ಡ್ರಂಕ್ ಅಂಡ್ ಡ್ರೈವ್ ದಂಡ ಕಡಿಮೆಯಾಗಲ್ಲ
ಮೈಸೂರು

ಡ್ರಂಕ್ ಅಂಡ್ ಡ್ರೈವ್ ದಂಡ ಕಡಿಮೆಯಾಗಲ್ಲ

September 15, 2019

ನವದೆಹಲಿ,ಸೆ.14-ಮದ್ಯ ಸೇವಿಸಿ ವಾಹನ ಚಾಲನೆ ಮಾಡಿದರೆ ವಿಧಿಸುವ ದಂಡದ ಮೊತ್ತವನ್ನು ಕಡಿಮೆ ಮಾಡದಂತೆ ಸಾರ್ವಜನಿಕರಿಂದ ಅಭಿಪ್ರಾಯ ಬಂದಿದೆ. ಈ ಬಗ್ಗೆ ಚರ್ಚೆ ನಡೆಸಿದ್ದೇವೆ ಎಂದು ಸಾರಿಗೆ ಸಚಿವ, ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ. ದೆಹಲಿಯಲ್ಲಿ ಮಾತನಾ ಡಿದ ಅವರು, ಸಂಚಾರ ನಿಯಮ ಉಲ್ಲಂಘಿಸುವ ವಾಹನ ಚಾಲಕರು ಹಾಗೂ ಸವಾರರ ಮೇಲೆ ವಿಧಿಸುವ ದಂಡವನ್ನು ಕಡಿಮೆ ಮಾಡಲಾಗುವುದು. ಈ ವಿಚಾರವಾಗಿ ಪ್ರಕ್ರಿಯೆ ನಡೆದಿದ್ದು, 3 ದಿನಗಳಲ್ಲಿ ಎಲ್ಲವೂ ಸರಿ ಹೋಗುತ್ತದೆ. ಬಳಿಕ ಸರ್ಕಾರದಿಂದ ಅಧಿಕೃತ ಆದೇಶ ಹೊರಡಿಸುತ್ತೇವೆ ಎಂದರು. ಗುಜರಾತ್ ಮಾದರಿಯಲ್ಲಿ ರಾಜ್ಯದಲ್ಲಿಯೂ ದಂಡ ಕಡಿಮೆ ಮಾಡಲಾಗುವುದು. ಈ ಸಂಬಂಧ ಗುಜರಾತ್ ಸರ್ಕಾ ರವು ಶುಕ್ರವಾರ ಅಧಿಸೂಚನೆ ಹೊರಡಿಸಿದೆ. ಆ ಆದೇಶವನ್ನು ತರಿಸಿಕೊಂಡಿದ್ದೇವೆ. ಅದರ ಮೇಲೆ ಕಾನೂನು ಇಲಾಖೆ ಸಲಹೆ ಪಡೆಯಲಾಗುವುದು. ಆದರೆ ಡ್ರಂಕ್ ಅಂಡ್ ಡ್ರೈವ್‍ಗೆ ದಂಡ ಕಡಿಮೆ ಮಾಡದಿರುವ ಬಗ್ಗೆ ಕೂಡ ಚರ್ಚೆ ಮಾಡುತ್ತೇವೆ. ಕುಡಿದು ಗಾಡಿ ಚಲಾಯಿಸುವವರ ಬಗ್ಗೆ ಕರುಣೆ ಯಾಕೆ ಎಂದು ಪ್ರಶಿಸಿದ್ದಾರೆ. ಮದ್ಯ ಸೇವಿಸಿ ವಾಹನ ಓಡಿಸುತ್ತಿದ್ದ ಸವಾರರು ಹಾಗೂ ಚಾಲಕರಿಗೆ ಈ ಹಿಂದೆ 2,500 ರೂ. ದಂಡ ವಿಧಿಸಲಾಗುತ್ತಿತ್ತು. ಆದರೆ ಸೆ.4ರಿಂದ ಜಾರಿಗೆ ಬಂದ ಆದೇಶದ ಪ್ರಕಾರ ಈ ದಂಡದಲ್ಲಿ 7,500 ರೂ. ಹೆಚ್ಚಳವಾಗಿದೆ. ಹೀಗಾಗಿ ಡ್ರಂಕ್ ಅಂಡ್ ಡ್ರೈವ್ ಕೇಸ್‍ನಲ್ಲಿ ಸಿಕ್ಕಿಬಿದ್ದ ಚಾಲಕರು ಹಾಗೂ ಸವಾರರು ಬರೋಬ್ಬರಿ 10 ಸಾವಿರ ರೂ. ದಂಡ ಪಾವತಿಸಬೇಕಾಗುತ್ತದೆ.

Translate »