ಈಜಲು ತೆರಳಿದ್ದ ವಿದ್ಯಾರ್ಥಿ ನೀರುಪಾಲು
ಮಂಡ್ಯ

ಈಜಲು ತೆರಳಿದ್ದ ವಿದ್ಯಾರ್ಥಿ ನೀರುಪಾಲು

January 17, 2019

ಶ್ರೀರಂಗಪಟ್ಟಣ: ತನ್ನ ಸಹಪಾಠಿಗಳೊಂದಿಗೆ ಈಜಲು ಕಾವೇರಿ ನದಿಗಿಳಿದ ವಿದ್ಯಾರ್ಥಿಯೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಮೂವರು ಪ್ರಾಣಾಪಾಯ ದಿಂದ ಪಾರಾಗಿರುವ ಘಟನೆ ತಾಲೂಕಿನ ಕಾರೇಕುರ ಗ್ರಾಮದ ಬಳಿ ಇಂದು ಮಧ್ಯಾಹ್ನ ನಡೆದಿದೆ.

ಮೈಸೂರಿನ ರಘುರಾಮ್ ಅವರ ಪುತ್ರ ಹೇಮಂತ್ (21) ಮೃತ ವಿದ್ಯಾರ್ಥಿಯಾಗಿದ್ದು, ಈತನ ಸಹಪಾಠಿ ಗಳಾದ ಕೌಶಿಕ್, ಮನೋಜ್ ಹಾಗೂ ಲೋಕರಂಜನ್ ಪ್ರಾಣಾ ಪಾಯದಿಂದ ಪಾರಾಗಿದ್ದಾರೆ. ಈ ನಾಲ್ವರು ಮೈಸೂರು ತಾಲೂಕಿನ ಬೆಳವಾಡಿಯ ಎಂಐಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ 3ನೇ ವರ್ಷದ ಬಿ.ಇ ವ್ಯಾಸಂಗ ಮಾಡುತ್ತಿದ್ದರು. ಮೃತ ಹೇಮಂತ್ ತನ್ನ ಸಹಪಾಠಿಗಳಾದ ಕಾರೇಕುರ ಗ್ರಾಮದ ನಿರ್ಜನ ಪ್ರದೇಶದ ದ್ವೀಪಕ್ಕೆ 2 ಬೈಕ್‍ನಲ್ಲಿ ಬಂದಿದ್ದು, ಮಧ್ಯಾಹ್ನ ಈಜಲು ಕಾವೇರಿ ನದಿಗೆ ಇಳಿದಿದ್ದಾರೆ. ಈ ವೇಳೆ 4 ಜನರು ನೀರಿನ ಸುಳಿಗೆ ಸಿಲುಕಿದ್ದು, ಕೌಶಿಕ್, ಮನೋಜ್ ಹಾಗೂ ಲೋಕರಂಜನ್ ಮೂವರು ಮಾತ್ರ ಬದುಕುಳಿದು ಹೊರ ಬಂದಿದ್ದಾರೆ. ಆದರೆ ಹೇಮಂತ್ ನೀರನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಶ್ರೀರಂಗಪಟ್ಟಣ ಟೌನ್ ಠಾಣೆ ಪೋಲಿಸರು ಹಾಗೂ ಆಗ್ನಿಶಾಮಕ ಸಿಬ್ಬಂದಿ ಮತ್ತು ಸ್ಥಳಿಯ ಗ್ರಾಮಸ್ಥರು ನದಿಯಲ್ಲಿ ಹುಡಕಾಟ ನಡೆಸಿ ಶವ ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂಬಂಧ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »