ಕರೀಘಟ್ಟಕ್ಕೆ ಕಿಡಿಗೇಡಿಗಳ ಬೆಂಕಿ; ಅಪಾರ ಅರಣ್ಯ, ಹುಲ್ಲುಗಾವಲು ಭಸ್ಮ
ಮಂಡ್ಯ

ಕರೀಘಟ್ಟಕ್ಕೆ ಕಿಡಿಗೇಡಿಗಳ ಬೆಂಕಿ; ಅಪಾರ ಅರಣ್ಯ, ಹುಲ್ಲುಗಾವಲು ಭಸ್ಮ

January 17, 2019

ಮಂಡ್ಯ: ಪ್ರಸಿದ್ಧ ಪ್ರವಾಸಿತಾಣ ಕರೀಘಟ್ಟಕ್ಕೆ ಕಿಡಿಗೇಡಿಗಳು ಬೆಂಕಿ ಹೊತ್ತಿಸಿದ್ದು, ಹತ್ತಾರು ಎಕರೆ ಅರಣ್ಯ ಭೂಮಿ ಮರಗಳ ಸಹಿತ ಬೆಂಕಿಯ ಜ್ವಾಲೆಗೆ ಭಸ್ಮವಾಗಿದೆ.

ಶ್ರೀರಂಗಪಟ್ಟಣ ತಾಲೂಕಿನ ಶ್ರೀನಿವಾಸ ಅಗ್ರಹಾರ ಗ್ರಾಮದ ಸಮೀಪದ ಕರೀಘಟ್ಟ ದಲ್ಲಿ ಎತ್ತರವಾಗಿ ಹುಲ್ಲು ಬೆಳೆದಿದ್ದು, ಒಣಗಿ ದ್ದವು. ಶ್ರೀನಿವಾಸ ದೇವಾಲಯದ ಮುಂಭಾಗದ ಈ ಬೆಟ್ಟಕ್ಕೆ ಚಿನ್ನನಾಯಕ ನಹಳ್ಳಿ ಭಾಗದಿಂದ ಕಿಡಿಗೇಡಿಗಳು ಬೆಂಕಿ ಹೊತ್ತಿಸಿದ್ದು, ವಾತಾವರಣದಲ್ಲಿ ಗಾಳಿ ಬೀಸಿದಂತೆಲ್ಲಾ ಬೆಂಕಿಯ ಜ್ವಾಲೆ ಇತರೆಡೆಗೂ ಹಬ್ಬಿ ಬೆಂಕಿಗೆ ಹತ್ತಾರು ಎಕರೆ ಬೆಟ್ಟದ ಪ್ರದೇಶ, ಮರಗಿಡಗಳು ಸೇರಿದಂತೆ ಬೆಟ್ಟದಲ್ಲಿದ್ದ ಸೂಕ್ಷ್ಮ ಜೀವಿಗಳು ಬೆಂಕಿಗಾಹುತಿ ಯಾಗಿವೆ. ಬೆಳಿಗ್ಗೆ ಸುಮಾರು 10ರ ವೇಳೆಗೆ ಬೆಂಕಿ ಕಾಣಿಸಿಕೊಂಡಿದ್ದು, ಅರಣ್ಯ ಇಲಾಖೆಯ ಇಲಾಖೆ ಸಿಬ್ಬಂದಿಗಳೇ ಬೆಟ್ಟ ದಲ್ಲಿ ಹೊತ್ತಿದ್ದ ಬೆಂಕಿ ನಂದಿಸಿದ್ದಾರೆ.

Translate »