ಸಂಭ್ರಮದಿಂದ ಸಂಕ್ರಾಂತಿ ಆಚರಣೆ
ಮೈಸೂರು

ಸಂಭ್ರಮದಿಂದ ಸಂಕ್ರಾಂತಿ ಆಚರಣೆ

January 17, 2019

ಮೈಸೂರು: ಹೊಸ ವರ್ಷದ ಮೊದಲ ಹಬ್ಬ, ರೈತರ ಪಾಲಿನ ಸುಗ್ಗಿಹಬ್ಬ `ಮಕರ ಸಂಕ್ರಾಂತಿ’ಯನ್ನು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಡಗರ, ಸಂಭ್ರಮದಿಂದ ಆಚರಿಸಲಾಯಿತು. ಯುವ ಕರು ಜಾನುವಾರುಗಳನ್ನು ಸಿಂಗರಿಸಿ ಕಿಚ್ಚು ಹಾಯಿಸಿದರೆ, ಹೆಂಗಳೆಯರು ಎಳ್ಳು-ಬೆಲ್ಲ ಬೀರುವ ಮೂಲಕ ಸಂಭ್ರಮಿಸಿದರು.

ಉತ್ತರಾಯಣದ ಮೂಲಕ ಹೊಸ ಸಂವ ತ್ಸರವನ್ನು ಬರಮಾಡಿಕೊಳ್ಳುವ ಸಂಕ್ರಾಂತಿ ಹಬ್ಬವನ್ನು ಪ್ರತಿವರ್ಷ ಎಲ್ಲೆಡೆ ಸಡಗರ, ಸಂಭ್ರಮದಿಂದ ಆಚರಿಸುವ ವಾಡಿಕೆಯಿದೆ. ಹೊಲ-ಗದ್ದೆಗಳಲ್ಲಿ ಬೆಳೆದ ಬೆಳೆ ರೈತರ ಮನೆ ಸೇರುವುದರೊಂದಿಗೆ ವರ್ಷವಿಡೀ ಕೃಷಿ ಚಟುವಟಿಕೆಗೆ ಮೈಯೊಡ್ಡಿ ದುಡಿದ ಜಾನುವಾರುಗಳಿಗೆ ವಿಶ್ರಾಂತಿ ನೀಡುವುದ ರೊಂದಿಗೆ ಅವುಗಳನ್ನು ಸಿಂಗರಿಸಿ ಪೂಜಿ ಸುವ ಹಬ್ಬವಾಗಿದೆ. ಸಂಕ್ರಾಂತಿಯ ಹಬ್ಬ ದಲ್ಲಿ ಎಳ್ಳು ದಾನ ಮಾಡಬೇಕೆಂಬ ಸಂಪ್ರ ದಾಯದಂತೆ ಮಂಗಳವಾರ ನಗರದಲ್ಲಿ ಎಳ್ಳು ಬೆಲ್ಲವನ್ನು ಹಂಚುವ ಮೂಲಕ ಶುಭಾಶಯ ವಿನಿಮಯ ಮಾಡಿಕೊಂಡರು. ಹೆಂಗಳೆಯರು ಹೊಸ ಬಟ್ಟೆ ಧರಿಸಿ ನೆರೆ ಹೊರೆಯವರಿಗೆ, ಬಂಧು ಮಿತ್ರರಿಗೆ ಎಳ್ಳು ಬೆಲ್ಲ ಬೀರಿ ಸಂಭ್ರಮಿಸಿದರು. ಈ ನಡುವೆ ವಿವಿಧ ಸಂಘ ಸಂಸ್ಥೆಗಳಲ್ಲಿ ವಿಭಿನ್ನ ವಾಗಿಯೇ ಸಂಕ್ರಾಂತಿ ಆಚರಿಸಿದರು.
ಸುಗ್ಗಿಯ ಸಂಭ್ರಮ: ನಗರದ ಹೊರ ವಲಯ ದಲ್ಲಿ ರೈತರು ತಾವು ಬೆಳೆದ ಬೆಳೆಗಳನ್ನು ರಾಶಿ ಮಾಡಿ ಪೂಜೆ ಸಲ್ಲಿಸುವ ಜತೆಗೆ ಜಾನು ವಾರುಗಳಿಗೆ ಪೂಜೆ ಸಲ್ಲಿಸಿದರು. ಬೆಳಿಗ್ಗೆಯೇ ಜಾನುವಾರುಗಳನ್ನು ತೊಳೆದು ಅರಿಶಿಣ ಬಳಿದು ಪೂಜೆ ಸಲ್ಲಿಸಿದ ನಂತರ ಎಳ್ಳು, ಬೆಲ್ಲ, ಹಣ್ಣು, ಹಂಪಲುಗಳನ್ನು ನೀಡಿದರು. ನಂತರ ಮನೆ ಮಂದಿಯೆಲ್ಲ ಸೇರಿ ಎಳ್ಳು-ಬೆಲ್ಲ ತಿಂದು ಸಂಭ್ರಮಿಸಿದರು.

ಚಾಮುಂಡಿಬೆಟ್ಟ, ಕೋಟೆ ಆಂಜನೇಯ ಸ್ವಾಮಿ, ನೂರೊಂದು ಗಣಪತಿ, ಯೋಗಾ ನರಸಿಂಹಸ್ವಾಮಿ ದೇವಸ್ಥಾನ, ಒಂಟಿಕೊಪ್ಪ ಲಿನ ಲಕ್ಷ್ಮೀವೆಂಕಟೇಶ್ವರ ಸೇರಿದಂತೆ ನಗ ರದ ಪ್ರಮುಖ ದೇವಾಲಯಗಳಲ್ಲಿ ಹಬ್ಬದ ಪ್ರಯುಕ್ತ ವಿಶೇಷ ಪೂಜೆ ನಡೆಯಿತು. ಹೀಗಾಗಿ ದೇವಸ್ಥಾನ ಆವರಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಕಂಡುಬಂದರು.
ಜಾನುವಾರುಗಳ ಮೇಲೆ ಚಿತ್ತಾರ: ಮೈಸೂರು ತಾಲೂಕಿನ ರಮ್ಮನಹಳ್ಳಿಯಲ್ಲಿ ಸಂಕ್ರಾಂತಿ ಹಬ್ಬವನ್ನು ವಿಭಿನ್ನವಾಗಿ ಆಚರಿಸಲಾಯಿತು. ಗ್ರಾಮಸ್ಥರು ಜಾನುವಾರುಗಳ ಮೈಮೇಲೆ ವಿವಿಧ ಚಿತ್ರಗಳನ್ನು ಬರೆಸುವ ಮೂಲಕ ಸುಗ್ಗಿಹಬ್ಬದ ಸಂಭ್ರಮದಲ್ಲಿ ಮಿಂದೆದ್ದರು. ಯುವಕರು ಜಾನುವಾರಗಳ ಮೇಲೆ ವಿವಿಧ ಚಿತ್ರಗಳನ್ನು ಬರೆಯುವಲ್ಲಿ ನಿರತ ರಾಗಿದ್ದರು. ಈ ಚಿತ್ರಗಳು ಹಬ್ಬದ ಮೆರ ಗನ್ನು ಮತ್ತಷ್ಟು ಹೆಚ್ಚಿಸಿದವು.

ಪೊಂಗಲ್ ಹಬ್ಬ ಆಚರಣೆ: ಕೆಥೊಲಿಕ್ ತಮಿಳು ಟ್ರಸ್ಟ್ ವತಿಯಿಂದ ನಾಯ್ಡು ನಗ ರದ ಪುಷ್ಪಾಶ್ರಮದಲ್ಲಿರುವ ಬಾಲ ಯೇಸು ಪುಣ್ಯಕ್ಷೇತ್ರದಲ್ಲಿ ಸುಗ್ಗಿಯ ಹಬ್ಬ ಪೊಂಗಲ್ಲನ್ನು ಸಂಭ್ರಮದಿಂದ ಆಚರಿಸಲಾಯಿತು. ಬಲಿ ಪೂಜೆಯಿಂದ ಪೊಂಗಲ್ ಹಬ್ಬ ಆರಂಭ ಗೊಂಡಿತ್ತು. ಧರ್ಮಾಧ್ಯಕ್ಷ ಡಾ.ಕೆ.ಎ. ವಿಲಿಯಂ ಅವರು ಬಲಿ ಪೂಜೆ ನೆರವೇ ರಿಸುವ ಮೂಲಕ ಪೊಂಗಲ್ ಸಂಭ್ರಮ ನಡೆಯಿತು. ಗಾಯನ, ಪೊಂಗಲ್ ಹಬ್ಬದ ವಿಶೇಷ ಭೋಜನ, ಗಣ್ಯರಿಗೆ ಸನ್ಮಾನ ಜರುಗಿತು. ಹಬ್ಬ ಆಚರಣೆಯ ಬಳಿಕ ಟ್ರಸ್ಟ್‍ನ ಪದಾಧಿಕಾರಿಗಳು ಮತ್ತು ಮಕ್ಕಳಿಂದ ನೃತ್ಯ, ಕಿರುನಾಟಕ ಸೇರಿದಂತೆ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಗಮನ ಸೆಳೆದವು.

ಮುಸ್ಲಿಂರಿಗೂ ಎಳ್ಳು ಬೆಲ್ಲ ವಿತರಣೆ: ಪಾಲಿಕೆ ಸದಸ್ಯೆ ಪ್ರಮೀಳ ಭರತ್ ಅವರು ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ಪೌರಕಾರ್ಮಿಕರಿಗೆ ಮತ್ತು ಮುಸ್ಲಿಂ ಸಮು ದಾದವರಿಗೆ ಎಳ್ಳು ಬೆಲ್ಲ ವಿತರಿಸಿ ಸಂಕ್ರಾತಿ ಶುಭಾಶಯ ಕೋರಿದರು. ಪ್ರತಿ ದಿನ ಬಡಾ ವಣೆಗಳನ್ನು ಸ್ವಚ್ಛಗೊಳಿಸಿ ಮೈಸೂರಿನ ಸ್ವಚ್ಛ ತೆಗೆ ಶ್ರಮಿಸುತ್ತಿರುವ ಪೌರಕಾರ್ಮಿಕರು ಎಳ್ಳು ಬೆಲ್ಲ ತಿಂದು ಅವರ ಬದುಕು ಬೆಲ್ಲದ ಸಿಹಿಯಾಗಲೆಂದು ಹಾಗೂ ನಮ್ಮ ಸುತ್ತಮುತ್ತ ಲಿನ ಮುಸ್ಲಿಂ ಸಮುದಾಯದವರ ಜತೆ ಸಹೋದರತ್ವ ಮತ್ತು ಭಾತೃತ್ವ ಉತ್ತಮವಾಗಿ ಮುಂದುವರೆಯಲೆಂದು ಎಳ್ಳು-ಬೆಲ್ಲ ವಿತರಿಸ ಲಾಗಿದೆ ಎಂದರು. ಈ ವೇಳೆ 23ನೇ ವಾರ್ಡ್ ಮುಖಂಡರಾದ ಪ್ರಮೋದ್, ಹರ್ಷ, ಭದ್ರಿ, ಪರಮೇಶ್, ರಾಜೇಂದ್ರ, ಪ್ರೇಮ್‍ಕುಮಾರ್, ಶ್ರೀನಿವಾಸ್ ಭಟ್ಟ, ಲಕ್ಷ್ಮೀ ಸುರೇಂದ್ರ, ನಾಗೇಶ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Translate »