಾಮ ಮಹಾದರ್ಶನದ ಆಯ್ದ ಭಾಗಗಳ ವಾಚನ ಮಾಡಿದರು.
ಹೊಯ್ಸಳ ಕನ್ನಡ ಸಂಘದ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ಕವಯತ್ರಿ ಡಾ. ಲತಾ ರಾಜಶೇಖರ್, ಹಿರಿಯ ಲೇಖಕ ರಾದ ಬಿ.ಆರ್.ನಾಗರತ್ನ, ಬಿ.ಪಿ.ಅಶ್ವಥ್ ನಾರಾಯಣ, ಶಿಶುತಜ್ಞ ಡಾ.ಎಚ್.ಬಿ. ರಾಜಶೇಖರ್, ಸಂಘದ ಪ್ರಧಾನ ಕಾರ್ಯದರ್ಶಿ ರಂಗನಾಥ್ ಮೈಸೂರು ಮತ್ತಿತರರು ಉಪಸ್ಥಿತರಿದ್ದರು.