ಜಠರ ಕರುಳು ಚಿಕಿತ್ಸೆಗೆ ಎಂಡೋಸ್ಕೋಪಿ ಸರಳ ವಿಧಾನ: ಅಪೋಲೊ ಬಿಜಿಎಸ್ ಆಸ್ಪತ್ರೆಯಲ್ಲಿ ಜಠರ-ಕರುಳಿನ ಶಸ್ತ್ರಚಿಕಿತ್ಸೆ ಕಾರ್ಯಾಗಾರದಲ್ಲಿ ತಜ್ಞರ ಅಭಿಮತ
ಮೈಸೂರು

ಜಠರ ಕರುಳು ಚಿಕಿತ್ಸೆಗೆ ಎಂಡೋಸ್ಕೋಪಿ ಸರಳ ವಿಧಾನ: ಅಪೋಲೊ ಬಿಜಿಎಸ್ ಆಸ್ಪತ್ರೆಯಲ್ಲಿ ಜಠರ-ಕರುಳಿನ ಶಸ್ತ್ರಚಿಕಿತ್ಸೆ ಕಾರ್ಯಾಗಾರದಲ್ಲಿ ತಜ್ಞರ ಅಭಿಮತ

February 24, 2020

ಮೈಸೂರು, ಫೆ.23(ಆರ್‍ಕೆಬಿ)- ದೇಹದ ಅತಿ ಪ್ರಮುಖ ಭಾಗವಾದ ಜಠರ, ಕರುಳು ಸಮಸ್ಯೆಗಳ ಚಿಕಿತ್ಸಾ ಪದ್ಧತಿಯಲ್ಲಿ ಎಂಡೋ ಸ್ಕೋಪಿ ಕ್ರಾಂತಿಕಾರಕ ವಿಧಾನವಾಗಿದ್ದು, ಆ ಕ್ಷೇತ್ರದಲ್ಲಿ ಇತ್ತೀಚೆಗೆ ಆದ ಸುಧಾರಣೆ ಗಳ ಬಗ್ಗೆ ತಿಳಿಸಿಕೊಡುವ ನಿಟ್ಟಿನಲ್ಲಿ ಅಪೋಲೊ ಬಿಜಿಎಸ್ ಆಸ್ಪತ್ರೆ ಆಯೋಜಿಸಿದ್ದ 2 ದಿನಗಳ ಕಾರ್ಯಾಗಾರ ಯಶಸ್ವಿಯಾಗಿದೆ ಎಂದು ಏಷ್ಯನ್ ಗ್ಯಾಸ್ಟ್ರೋಎಂಟರಾಲಜಿ ಸಂಸ್ಥೆಯ ಮುಖ್ಯಸ್ಥ ಡಾ.ಡಿ.ನಾಗೇಶ್ವರರೆಡ್ಡಿ ತಿಳಿಸಿದರು.

ನಗರದ ಖಾಸಗಿ ಹೊಟೇಲೊಂದರಲ್ಲಿ ಆಯೋಜಿಸಿದ್ದ ಕಾರ್ಯಾಗಾರದ 2ನೇ ದಿನವಾದ ಭಾನುವಾರ ಸುದ್ದಿಗಾರರೊ ಡನೆ ಮಾತನಾಡಿದ ಅವರು, ನಮ್ಮಲ್ಲಿನ ತಜ್ಞರಿಗೆ ಜಠರ ಕರುಳಿನ ಸಮಸ್ಯೆಗಳ ನಿವಾ ರಣೆಗೆ ಎಂಡೋಸ್ಕೋಪಿ ಬಳಕೆ, ಆ ಕ್ಷೇತ್ರ ದಲ್ಲಿ ಆದ ಇತ್ತೀಚಿನ ಕ್ರಾಂತಿಕಾರಕ ವಿಧಾನ, ಆವಿಷ್ಕಾರಗಳ ಬಗ್ಗೆ ತಿಳಿಸಿಕೊಡುವ ಕೆಲಸ ವನ್ನು ಇಲ್ಲಿ ಮಾಡಲಾಗಿದೆ. ಈ ವೇಳೆ 25 ಶಸ್ತ್ರಚಿಕಿತ್ಸೆಗಳ ನೇರ ಪ್ರಸಾರವೂ ನಡೆದಿದೆ ಎಂದರು.

ಈ ಹಿಂದೆಲ್ಲ ಜಠರ ಕರುಳಿನ ಕಾಯಿ ಲೆಗೆ ಕಾರಣ ಪತ್ತೆ, ಚಿಕಿತ್ಸೆಗಾಗಿ ದೊಡ್ಡ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿತ್ತು. ಬದಲಾಗಿ ಈಗ ಎಂಡೋಸ್ಕೋಪಿ ವಿಧಾನದಿಂದಲೇ ಚಿಕಿತ್ಸೆ ನಡೆಸುವುದು ಸಾಧ್ಯವಾಗಿದೆ. ಈ ಸುಧಾರಣಾ ಕ್ರಮದಿಂದಾಗಿ ಮೊದಲಿ ನಂತೆ ರೋಗಿ ಆಸ್ಪತ್ರೆಗೆ ವಾರಗಟ್ಟಲೆ ದಾಖ ಲಾಗುವುದು, ದೊಡ್ಡ ಶಸ್ತ್ರಚಿಕಿತ್ಸೆಗೆ ಒಳಗಾ ಗುವುದು ತಪ್ಪಿದೆ. ಅತಿ ಕಡಿಮೆ ವೆಚ್ಚದಲ್ಲಿ ಎಂಡೋಸ್ಕೋಪಿ ಮೂಲಕ ಜಠರ ಕರುಳಿನ ಕಾಯಿಲೆಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

ದೇಶದಲ್ಲಿ ಮಧುಮೇಹ ಹಾಗೂ ಹೃದಯ ಸಂಬಂಧಿ ರೋಗಗಳ ತಪಾಸಣೆ ಗಳಿಗೆ ಹೆಚ್ಚು ಗಮನ ನೀಡುತ್ತ ಜಠರ ಕರು ಳಿನ ಆರೋಗ್ಯ ತಪಾಸಣೆ ವಿಭಾಗವನ್ನೇ ನಿರ್ಲಕ್ಷಿಸಲಾಗುತ್ತಿದೆ. ಆದರೆ ದೇಹದ ಇತರೆ ಅನಾರೋಗ್ಯಗಳಿಗೆ ಈ ಜಠರ ಕರುಳಿನ ಅನಾರೋಗ್ಯವೇ ಮುಖ್ಯ ಕಾರಣ ಎಂಬ ಹಿನ್ನೆಲೆಯಲ್ಲಿ ಈ ತಪಾಸಣೆಗೆ ಆಗಾಗ್ಗೆ ಒಳಗಾಗುವ ಮೂಲಕ ಅತಿ ಸಾಮಾನ್ಯ ವಾದ ಜಠರ ಕರುಳಿನ ಕ್ಯಾನ್ಸರ್ ಮೊದಲಾ ದವನ್ನು ಮೊದಲೇ ಪತ್ತೆ ಹಚ್ಚಿ ಗುಣಮುಖ ರಾಗಬಹುದಾಗಿದೆ ಎಂದು ವಿವರಿಸಿದರು.

ಜಪಾನಿನ ಜಠರ ಕರುಳಿನ ತಜ್ಞ ಡಾ. ಕಾಝುವಾ ಹಾರಾ ಮಾತನಾಡಿ, ನಮ್ಮ ದೇಶದಲ್ಲಿ 40 ವರ್ಷ ತುಂಬಿದೊಡನೆ ಜಠರ ಕರುಳಿನ ವೈದ್ಯಕೀಯ ತಪಾಸಣೆ ಅತಿ ಸಾಮಾನ್ಯ. ಜಠರ ಕರುಳಿನಲ್ಲಿ ಸಣ್ಣ ನೋವು ಕಂಡು ಬಂದರೂ ತಕ್ಷಣ ತಪಾ ಸಣೆ ಬರುತ್ತಾರೆ. ಭಾರತದಲ್ಲಿ ನೋವು ಹೆಚ್ಚಾದಾಗ ಮಾತ್ರ ಬರುತ್ತಾರೆ. ಹೀಗೆ ವಿಳಂಬವಾಗುವುದರಿಂದ ಅಷ್ಟರಲ್ಲಾಗಲೇ ದುರ್ಮಾಂಸದ ಅತಿ ದೊಡ್ಡ ಗಡ್ಡೆಯೇ ಬೆಳೆದಿರುತ್ತದೆ. ಪರಿಸ್ಥಿತಿ ಕೈಮೀರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಅಪೋಲೊ ಬಿಜಿಎಸ್ ಆಸ್ಪತ್ರೆಯ ಮುಖ್ಯ ಗ್ಯಾಸ್ಟ್ರೋ ಎಂಟರಾಲಜಿಸ್ಟ್ ಡಾ.ರಾಜಕುಮಾರ್ ಪಿ.ವಾದ್ವಾ, ಉಪಾಧ್ಯಕ್ಷ ಮತ್ತು ಮೈಸೂರು ಘಟಕ ಮುಖ್ಯಸ್ಥ ಎನ್.ಜಿ.ಭರತೇಶರೆಡ್ಡಿ ಸುದ್ದಿಗೋಷ್ಠಿಯಲ್ಲಿದ್ದರು.

Translate »