ಜಿಲ್ಲಾದ್ಯಂತ ಮಕರ ಸಂಕ್ರಾಂತಿ ಸಂಭ್ರಮ
ಮಂಡ್ಯ

ಜಿಲ್ಲಾದ್ಯಂತ ಮಕರ ಸಂಕ್ರಾಂತಿ ಸಂಭ್ರಮ

January 17, 2019

ಮಂಡ್ಯ: ನಗರ ಸೇರಿದಂತೆ ಜಿಲ್ಲಾದ್ಯಂತ ಮಕರ ಸಂಕ್ರಮಣ ಹಬ್ಬವನ್ನು ಮಂಗಳ ವಾರ ಸಡಗರ- ಸಂಭ್ರಮದಿಂದ ಆಚರಿಸಲಾಯಿತು.

ಮಂಡ್ಯ, ಮದ್ದೂರು, ಮಳವಳ್ಳಿ, ಕೆ.ಆರ್.ಪೇಟೆ, ನಾಗಮಂಗಲ, ಪಾಂಡವಪುರ, ಶ್ರೀರಂಗಪಟ್ಟಣ ತಾಲೂಕು ಕೇಂದ್ರಗಳು ಸೇರಿದಂತೆ ಹಳ್ಳಿ ಹಳ್ಳಿಗ ಳಲ್ಲೂ ರಾಸುಗಳನ್ನು ಕಿಚ್ಚು ಹಾಯಿಸುವ ಜೊತೆಗೆ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಸಂಕ್ರಾಂತಿ ಆಚರಿಸಲಾಯಿತು. ಮಹಿಳೆಯರು, ಹೆಣ್ಣು ಮಕ್ಕಳು ನೆರೆಯವರು ಹಾಗೂ ಬಂಧುಗಳಿಗೆ ಎಳ್ಳು-ಬೆಲ್ಲ, ಕಬ್ಬು ಹಂಚಿ ಸಂಭ್ರಮಿಸಿದರು. ಹಬ್ಬದ ಅಂಗವಾಗಿ ದೇವಾಲಯ ಗಳಲ್ಲಿ ವಿಶೇಷ ಪೂಜಾ ಕೈಂಕರ್ಯ ಜರುಗಿದವು.

ಮಂಡ್ಯ ವರದಿ: ಮಂಡ್ಯ ನಗರದ ಆನೆಕೆರೆ ಬೀದಿ ಸುತ್ತಮುತ್ತಲಿನ ಜನತೆ ಚಿಕ್ಕಮಂಡ್ಯ ರಸ್ತೆ, ಹೊಳಲು ರಸ್ತೆ, ಕಲ್ಲಹಳ್ಳಿ ರಸ್ತೆ, ಹೊಸಹಳ್ಳಿ ಸುತ್ತಮುತ್ತಲಿನವರು ಹನಿಯಂಬಾಡಿ ರಸ್ತೆ, ಕಾರಸ ವಾಡಿ ರಸ್ತೆ, ಗುತ್ತಲು ಸುತ್ತಮುತ್ತಲಿನ ಜನತೆ ಕೆ.ಎಂ.ದೊಡ್ಡಿ, ಮದ್ದೂರು ಮಾರ್ಗದ ರಸ್ತೆಗಳಲ್ಲಿ ಕಿಚ್ಚು ಹಾಕಿ ರಾಸುಗಳನ್ನು ಹಾಯಿಸುವ ಮೂಲಕ ಸಂಕ್ರಾಂತಿ ಆಚರಿಸಿದರು. ಇದಕ್ಕೂ ಮುನ್ನ ರಾಸುಗಳನ್ನು ಸ್ವಚ್ಛಗೊಳಿಸಿ ಬಣ್ಣ ಬಣ್ಣಗಳಿಂದ ಸಿಂಗರಿಸಿ ಕಿಚ್ಚು ಹಾಯಿಸಿ ಸಂಭ್ರಮಿಸಿದರೆ, ಹೆಣ್ಣು ಮಕ್ಕಳು ಮತ್ತು ಮಹಿಳೆಯರು ಎಳ್ಳು-ಬೆಲ್ಲ ಬೀರುವುದರ ಜೊತೆಗೆ ಗೋವುಗಳನ್ನು ಪೂಜಿಸಿ, ವಿವಿಧ ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸುತ್ತಿದ್ದದು ಕಂಡು ಬಂತು.

ಶ್ರೀರಂಗಪಟ್ಟಣದಲ್ಲಿ ಲಕ್ಷ ದೀಪೋತ್ಸವ: ಮಕರ ಸಂಕ್ರಾತಿ ಹಿನ್ನೆಲೆ ಶ್ರೀರಂಗನಾಥನ ಸನ್ನಿಧಿಯಲ್ಲಿ ಲಕ್ಷ ದೀಪೋತ್ಸವ ಜರುಗಿತು. ಸಾವಿರಾರು ಭಕ್ತರು ದೀಪಗಳನ್ನು ಬೆಳಗಿ, ದೇವರ ದರ್ಶನ ಪಡೆದು ಪುಳಕಿತರಾದರು. ಹಣತೆಗಳಿಂದ ಅಲಂಕಾರದಲ್ಲಿ ದೇವಾಲಯದ ಆವರಣ ಕಂಗೊಳಿಸಿತು. ಲಕ್ಷ ದೀಪೋತ್ಸವಕ್ಕೆ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಸಾರ್ವಜನಿಕರು ಎರಡು ದಿನಗಳಿಂದಲೇ ಸಿದ್ಧತೆ ಮಾಡಿಕೊಂಡಿದ್ದರು. ವಿದ್ಯಾರ್ಥಿಗಳು ದೀಪ ಗಳಿಗೆ ಎಣ್ಣೆ ಹಾಕಿ ಜೋಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಇನ್ನು ದೀಪೋತ್ಸವದಂದು ಭಕ್ತರು ತಾವೇ ದೀಪ ಹಚ್ಚಿ ಸಂಭ್ರಮಿಸಿದರು. ವಿವಿಧ ಬಗೆಯ ಚಿತ್ರಗಳ ರೂಪದಲ್ಲಿ ದೀಪಗಳನ್ನು ಜೋಡಿಸಿ ದೀಪೋತ್ಸವವನ್ನು ಮತ್ತಷ್ಟು ಸೊಬಗುಗೊಳಿ ಸಿದರು. ಈ ವೇಳೆ ಲಕ್ಷ ದೀಪೋತ್ಸವದ ಸಿಂಗಾರ ವನ್ನು ಕೆಲ ಭಕ್ತರು ಮೊಬೈಲ್‍ನಲ್ಲಿ ಸೆರೆ ಹಿಡಿದರೆ, ಇನ್ನೂ ಕೆಲವರು ಸೆಲ್ಫಿಗೆ ಮುಗಿಬೀಳುತ್ತಿದ್ದರು.

ಭಾರತೀನಗರ ವರದಿ: ಪಟ್ಟಣದಾದ್ಯಂತ ಮಕರ ಸಂಕ್ರಾಂತಿ ಸಂಭ್ರಮ ಜೋರಾಗಿಯೇ ಕಂಡು ಬಂತು. ಹೆಣ್ಣು ಮಕ್ಕಳು, ಗೃಹಿಣಿಯರು ಮನೆಯ ಮುಂದೆ ರಂಗೋಲಿ ಇಟ್ಟು ಹೊಸ ಉಡುಪುಗಳನ್ನು ತೊಟ್ಟು ಮನೆ-ಮನೆಗೆ ತೆರಳಿ ಎಳ್ಳು-ಬೆಲ್ಲ, ಕಬ್ಬು ಹಂಚಿ ಶುಭಾಶಯ ವಿನಿಮಯ ಮಾಡಿಕೊಂಡರು. ರೈತರು ಜಾನುವಾರುಗಳನ್ನು ಸಿಂಗರಿಸಿ ಪೂಜೆ ಸಲ್ಲಿಸಿದರು. ಇಲ್ಲಿನ ಸುತ್ತಮುತ್ತಲ ಸಣ್ಣಕ್ಕಿ ರಾಯಸ್ವಾಮಿ, ಆತ್ಮ ಲಿಂಗೇಶ್ವರಸ್ವಾಮಿ, ಚಿಕ್ಕರಸಿನಕೆರೆ ಶ್ರೀಕಾಲಭೈರವೇ ಶ್ವರಸ್ವಾಮಿ, ಶ್ರೀಬೊಮ್ಮಲಿಂಗೇಶ್ವರ, ಮೆಳ್ಳಹಳ್ಳಿ ಶನೇಶ್ವರ, ಕೆ.ಎಂ.ದೊಡ್ಡಿ ಗಣಪತಿ ದೇವಸ್ಥಾನ ಸೇರಿದಂತೆ ಇಲ್ಲಿನ ವಿವಿಧ ದೇವಾಲಯಗಳಲ್ಲಿ ಭಕ್ತಾದಿಗಳು ವಿಶೇಷ ಪೂಜೆ ಸಲ್ಲಿಸಿದರು.

ಕೆ.ಆರ್.ಪೇಟೆ ವರದಿ: ಸಂಕ್ರಾಂತಿ ಅಂಗವಾಗಿ ಪಟ್ಟಣದ ವಿವಿಧ ದೇವಾಲಯಗಳಲ್ಲಿ ಮುಂಜಾನೆ ಯಿಂದಲೇ ಆರಂಭವಾದ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ಮಧ್ಯಾಹ್ನದವರೆವಿಗೂ ನಡೆದರೆ, ಮಹಿಳೆಯರು ಮತ್ತು ಹೆಣ್ಣು ಮಕ್ಕಳು ನೆರೆಹೊರೆಯವರಿಗೆ ಎಳ್ಳು-ಬೆಲ್ಲ ನೀಡಿ ಪರಸ್ಪರ ಸಂಕ್ರಾಂತಿ ಶುಭಾಶಯಗಳನ್ನು ವಿನಿಮಯ ಮಾಡಿ ಕೊಂಡರು. ಪಟ್ಟಣದ ಹೇಮಗಿರಿ ರಸ್ತೆಯಲ್ಲಿರುವ ಶ್ರೀ ಮುತ್ತುರಾಯಸ್ವಾಮಿ ದೇವಾಲಯದಲ್ಲಿ ಪ್ರಧಾನ ಅರ್ಚಕ ಮುತ್ತುರಾಜ್ ಮತ್ತು ವ್ಯವಸ್ಥಾಪಕ ಶ್ರೀನಿವಾಸ್ ನೇತೃತ್ವದಲ್ಲಿ ಬೆಳಗಿನ ಜಾವದಿಂದ ಆರಂಭವಾದ ಪೂಜಾ ಕಾರ್ಯಕ್ರಮ, ಪ್ರಸಾದ ವಿನಿಯೋಗ ಮಧ್ಯಾಹ್ನದ ವರೆವಿಗೂ ನಡೆದವು. ಪಟ್ಟಣದ ವಿವಿಧ ಬಡಾವಣೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಸರತಿಯ ಸಾಲಿನಲ್ಲಿ ದೇವರ ದರ್ಶನ ಪಡೆದರು. ಪಟ್ಟಣದ ಬಸವೇಶ್ವರ ದೇವಸ್ಥಾನ ದಲ್ಲಿ ಶ್ರೀ ವಿರೂಪಾಕ್ಷ ರಾಜಯೋಗಿ ಶ್ರೀಗಳ ನೇತೃತ್ವದಲ್ಲಿ ವಿಶೇಷ ಪೂಜೆ ಅಭಿಷೇಕ, ಪ್ರಸಾದ ವಿನಿಯೋಗ, ಎಳ್ಳು-ಬೆಲ್ಲ ವಿತರಣೆ ಕಾರ್ಯಕ್ರಮಗಳು ನಡೆದವು. ಹಾಗೆಯೇ ಶ್ರವಣಬೆಳಗೊಳ ರಸ್ತೆಯಲ್ಲಿರುವ ಶ್ರೀ ಗಣಪತಿ ದೇವಾಲಯ, ಶ್ರೀ ಭ್ರಮರಾಂಬ ಮಲ್ಲಿಕಾರ್ಜುನ ದೇವಾಲಯ, ಹೊಸ ಹೊಳಲು ಶ್ರೀ ಕೋಟೆ ಭೈರವೇಶ್ವರ ದೇವಾಲಯ, ಲಕ್ಷ್ಮೀನಾರಾಯಣಸ್ವಾಮಿ, ಅಗ್ರಹಾರಬಾಚಹಳ್ಳಿ ಶ್ರೀ ಹುಣಸೇಶ್ವರ, ಶ್ರೀ ಅಮೃತೇಶ್ವರ ದೇವಾ ಲಯಗಳಲ್ಲಿ ಸಾವಿರಾರು ಭಕ್ತಾದಿಗಳು ಮುಂಜಾನೆ 4 ಗಂಟೆಯಿಂದಲೇ ಸರತಿಯ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.

Translate »