ಯಾವ ಪಕ್ಷದವರ ಜೊತೆಗೂ ಪ್ರಚಾರಕ್ಕೆ  ಹೋಗಲ್ಲ: ಯದುವೀರ್ ಸ್ಪಷ್ಟನೆ
ಮೈಸೂರು

ಯಾವ ಪಕ್ಷದವರ ಜೊತೆಗೂ ಪ್ರಚಾರಕ್ಕೆ ಹೋಗಲ್ಲ: ಯದುವೀರ್ ಸ್ಪಷ್ಟನೆ

April 3, 2019

ಮೈಸೂರು: ಚುನಾವಣೆಯಲ್ಲಿ ಯಾವ ಪಕ್ಷದವರ ಜೊತೆಯೂ ಪ್ರಚಾರಕ್ಕೆ ಹೋಗುವುದಿಲ್ಲ ಎಂದು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸ್ಪಷ್ಟಪಡಿಸಿದ್ದಾರೆ.

ಮೈಸೂರಿನಲ್ಲಿ ಮಂಗಳವಾರ ತಮ್ಮನ್ನು ಭೇಟಿಯಾದ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ನಾನು ಯಾವುದೇ ಪಕ್ಷದ ಪರ ಪ್ರಚಾರಕ್ಕೆ ಹೋಗುವುದಿಲ್ಲ. ಅರಮನೆಗೆ ಬರುವವರಿಗೆ ಸ್ವಾಗತವಿದೆ. ಯಾರು ಅಭಿವೃದ್ಧಿ ಪರ ಕೆಲಸ ಮಾಡುತ್ತಾರೋ ಅವರಿಗೆ ಅರಮನೆಯ ಬೆಂಬಲವಿರಲಿದೆ ಎಂದು ಹೇಳಿದರು.

ರಿಯಲ್ ಸ್ಟಾರ್ ಉಪೇಂದ್ರ ಭೇಟಿ ಕುರಿತು ಮಾತನಾಡಿದ ಅವರು, ಅದೊಂದು ಸೌಜನ್ಯದ ಭೇಟಿಯಷ್ಟೆ. ಅವರು ಪ್ರಜಾಕೀಯ ಅಂತ ಹೊಸ ಪಕ್ಷ ಮಾಡಿದ್ದಾರೆ. ಅದರ ಕುರಿತು ಮಾಹಿತಿ ನೀಡಲು ಬಂದಿದ್ದರು. ಅವರ ಪರಿಚಯ ಒಂದು ವರ್ಷದಿಂದಲೂ ಇದೆ. ಪಕ್ಷದಲ್ಲಿರುವ ಹೊಸ ಕಾನ್ಸೆಪ್ಟ್ ಬಗ್ಗೆ ತಿಳಿಸಲು ಬಂದಿದ್ದರು ಎಂದರು.

ನಿಮ್ಮ ಕುಟುಂಬಕ್ಕೆ ಪರಿಚಿತರಾದ ನಟ ಅಂಬರೀಶ್ ಅವರ ಪತ್ನಿ ಸುಮಲತಾ ಚುನಾ ವಣೆಗೆ ನಿಂತಿದ್ದಾರೆ. ಅವರಿಗೆ ನಿಮ್ಮ ಬೆಂಬಲವಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅಂಬರೀಶ್ ತುಂಬಾ ಬಹಳ ವರ್ಷದಿಂದ ಪರಿಚಯ. ಯಾರಿಗೆ ಮತ ಹಾಕಬೇಕೆಂಬುದನ್ನು ಮಂಡ್ಯ ಜನತೆ ತೀರ್ಮಾನಿಸುತ್ತಾರೆ ಎಂದು ಹೇಳಿದರು.

Translate »