ದಿ ಮೈಸೂರು ಸಿಟಿ ಕೋ-ಆಪರೇಟಿವ್ ಬ್ಯಾಂಕ್ ನೂತನ ಅಧ್ಯಕ್ಷರಾಗಿ ಎಸ್‍ಬಿಎಂ ಮಂಜು ಅವಿರೋಧ ಆಯ್ಕೆ
ಮೈಸೂರು

ದಿ ಮೈಸೂರು ಸಿಟಿ ಕೋ-ಆಪರೇಟಿವ್ ಬ್ಯಾಂಕ್ ನೂತನ ಅಧ್ಯಕ್ಷರಾಗಿ ಎಸ್‍ಬಿಎಂ ಮಂಜು ಅವಿರೋಧ ಆಯ್ಕೆ

January 17, 2019

ಮೈಸೂರು: ಪ್ರತಿಷ್ಠಿತ ದಿ ಮೈಸೂರು ಸಿಟಿ ಕೋ-ಆಪರೇಟಿವ್ ಬ್ಯಾಂಕ್‍ನ ನೂತನ ಅಧ್ಯಕ್ಷರಾಗಿ ಮೈಸೂರು ಮಹಾನಗರ ಪಾಲಿಕೆ ಸದಸ್ಯರೂ ಆದ ಎಸ್‍ಬಿಎಂ ಮಂಜು ಅವಿರೋಧವಾಗಿ ಆಯ್ಕೆ ಯಾಗಿದ್ದಾರೆ. ಬುಧವಾರ ನಡೆದ ಚುನಾವಣೆÉ ಯಲ್ಲಿ ಎಸ್.ಬಿ.ಎಂ.ಮಂಜು ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಹಿಂದಿನ ಅಧ್ಯಕ್ಷ ಮಾಜಿ ಮೇಯರ್ ಬಿ.ಕೆ.ಪ್ರಕಾಶ್ ಅವರು ರಾಜೀನಾಮೆ ನೀಡಿದ್ದ ಹಿನ್ನೆಲೆಯಲ್ಲಿ ಇಂದು ಚುನಾವಣೆ ನಡೆಯಿತು. ಮಂಜು ಸತತ ಮೂರು ಬಾರಿ ನಿರ್ದೇಶಕರಾಗಿ ಆಯ್ಕೆಯಾಗಿ ದ್ದಾರೆ. ಚುನಾವಣಾಧಿಕಾರಿಯಾಗಿ ಜಿ.ಗಿರೀಶ್ ಕರ್ತವ್ಯ ನಿರ್ವಹಿಸಿದರು.
ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷ ರಾದ ಬಿ.ಕೆ.ಪ್ರಕಾಶ್, ಸೋಮಣ್ಣ, ಉಪಾಧ್ಯಕ್ಷೆ ಭಾಗ್ಯಮ್ಮ, ನಿರ್ದೇಶಕ ರಾದ ಆರ್.ರವಿಕುಮಾರ್, ರಾಜೇಶ್ವರಿ, ಚಿಕ್ಕಪುಟ್ಟಿ, ಸಿ.ಚಂದ್ರಶೇಖರ್, ಮಂಚಪ್ಪ, ಕಾರ್ಯದರ್ಶಿ ಗಾಯತ್ರಿ, ವೃತ್ತಿಪರ ನಿರ್ದೇಶಕರಾದ ರಾಮಕೃಷ್ಣಯ್ಯ, ಎಂ.ವೈ.ರಮೇಶ್, ಚೌಹಳ್ಳಿ ಪುಟ್ಟಸ್ವಾಮಿ ಉಪಸ್ಥಿತರಿದ್ದರು.
ಶಾಖೆಗಳನ್ನು ತೆರೆಯಲು ಕ್ರಮ: ಎಸ್‍ಬಿಎಂ ಮಂಜು
ಮೈಸೂರು ಮಹಾರಾಜರಿಂದ ಸ್ಥಾಪಿತವಾದ ಶತಮಾನದ ಇತಿಹಾಸ ಹೊಂದಿರುವ ಮೈಸೂರು ಸಿಟಿ ಕೋ-ಆಪರೇಟಿವ್ ಬ್ಯಾಂಕ್‍ನ ಶಾಖೆಗಳನ್ನು ತೆರೆಯಲು ಕ್ರಮ ಕೈಗೊಳ್ಳುವುದಾಗಿ ನೂತನ ಅಧ್ಯಕ್ಷ ಎಸ್‍ಬಿಎಂ ಮಂಜು `ಮೈಸೂರು ಮಿತ್ರ’ನಿಗೆ ತಿಳಿಸಿದರು. ಬ್ಯಾಂಕ್‍ನ ಎಟಿಎಂ ತೆರೆಯುವ ಬಗ್ಗೆ ಪ್ರಯತ್ನ ನಡೆಸಿದ್ದೇನೆ. ಮಧ್ಯಮ ಮತ್ತು ಕೆಳವರ್ಗದವÀರಿಗೆ ವಾಹನ ಸಾಲ ಯೋಜನೆ, ಆರೋಗ್ಯ ಯೋಜನೆ, ಬಡ್ಡಿಯಲ್ಲಿ ಕಡಿತ, ಬಿಪಿಎಲ್ ಕಾರ್ಡ್ ಹೊಂದಿರುವ ಸದಸ್ಯರ ಬಡ ಮಕ್ಕಳಿಗೆ ವಿದ್ಯಾರ್ಥಿ ವೇತನ ಹಾಗೂ ಪ್ರೋತ್ಸಾಹ ಧನ ವಿತರಣೆ ಸೇರಿದಂತೆ ಹಲವು ಯೋಜನೆಗಳನ್ನು ನನ್ನ ಅವಧಿಯಲ್ಲಿ ಕೈಗೊಳ್ಳುವ ಮೂಲಕ ಬ್ಯಾಂಕ್ ಸದಸ್ಯರಿಗೆ ಇನ್ನಷ್ಟು ಹತ್ತಿರವಾಗುವ ಕಾರ್ಯ ಮಾಡುವುದಾಗಿ ತಿಳಿಸಿದರು.

Translate »