ಪೌರ ಕಾರ್ಮಿಕ ಸಮವಸ್ತ್ರ ಧರಿಸಿ ಸ್ವಚ್ಛತಾ ಕಾರ್ಯದ  ಮೂಲಕ ಶಾಸಕ ರಾಮದಾಸ್ ಮತ ಯಾಚನೆ
ಮೈಸೂರು

ಪೌರ ಕಾರ್ಮಿಕ ಸಮವಸ್ತ್ರ ಧರಿಸಿ ಸ್ವಚ್ಛತಾ ಕಾರ್ಯದ ಮೂಲಕ ಶಾಸಕ ರಾಮದಾಸ್ ಮತ ಯಾಚನೆ

April 3, 2019

ಮೈಸೂರು: ಕೃಷ್ಣರಾಜ ಕ್ಷೇತ್ರ ಶಾಸಕ ಎಸ್.ಎ.ರಾಮದಾಸ್ ಅವರು ಮಂಗಳವಾರ ಪೌರ ಕಾರ್ಮಿಕರ ಸಮ ವಸ್ತ್ರ ಧರಿಸಿ 62ನೇ ವಾರ್ಡ್ ವ್ಯಾಪ್ತಿಯ ದೇವರಾಜ ಅರಸು ಕಾಲೋನಿ ಪ್ರದೇಶದಲ್ಲಿ ಕಸ ಗುಡಿಸುವ ಮೂಲಕ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಪರ ಮತ ಯಾಚನೆ ಮಾಡಿದರು.

ವಿಶ್ವದಲ್ಲಿ ಪೌರ ಕಾರ್ಮಿಕರ ಪಾದ ವನ್ನು ತೊಳೆದ ಏಕೈಕ ಪ್ರಧಾನಿ ನರೇಂದ್ರ ಮೋದಿ. ಅವರ ಕೈ ಬಲಪಡಿಸಲು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿ, ಸಂಸದ ಪ್ರತಾಪಸಿಂಹ ಅವರಿಗೆ ಮತ ನೀಡುವ ಮೂಲಕ ಅವ ರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.

ಬಳಿಕ ಮಾತನಾಡಿದ ಅವರು, ಮತ್ತೊಂದು ಬಾರಿ ಮೋದಿ ಎಂಬ ಪರಿ ಕಲ್ಪನೆಯಲ್ಲಿ ಮತಯಾಚನೆ ಮಾಡು ತ್ತಿದ್ದೇವೆ. ಸಾಮಾನ್ಯ ಕಾರ್ಯಕರ್ತರು ಪ್ರಧಾನಿಯಾಗಿ ಮೋದಿಯವರೇ ಆಗಬೇಕು ಎಂಬ ಭಾವನೆಯಿಂದ ಸಕ್ರಿಯ ವಾಗಿ ಪ್ರಚಾರದಲ್ಲಿ ಭಾಗವಹಿಸುತ್ತಿದ್ದಾರೆ. ಐದು ವರ್ಷದ ಹಿಂದೆ ಮೋದಿಯವರು ಕೊಟ್ಟಂತಹ ಸ್ವಚ್ಛ ಭಾರತ ಅಭಿಯಾನ ಕಾರ್ಯಕ್ರಮ ಇಂದು ಪ್ರತಿಯೊಬ್ಬ ಜನ ಸಾಮಾನ್ಯರ ಕಾರ್ಯವಾಗಿ ಬದಲಾಗಿದೆ ಎಂದರು.

ಕೈಯ್ಯಲ್ಲಿ ಪೊರಕೆಯನ್ನು ಹಿಡಿದಿರು ವುದನ್ನು ಕಂಡು ನಿಷ್ಠುರವಾಗಿ ಕಾಣುತ್ತಿ ದ್ದವರಿಗೆ ಪ್ರಧಾನಿ ಮೋದಿಯವರು ಸ್ವತಃ ಪೊರಕೆ ಹಿಡಿದು ಸ್ವಚ್ಛಗೊಳಿಸಿ, ಪೌರ ಕಾರ್ಮಿಕರ ಘನತೆಯನ್ನು ಹೆಚ್ಚಿಸಿದ್ದಾರೆ. ಚಿಕ್ಕ ವಯಸ್ಸಿನ ಮಕ್ಕಳಿಂದ ಹಿಡಿದು ಎಲ್ಲರೂ ಸ್ವಚ್ಛತೆಯನ್ನು ಕಾಪಾಡಬೇಕು ಎಂಬ ಭಾವನೆಯನ್ನು ಮೂಡಿಸಿದ್ದಾರೆ. ಪೌರ ಕಾರ್ಮಿಕ ದಂಪತಿಯ ಕಾಲು ತೊಳೆದು ಸ್ವಚ್ಛತೆ ಮಾಡುವುದು ದೇವರ ಕೆಲಸ ಎಂದು ತೋರಿಸಿಕೊಟ್ಟಿದ್ದಾರೆ ಎಂದು ಬಣ್ಣಿಸಿದರು.

ಈ ಭಾಗದ ಜನರು 25 ವರ್ಷದಿಂದ ನನ್ನನ್ನು ಮನೆಯ ಮಗನಂತೆ ಕಾಣುತ್ತಿದ್ದು, ಕಳೆದ ಮೂರು ಬಾರಿ ಚುನಾ ವಣೆಯಲ್ಲಿಯೂ ತಪ್ಪದೆ ನನಗೆ ಮತ ನೀಡಿದ್ದಾರೆ. ನನ್ನ ಮತ್ತು ಇಲ್ಲಿನ ನಿವಾಸಿಗಳ ನಡುವೆ ವಿಶೇಷ ಬಾಂಧವ್ಯ ಇದೆ ಎಂದರು.

ಬೇರೆ ಪಕ್ಷದವರು ಜಾತಿ, ಹಣ ಮತ್ತು ಹೆಂಡದ ಆಸೆ ತೊರಿಸಿ, ಮತದಾರರನ್ನು ವಂಚಿಸುತ್ತಿದ್ದಾರೆ. ಆದರೆ, ಇಲ್ಲಿನ ಜನರು ಅದಕ್ಕೆ ವಿರುದ್ಧವಾಗಿ ದೇಶದ ಅಭಿವೃದ್ಧಿ ಕಡೆ ಗಮನ ನೀಡಿ ಬಿಜೆಪಿಯನ್ನು ಬೆಂಬ ಲಿಸಿದ್ದಾರೆ. ಹಾಗೆಯೇ ಇಲ್ಲಿನ ಮಕ್ಕಳು ಉನ್ನತ ಅಧಿಕಾರಿಗಳಾಗಬೇಕು ಎಂಬುದು ನನ್ನ ಕನಸಾಗಿದೆ ಎಂದರು.

ಕಳೆದ ನಗರಪಾಲಿಕೆ ಚುನಾವಣೆಯ ನಂತರ ಇಲ್ಲಿ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಗುಂಡಿ ಬಿದ್ದಿದ್ದ ರಸ್ತೆಯನ್ನು ಡಾಂಬರೀಕರಣ ಮಾಡುವುದರಿಂದ ಹಿಡಿದು ಎಲ್ಲಾ ಸಮಸ್ಯೆಗಳನ್ನು ಬಗೆಹರಿಸ ಲಾಗಿದೆ. ಆದರೆ, ಇನ್ನಷ್ಟು ಅಭಿವೃದ್ಧಿ ಕಾರ್ಯ ಗಳಿದ್ದು, ಮುಂದಿನ ದಿನಗಳಲ್ಲಿ ಅವು ಗಳನ್ನು ಬಗೆಹರಿಸಲಾಗುತ್ತದೆ ಎಂದರು.

ಎಕ್ಸೈಲ್ ಪ್ಲಾಂಟ್‍ನಿಂದ ಬರುತ್ತಿದ್ದ ವಾಸನೆ ಈಗ ಕಡಿಮೆಯಾಗಿದೆ. ಇದನ್ನು ಶಾಶ್ವತವಾಗಿ ತೆರವುಗೊಳಿಸಲು ಸ್ವಚ್ಛ ಭಾರತ ಅಭಿಯಾನದಡಿ ಅಗತ್ಯ ಕ್ರಮ ಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಹಂತ ಹಂತವಾಗಿ ಪ್ರಗತಿಯನ್ನು ಸಾಧಿಸ ಲಾಗುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕನಸಾದ ಮನೆ ಇಲ್ಲದ ವರಿಗೆ ಸೂರನ್ನು ಕಲ್ಪಿಸುವ ನಿಟ್ಟಿನಲ್ಲಿ ಈಗಾಗಲೇ 114 ಮನೆಗಳನ್ನು ಕಟ್ಟಿಸಿ ಕೊಡಲಾಗಿದೆ ಎಂದರು.

ಇದೇ ವೇಳೆ ಪೌರಕಾರ್ಮಿಕರಾದ ಕಮ ಲಮ್ಮ ಅವರು ನಾವು ಪ್ರಧಾನ ಮಂತ್ರಿಗಳ ಪರವಾಗಿ ಮತಯಾಚನೆ ಮಾಡುತ್ತೇವೆ, ಮತ್ತೊಮ್ಮೆ ಮೋದಿಯವರೇ ಪ್ರಧಾನಿ ಗಳಾಗಬೇಕು, ಅವರು ದೇಶದಲ್ಲಿ ಪೌರ ಕಾರ್ಮಿಕರಿಗೆ ವಿಶೇಷ ಸ್ಥಾನ ಕಲ್ಪಿಸು ವುದರೊಂದಿಗೆ ಪಾದ ತೊಳೆದ ಏಕೈಕ ಪ್ರಧಾನಿ ನರೇಂದ್ರ ಮೋದಿ ಎಂದು ತಿಳಿಸಿದರು.
ಅಭಿವೃದ್ಧಿಯಾಗುತ್ತಿದೆ: ಕಳೆದ ನಗರ ಪಾಲಿಕೆ ಚುನಾವಣೆಗೂ ಮುನ್ನಾ ದೇವ ರಾಜ ಅರಸು ಕಾಲೋನಿಯಲ್ಲಿ ಗುಂಡಿ ಬಿದ್ದ ರಸ್ತೆ ಸೇರಿದಂತೆ ಹಲವಾರು ಸಮಸ್ಯೆ ಗಳಿದ್ದವು. ಚುನಾವಣೆಯ ನಂತರ ಕುಡಿ ಯುವ ನೀರಿನ ಪೂರೈಕೆ, ಶಾಲೆ, ಚರಂಡಿ ವ್ಯವಸ್ಥೆ ಸೇರಿದಂತೆ ಹಲವಾರು ಬಗೆ ಹರಿಸಲಾಗಿದೆ ಎಂದು ಸ್ಥಳೀಯರು ‘ಮೈಸೂರು ಮಿತ್ರ’ನಿಗೆ ತಿಳಿಸಿದರು.

ನಗರಪಾಲಿಕೆ ಸದಸ್ಯರಾದ ಶಾಂತಮ್ಮ ವಡಿವೇಲು, ನೂರ್ ಫಾತಿಮಾ, ಮುಖಂಡ ರಾದ ವಿದ್ಯಾ ಅರಸ್, ನಾಗೇಂದ್ರ, ಕಲಿಯ ಮೂರ್ತಿ, ಮುರುಗೇಶ್, ಪಾಂಡು, ಸುರೇಶ್, ಮೀನಾಕ್ಷಿ, ಜಯಲಕ್ಷ್ಮೀ, ನಂಜುಂಡಯ್ಯ, ರಾಧಾ, ಸುಮಲತಾ, ಸೌಮ್ಯ, ಕೇಶವ, ಯೋಗೇಶ್ವರಿ, ಸತೀಶ್, ರುದ್ರೇಶ್ ಮತ್ತಿತರರು ಉಪಸ್ಥಿತರಿದ್ದರು.

Translate »