ಮೈಸೂರು ಜಿಲ್ಲೆಯಲ್ಲಿ ಅಂತಿಮವಾಗಿ 25.09 ಲಕ್ಷ ಮತದಾರರು
ಮೈಸೂರು

ಮೈಸೂರು ಜಿಲ್ಲೆಯಲ್ಲಿ ಅಂತಿಮವಾಗಿ 25.09 ಲಕ್ಷ ಮತದಾರರು

April 4, 2019

ಮೈಸೂರು: ತ್ವರಿತ ಪರಿಷ್ಕರಣೆ ನಂತರ ಮೈಸೂರು ಜಿಲ್ಲೆಯಲ್ಲಿ ಈಗ ಒಟ್ಟು 25,09,232 ಮತದಾರರು ಅಂತಿಮ ಪಟ್ಟಿಯಲ್ಲಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆದ ಮೈಸೂರು ಡಿಸಿ ಅಭಿರಾಂ ಜಿ.ಶಂಕರ್ ತಿಳಿಸಿದ್ದಾರೆ.

ಅಭ್ಯರ್ಥಿಗಳು ಉಮೇದುವಾರಿಕೆ ಹಿಂಪ ಡೆಯುವ ಕಡೇ ದಿನವಾದ ಮಾರ್ಚ್ 29 ರವರೆಗೂ ಮತದಾರರ ಪಟ್ಟಿ ಪರಿಷ್ಕ ರಣೆ ಪ್ರಕ್ರಿಯೆ ನಡೆಸಲಾಗಿದ್ದು, ಹಾಗಾಗಿ ಮೈಸೂರು ಜಿಲ್ಲೆಯಲ್ಲಿ 30,000ಕ್ಕೂ ಅಧಿಕ ಮಂದಿ ಮತದಾರರ ಪಟ್ಟಿಯಲ್ಲಿ ಹೊಸದಾಗಿ ಅಂತಿಮ ಘಳಿಗೆಯಲ್ಲಿ ಸೇರ್ಪಡೆ ಯಾಗಿದ್ದಾರೆ ಎಂದು ತಿಳಿಸಿದರು.4

ಮಾರ್ಚ್ 29 ರಂದೇ ರಾಜ್ಯದ ಮೊದಲ ಹಂತದ ಲೋಕಸಭಾ ಚುನಾವಣಾ ಮತದಾರರ ಪರಿಷ್ಕರಣೆಯ ಸಾಫ್ಟ್‍ವೇರ್ ಬಂದ್ ಆಗಿದ್ದು, ತದ ನಂತರ ಮತದಾರರ ಹೆಸರು ಸೇರಿಸಲು ಅಥವಾ ತೆಗೆದು ಹಾಕಲು ಸಾಧ್ಯವಿಲ್ಲ. ಆದರೆ ಸಾರ್ವಜನಿಕರು ಅರ್ಜಿ ತಂದರೆ ಸ್ವೀಕರಿಸುತ್ತೇವೆಯೇ ಹೊರತು, ಈ ಹಂತದಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರಿಸುವುದಿಲ್ಲ. ಚುನಾವಣೆ ನಂತರವಷ್ಟೇ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಇದೀಗ ಜಿಲ್ಲೆಯಲ್ಲಿ 12.55 ಲಕ್ಷ ಪುರುಷರು, 12.53 ಲಕ್ಷ ಮಹಿಳೆಯರು ಹಾಗೂ 188 ಮಂದಿ ಇತರರು ಮತದಾರರ ಪಟ್ಟಿಯಲ್ಲಿದ್ದು, ಏಪ್ರಿಲ್ 18 ರಂದು ನಡೆಯಲಿರುವ ಲೋಕಸಭಾ ಚುನಾ ವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಲು ಅರ್ಹರಾಗಿದ್ದಾರೆ ಎಂದು ನುಡಿದರು. ಆ ಪೈಕಿ 18 ರಿಂದ 19 ವರ್ಷ ವಯಸ್ಸಿನ 45,842 ಯುವ ಮತದಾರರು ಹಾಗೂ 19,922 ಮಂದಿ ವಿಕಲಚೇತನರು ಈ ಭಾರಿ ಮತ ಚಲಾಯಿಸುವರು. ಈಗಾಗಲೇ ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯ ಸ್ಥಗಿತಗೊಂಡಿರುವುದರಿಂದ ಅಂತಿಮ ಪಟ್ಟಿ ಸಿದ್ಧಗೊಳಿಸಲಾಗಿದೆ. ನಿನ್ನೆ (ಮಂಗಳವಾರ)ಯಿಂದ ಮತದಾರರ ಗುರುತಿನ ಚೀಟಿ(ಎಪಿಕ್ ಕಾರ್ಡ್)ಗಳನ್ನು ಮುದ್ರಿಸುವ ಕಾರ್ಯ ಆರಂಭವಾಗಿದೆ ಎಂದು ಅಭಿರಾಂ ಜಿ.ಶಂಕರ್ ತಿಳಿಸಿದರು.

ಮುದ್ರಿತವಾಗುವ ಎಪಿಕ್ ಕಾರ್ಡುಗಳನ್ನು ನಾಳೆ(ಏ.4)ಯಿಂದ ಮತದಾರರ ಮನೆಗಳಿಗೆ ತಲುಪಿಸಲಾಗುವುದು. 15 ಬೂತಗಳಿಗೊಬ್ಬರಂತೆ ಸೆಕ್ಟರ್ ಆಫೀಸರ್‍ಗಳನ್ನು ನೇಮಿಸಲಾಗಿದ್ದು, ಬೂತ್ ಮಟ್ಟದ ಅಧಿಕಾರಿ (ಬಿಎಲ್‍ಓ)ಗಳ ಮೂಲಕ ಮನೆ ಮನೆಗೆ ಎಪಿಕ್ ಕಾರ್ಡ್‍ಗಳನ್ನು ತಲುಪಿಸಲು ವ್ಯವಸ್ಥೆ ಮಾಡಲಾಗಿದೆ.

ಒಂದು ವೇಳೆ ಎಪಿಕ್ ಕಾರ್ಡ್ ತಲುಪದಿದ್ದರೂ ಮತದಾರರ ಪಟ್ಟಿಯಲ್ಲಿ ಹೆಸರಿರು ವವರು, ಇತರ ಯಾವುದಾದರೂ ಭಾವಚಿತ್ರವಿರುವ ಗುರುತಿನ ಚೀಟಿಯೊಂದಿಗೆ ತೆರಳಿ ಮತ ಚಲಾಯಿಸಬಹುದಾಗಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

ಮತದಾನ ಪವಿತ್ರ ಕಾರ್ಯವಾಗಿದ್ದು, ಎಲ್ಲರೂ ತಪ್ಪದೇ ಮತಗಟ್ಟೆಗಳಿಗೆ ತೆರಳಿ ತಮ್ಮ ಹಕ್ಕು ಚಲಾಯಿಸುವ ಮೂಲಕ ಪ್ರಜಾ ಪ್ರಭುತ್ವವನ್ನು ಗಟ್ಟಿಗೊಳಿಸಬೇಕೆಂದು ಅಭಿರಾಂ ಜಿ.ಶಂಕರ್ ಮನವಿ ಮಾಡಿದರು.

Translate »