ಮುಡಾ ಆಸ್ತಿ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿ ವಂಚನೆ: ಮೂವರ ವಿರುದ್ಧ ದೂರು ದಾಖಲು
ಮೈಸೂರು

ಮುಡಾ ಆಸ್ತಿ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿ ವಂಚನೆ: ಮೂವರ ವಿರುದ್ಧ ದೂರು ದಾಖಲು

June 15, 2019

ಮೈಸೂರು: ಮುಡಾ ಸ್ವತ್ತಿನ ನಕಲಿ ದಾಖಲೆ ಸೃಷ್ಟಿಸಿ, ಲಕ್ಷಾಂತರ ರೂ. ಹಣ ಪಡೆದು ಮೋಸ ಮಾಡಿದ್ದ ಮೂವರ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿ ವ್ಯಕ್ತಿಯೊಬ್ಬರು ಲಕ್ಷ್ಮೀಪುರಂ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮೈಸೂರು ನಿವಾಸಿಗಳಾದ ಅನಿತಾ, ಅವರ ಪತಿ ದೇವೇಂದ್ರ, ಕೃಷ್ಣಮೂರ್ತಿ ನಕಲಿ ದಾಖಲೆ ಸೃಷ್ಟಿಸಿದ ಆರೋಪ ಎದುರಿಸುತ್ತಿ ರುವವರು. ಪ್ರಕರಣ ಕುರಿತು ಎಂಬುವವರು ಚಂದನ್ ದೂರು ದಾಖಲಿಸಿದ್ದಾರೆ. ಜೂ.13ರಂದು ಚಂದನ್ ಅವರ ಸಂಬಂಧಿ ಕೃಷ್ಣ ಮೂರ್ತಿ, ಒಂದೂವರೆ ವರ್ಷದ ಹಿಂದೆ ಅನಿತಾ ಅವರನ್ನು ಇವರು ಮುಡಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಮುಡಾದಲ್ಲಿ ಡಿಫಾಲ್ಟರ್ ಆದ ಸ್ವತ್ತುಗಳನ್ನು ಇ-ಹರಾಜಿನಲ್ಲಿ ಕಡಿಮೆ ಬೆಲೆಗೆ ಕೊಡಿಸುತ್ತಾರೆ ಎಂದು ಚಂದನ್‍ಗೆ ಪರಿಚಯಿಸಿದ್ದಾರೆ. ಈ ವೇಳೆ ತಾನು (ಕೃಷ್ಣ ಮೂರ್ತಿ) ಕೂಡ ಅನಿತಾ ಅವರ ನೆರವಿನೊಂದಿಗೆ ಮುಡಾದಿಂದ ಮನೆ ತೆಗೆದುಕೊಂಡಿರುವುದಾಗಿ ನಂಬಿಸಿದ್ದಾರೆ. ಇವರ ಮಾತನ್ನು ನಂಬಿದ ದೂರದಾರ ಚಂದನ್ ಮೈಸೂರಲ್ಲಿ ಮನೆ ಹೊಂದುವ ಆಸೆಯಿಂದ 73 ಲಕ್ಷ ರೂ. ಹಣವನ್ನು ನಗದು ಮತ್ತು ಚೆಕ್ ಮೂಲಕ ಅನಿತಾ, ಆಕೆ ಪತಿ ದೇವೇಂದ್ರ ಹೆಸರಿಗೆ ವರ್ಗಾವಣೆ ಮಾಡಿದ್ದಾರೆ.

ಚಂದನ್‍ನಿಂದ ಹಣ ಪಡೆದ ಅನಿತಾ ಮತ್ತು ಈಕೆ ಪತಿ ದೇವೇಂದ್ರ ಮುಡಾ ಸ್ವತ್ತಿನ ನಕಲಿ ಮಂಜೂರಾತಿ ಪತ್ರಗಳನ್ನು ತೋರಿಸಿ, ಸದ್ಯ ದಲ್ಲೇ ಮುಡಾದಲ್ಲಿ ಸ್ವತ್ತಿನ ನೊಂದಣಿ ಮಾಡಿಕೊಡುವುದಾಗಿ ತಿಳಿಸಿ, ನಕಲಿ ದಾಖಲೆಗಳನ್ನು ಚಂದನ್ ಬಳಿ ಕೊಟ್ಟಿದ್ದಾರೆ. ಈ ದಾಖಲೆ ಗಳ ಪೂರ್ವಪರ ವಿಚಾರಿಸಿದಾಗ ನಕಲಿ ಎಂಬುದು ಗೊತ್ತಾಗಿದೆ.

ಜೂ.7ರಂದು ನಕಲಿ ದಾಖಲೆಗಳ ಬಗ್ಗೆ ಚಂದನ್, ಅನಿತಾ, ಆಕೆ ಪತಿ ದೇವೇಂದ್ರ, ಸಂಬಂಧಿ ಕೃಷ್ಣಮೂರ್ತಿಯನ್ನು ವಿಚಾರಿಸಿದಾಗ ನಾವು ನೀಡಿರುವ ಮುಡಾ ಸ್ವತ್ತಿನ ದಾಖಲೆಗಳು ನಕಲಿ, ಈಗೇನು? ಎಂದು ಧಮ್ಕಿ ಹಾಕಿರುವ ಬಗ್ಗೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಸಂಬಂಧ ನಕಲಿ ದಾಖಲೆ ಸೃಷ್ಟಿಸಿರುವ ಮೂವರ ವಿರುದ್ದ ಲಕ್ಷ್ಮೀಪುರಂ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಕಾನೂನು ಕ್ರಮಕೈಗೊಳ್ಳುವಂತೆ ಪೊಲೀಸರಲ್ಲಿ ಮನವಿ ಮಾಡಿದ್ದಾರೆ.

Translate »