ಅರಸು ಸಮುದಾಯದ ಅಭಿವೃದ್ಧಿಗೆ ಶೈಕ್ಷಣಿಕ ಸಂಸ್ಥೆ ಸ್ಥಾಪನೆ
ಮೈಸೂರು

ಅರಸು ಸಮುದಾಯದ ಅಭಿವೃದ್ಧಿಗೆ ಶೈಕ್ಷಣಿಕ ಸಂಸ್ಥೆ ಸ್ಥಾಪನೆ

December 18, 2018

ಮೈಸೂರು: ನಮ್ಮ ಸಮುದಾಯದ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ಶೈಕ್ಷಣಿಕ ಸಂಸ್ಥೆ ಸ್ಥಾಪನೆ ಮಾಡಲು ಮುಂದಾಗುವುದು ಅಗತ್ಯ ಎಂದು ಮೈಸೂರು ಮೂಲದ ಅಮೆರಿಕಾ ಉದ್ಯಮಿ ಡಾ.ಬಿ.ಎನ್.ಬಹದ್ದೂರ್ ಇಂದಿಲ್ಲಿ ಅಭಿಪ್ರಾಯಪಟ್ಟರು.

ಮೈಸೂರಿನ ನಂಜರಾಜ ಬಹದ್ದೂರ್ ಎಜುಕೇಷನ್ ಛಾರಿಟಿ ಅಂಡ್ ಬೋರ್ಡಿಂಗ್ ಹೋಂ ಮತ್ತು ಶ್ರೀರಾಮ ಸೇವಾ ಅರಸು ಮಂಡಳಿಯ ಶತಮಾ ನೋತ್ಸವ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಸಮು ದಾಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿ ಅವರ ಶಿಕ್ಷಣಕ್ಕೆ ನೆರವಾಗು ತ್ತಿರುವ ನಂಜರಾಜ ಬಹದ್ದೂರ್ ಎಜುಕೇ ಷನ್ ಛಾರಿಟಿ ಅಂಡ್ ಬೋರ್ಡಿಂಗ್ ಹೋಂ ಇಷ್ಟಕ್ಕೇ ಸೀಮಿತವಾಗದೆ ಪ್ರಾಥಮಿಕ ಮತ್ತು ಮಾಧ್ಯಮ ಶಿಕ್ಷಣ ಸಂಸ್ಥೆ ಸ್ಥಾಪಿಸ ಬೇಕು. ಇದರಿಂದ ಅರಸು ಜನಾಂಗ ಹಾಗೂ ಇತರೆ ಸಮುದಾಯದವರಿಗೂ ಉದ್ಯೋಗ ಸೃಷ್ಟಿ ಮಾಡಬಹುದಾಗಿದೆ ಎಂದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಮಳವಳ್ಳಿ ತಾಲೂಕು ಹೊನ್ನನಾಯಕನ ಹಳ್ಳಿ ಮಂಟೇಸ್ವಾಮಿ ಮಠದ ವರ್ಚಸ್ವಿ ಸಿದ್ದ ಲಿಂಗಾರಾಜೇ ಅರಸ್ ಅವರು ಸ್ಮರಣ ಸಂಚಿಕೆ ಯನ್ನು ಬಿಡುಗಡೆ ಮಾಡಿ ಮಾತನಾಡಿ, ಪೂರ್ವಜರು ನಮ್ಮ ಸಮಾಜದ ಬೆಳವಣಿ ಗೆಗೆ ಅಪಾರವಾಗಿ ಶ್ರಮಿಸಿದ್ದಾರೆ. ಶ್ರೀಮತಿ ಲಿಂಗರಾಜಮ್ಮಣ್ಣಿ ಅವರು ನಂಜರಾಜ ಬಹ ದ್ದೂರ್ ನೆನಪಿನಲ್ಲಿ 100 ವರ್ಷದ ಹಿಂದೆ ಬಿತ್ತಿದ ಬೀಜ ಇಂದು ಮರವಾಗಿ ಬೆಳೆದು ಸಮುದಾಯದ ನೂರಾರು ಮಕ್ಕಳಿಗೆ ನೆರಳಾ ಗಿದೆ. ಅಲ್ಪಸಂಖ್ಯಾತರಾದ ನಾವು ಅಭಿವೃದ್ಧಿ ಕಾಣಬೇಕಾದರೆ ನಮ್ಮಲ್ಲಿರುವ ಯಾವುದೇ ಭಿನ್ನಾಭಿಪ್ರಾಯಗಳನ್ನು ತೊರೆದು ನಮ್ಮೆಲ್ಲ ಸಂಘಟನೆಗಳು ಒಗ್ಗಟ್ಟಿನಿಂದ ಸೇರಿದಾಗ ಅದು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.

ನಮ್ಮ ಸಮುದಾಯದ ಯುವಕರು ಹೆಚ್ಚಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗ ವಹಿಸಲು ಅನುಕೂಲವಾಗುವಂತೆ `ಅಧ್ಯ ಯನ ಕೇಂದ್ರ’ ತೆರೆಯಲು ಮನಸ್ಸು ಮಾಡ ಬೇಕು. ಈ ಮೂಲಕ ನಮ್ಮ ಸಮು ದಾಯದ ಯುವಕರು ಉನ್ನತ ಹುದ್ದೆ ಗಳನ್ನು ಅಲಂಕರಿಸಲು ಅವಕಾಶ ಕಲ್ಪಿಸ ಬೇಕು ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ರಾಜ ವಂಶಸ್ಥ ಯದುವೀರ್ ಕೃಷ್ಣದತ್ತ ಚಾಮ ರಾಜ ಒಡೆಯರ್ ಅವರು ಸಂಸ್ಥೆಯ ಆವರಣದಲ್ಲಿ ನಿರ್ಮಿಸಲಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಪುತ್ಥಳಿಯನ್ನು ಅನಾ ವರಣಗೊಳಿಸಿದರು. ಇದೇ ಸಂದರ್ಭ ದಲ್ಲಿ ಪ್ರಿನ್ಸ್ ನಂಜರಾಜ ಬಹದ್ದೂರ್, ಶ್ರೀಮತಿ ಲಿಂಗಾಜಮ್ಮಣ್ಣಿ ಪುತ್ಥಳಿಯ ಅನಾ ವರಣ ಮಾಡಲಾಯಿತು. ನಿರ್ಮಿಸಲು ಉದ್ದೇಶಿಸಿರುವ ಶತಮಾನೋತ್ಸವ ಭವ ನದ ನಕ್ಷೆಯನ್ನು ರಾಣಿ ದಾಕ್ಷಾಯಿಣಿ ಬಹ ದ್ದೂರ್ ಅನಾವರಣ ಮಾಡಿದರು. ಇದೇ ವೇಳೆ ಡಾ.ಬಿ.ಎನ್.ಬಹದ್ದೂರ್ ಅವರು ಛಾರಿಟಿ ಫಂಡ್ ಬೋರ್ಡಿಂಗ್ ಹೋಂಗೆ 50 ಲಕ್ಷ ರೂ. ದೇಣಿಗೆ ನೀಡಿದರು. ಶ್ರೀರಾಮ ಸೇವಾ ಅರಸು ಮಂಡಳಿ ಅಧ್ಯಕ್ಷ ಲಕ್ಷ್ಮಿಕಾಂತ್ ರಾಜೇ ಅರಸ್ ಅಧ್ಯ ಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಸಂಗೀತ ವಿದ್ವಾಂಸ ಆರ್.ಎಸ್.ನಂದ ಕುಮಾರ್ ಸೇರಿದಂತೆ ಹಲವು ಸಾಧಕ ರನ್ನು ಸನ್ಮಾನಿಸಲಾಯಿತು.

ಮೆರವಣಿಗೆ: ಇದಕ್ಕೂ ಮುನ್ನ ಮೈಸೂ ರಿನ ನಂಜುಮಳಿಗೆ ವೃತ್ತದ ಬಳಿಯ ಫೈವ್ ಲೈಟ್ ವೃತ್ತದಲ್ಲಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿ, ಸಾರೋಟಿನಲ್ಲಿ ಅತಿಥಿಗಳನ್ನು ಮೆರವಣಿಗೆ ಮೂಲಕ ಕಾರ್ಯಕ್ರಮ ಸ್ಥಳಕ್ಕೆ ಕರೆತರಲಾ ಯಿತು. ವಿವಿಧ ಜಾನಪದ ಕಲಾ ತಂಡ ಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.

Translate »