ಮೈತ್ರಿ ಅಭ್ಯರ್ಥಿ ವಿಜಯಶಂಕರ್ ಪರ  ಡಾ.ಯತೀಂದ್ರ ಮತ ಯಾಚನೆ
ಮೈಸೂರು

ಮೈತ್ರಿ ಅಭ್ಯರ್ಥಿ ವಿಜಯಶಂಕರ್ ಪರ ಡಾ.ಯತೀಂದ್ರ ಮತ ಯಾಚನೆ

April 3, 2019

ಮೈಸೂರು: ಸಮಾಜದಲ್ಲಿ ಸಾಮರಸ್ಯ ಕದಡಿ ಲಾಭ ಮಾಡಿ ಕೊಳ್ಳುವ ಬಿಜೆಪಿಯನ್ನು ಕಿತ್ತೊಗೆಯಲು ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿ ಸಿ.ಹೆಚ್.ವಿಜಯಶಂಕರ್ ಅವ ರನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಬೇಕೆಂದು ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಮನವಿ ಮಾಡಿದರು.

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪರ ಮಂಗಳ ವಾರ ಚಾಮುಂಡೇಶ್ವರಿ ಕ್ಷೇತ್ರದ ಕೋಟೆ ಹುಂಡಿ, ಡಿ.ಸಾಲುಂಡಿ, ಧನಗಳ್ಳಿ, ಗೋಪಾ ಲಪುರ, ಜಯಪುರ, ಹಾರೋಹಳ್ಳಿ, ಮಾರ್ಬಳ್ಳಿ, ಸಿಂಧುವಳ್ಳಿ, ದೂರ, ಶ್ರೀರಾಂ ಪುರ ಪಂಚಾಯ್ತಿ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಮತಯಾಚಿಸಿದರು.

ಈ ವೇಳೆ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಕೇಂದ್ರದಲ್ಲಿ ಡಾ.ಮನಮೋಹನ ಸಿಂಗ್ ಪ್ರಧಾನಿ ಯಾಗಿದ್ದಾಗ 72 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದ್ದರು. ರಾಜ್ಯದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ರೈತರ 50 ಸಾವಿರದವರೆಗಿನ ಸಾಲ ಮನ್ನಾ ಮಾಡಿದ್ದರು. ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು 43 ಸಾವಿರ ಕೋಟಿ ರೂ. ರೈತರ ಸಾಲ ಮನ್ನಾ ಮಾಡಿ ದ್ದಾರೆ. ಆದರೆ ಕೇಂದ್ರದಲ್ಲಿ 5 ವರ್ಷ ಅಧಿಕಾರ ನಡೆಸಿದ ಬಿಜೆಪಿ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಪ್ರಣಾಳಿಕೆಯಲ್ಲಿ ನೀಡಲಾಗಿದ್ದ ಭರವಸೆಗಳನ್ನು ಈಡೇರಿಸಿಲ್ಲ. ಸ್ಮಾರ್ಟ್ ಸಿಟಿ ಯೋಜನೆಗೆ ಮೈಸೂರು ಪರಿಗಣಿಸಿಲ್ಲ. ಕಪ್ಪು ಹಣ ತಂದಿಲ್ಲ. ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಹಾಕಿಲ್ಲ. ಬಿಜೆಪಿ ಸ್ವಾರ್ಥಕ್ಕಾಗಿ ಐಟಿ ರೈಡ್ ಮಾಡಿಸಿ ಹೆದರಿಸುವ ತಂತ್ರಗಾರಿಕೆ ಅನುಸರಿಸುತ್ತಿದ್ದಾರೆ. ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಅಣಕಿಸಿ, ಭಯದ ವಾತಾ ವರಣಕ್ಕೆ ಜನರನ್ನು ತಳ್ಳುವ ಬಿಜೆಪಿ ಸರ್ಕಾರ ತೊಲಗಬೇಕು. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ರಾಹುಲ್‍ಗಾಂಧಿ ಪ್ರಧಾನಿಯಾಗುತ್ತಾರೆ. ಬಡವರಿಗೆ ತಿಂಗಳಿಗೆ 6 ಸಾವಿರದಂತೆ ವರ್ಷಕ್ಕೆ 72 ಸಾವಿರ ರೂ. ಅವರ ಖಾತೆಗೆ ಹಾಕುತ್ತಾರೆ. ಮಹಿಳೆಯರಿಗೆ ಶೇ. 33 ಮೀಸಲಾತಿ ನೀಡುತ್ತಾರೆ ಎಂದು ತಿಳಿಸಿದರು.

ಮೈಸೂರು-ಕೊಡಗು ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಸಿ.ಹೆಚ್.ವಿಜಯಶಂಕರ್ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇ ಗೌಡ, ಸಚಿವ ಸಾ.ರಾ.ಮಹೇಶ್ ಸಂಪೂರ್ಣ ಸಹಕಾರ ನೀಡುತ್ತಾರೆ. ಈಗಾಗಲೇ ಸಚಿವದ್ವಯರೊಂದಿಗೆ ಚರ್ಚಿಸಲಾಗಿದ್ದು, ಪ್ರಚಾರಕ್ಕೆ ಆಹ್ವಾನ ನೀಡಲಾಗಿದೆ. ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಮನೆಮನೆಗೆ ತಿಳಿಸಿ, ಜೆಡಿಎಸ್ ಪಕ್ಷದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರಳ ಸಜ್ಜನರಾದ ಕಾಂಗ್ರೆಸ್ ಅಭ್ಯರ್ಥಿ ಸಿ.ಹೆಚ್. ವಿಜಯ ಶಂಕರ್ ಅವರನ್ನು ಹೆಚ್ಚು ಮತಗಳ ಅಂತರ ದಿಂದ ಗೆಲ್ಲಿಸುವ ಮೂಲಕ ಯಾವುದೇ ಅಭಿವೃದ್ಧಿ ಕಾರ್ಯ ಮಾಡದೇ, ಮಾತಿನ ಮೂಲಕ ಜನರನ್ನು ದಿಕ್ಕು ತಪ್ಪಿಸುತ್ತಿರುವ ಸಂಸದ ಪ್ರತಾಪ್ ಸಿಂಹ ಸೋಲಿಸ ಬೇಕೆಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಜಿ.ಪಂ. ಮಾಜಿ ಅಧ್ಯಕ್ಷ ಕೆ.ಮರೀಗೌಡ, ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಸಿ.ಎನ್. ಮಂಜೇ ಗೌಡ, ಎಪಿಎಂಸಿ ಅಧ್ಯಕ್ಷ ಹಾಗೂ ರಾಜ್ಯ ಕೃಷಿ ಉತ್ಪನ್ನಮಾರುಕಟ್ಟೆ ಸಮಿತಿಯ ಉಪ ನಿರ್ದೇಶಕ ಕೆ. ಪ್ರಭುಸ್ವಾಮಿ, ಮಂಜುಳಾ ಮಾನಸ, ನಂದಿನಿ ಚಂದ್ರಶೇಖರ್, ಗುರು ಪಾದಸ್ವಾಮಿ, ಜೆ.ಜೆ.ಆನಂದ, ತಾ.ಪಂ. ಸದಸ್ಯರಾದ ಸಿ.ಎಂ. ಸಿದ್ದರಾಮೇಗೌಡ, ಮಾರ್ಬಳ್ಳಿ ಕುಮಾರ್, ಕೋಟೆಹುಂಡಿ ಮಹದೇವ, ಗ್ರಾ.ಪಂ. ಅಧ್ಯಕ್ಷರಾದ ಬಸವ ರಾಜು, ಮಲ್ಲೇಶ, ಗೋಪಾಲಪುರ ಡೈರಿ ಅಧ್ಯಕ್ಷ ಗುರುಸ್ವಾಮಿ, ಕೆಂಚಪ್ಪ, ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಮಾಕಿ ಮಹದೇವ್, ಸೋಮಣ್ಣ, ಡಿ. ಸ್ವಾಮಿ, ಲಿಂಗರಾಜು, ಧನಗಳ್ಳಿ ಬಸವರಾಜು, ಟ್ಯೂಬ್ ಮಹದೇವ್, ಜಯರಾಮೇಗೌಡ ಪಾಲ್ಗೊಂಡಿದ್ದರು.

Translate »