ಮೈಸೂರು: ಗುಣಮಟ್ಟದ ಸಂಶೋಧನೆಯಲ್ಲಿ ರಾಜ್ಯದ ಬಹಳಷ್ಟು ಕಾಲೇಜುಗಳು ಹಿಂದೆ ಬಿದ್ದಿವೆ ಎಂದು ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಎಸ್. ಎನ್.ಹೆಗಡೆ ವಿಷಾದಿಸಿದರು.
ಮೈಸೂರಿನ ಗೋಕುಲಂನಲ್ಲಿರುವ ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇ ಜಿನ ವಿದ್ಯುನ್ಮಾನ ಮತ್ತು ಸಂಪರ್ಕಶಾಸ್ತ್ರ ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ `ಪರಸ್ಪರ ಸಂಶೋಧನೆ ದೃಷ್ಟಿಕೋನ’ ಕಾರ್ಯಾ ಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಸಂಶೋಧನೆಗಳನ್ನು ಅಂಕ, ಪದವಿ ಗಳಿಗೆ ಸೀಮಿತಗೊಳಿಸದೆ ಅದರಾಚೆಗೂ ವಿಸ್ತರಿಸಬೇಕಿದೆ. ಸಂಶೋಧನೆ ಕೇವಲ ರಾಜ್ಯ-ರಾಷ್ಟ್ರ ಅಷ್ಟೇ ಅಲ್ಲದೆ, ಅಂತರ ರಾಷ್ಟ್ರೀಯ ಮಟ್ಟದಲ್ಲೂ ನಡೆಯಬೇಕು ಎಂದು ಅಭಿಪ್ರಾಯಪಟ್ಟರು.
ಪ್ರಸ್ತುತ ಸಂಶೋಧನೆಗಳು ಸ್ಪರ್ಧಾತ್ಮಕ ವಾಗಿ ನಡೆಯುತ್ತಿವೆ. ಹಾಗಾಗಿ, ಸಂಶೋ ಧಕರಿಗೆ ಸಂಗ್ರಹಾತ್ಮಕ ಮನೋಭಾವ, ಸಾಂಸ್ಕøತಿಕ ಒಳನೋಟ ಇರಬೇಕಾಗುತ್ತದೆ. ಸಂಶೋಧನೆ ಅರೆಕಾಲಿಕವಾಗಿರದೆ ಪೂರ್ಣಕಾಲಿಕವಾಗಿರಬೇಕು. ಈ ನಿಟ್ಟಿ ನಲ್ಲಿ ವಿದ್ಯಾರ್ಥಿಗಳು ಮಾರ್ಗದರ್ಶಕ ರಿಗೇ ಒತ್ತಡ ಹಾಕಬೇಕು. ಉತ್ತಮ ಸಂಶೋಧನೆ ಮಾಡಿದರಷ್ಟೆ, ಗುಣಮಟ್ಟದ ಬೋಧನೆ ಮಾಡಲು ಸಾಧ್ಯ. ಇಲ್ಲವೇ ಪ್ರಯೋಜನವಿಲ್ಲ ಎಂದು ತಿಳಿಸಿದರು.
ಸ್ವಾತಂತ್ರ್ಯ ಪೂರ್ವದಲ್ಲಿ ಸಿ.ವಿ.ರಾಮನ್ ಅವರು ನೊಬೆಲ್ ಪ್ರಶಸ್ತಿ ಪಡೆದರು. ಆದರೆ, ಸ್ವಾತಂತ್ರ್ಯ ನಂತರ ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿ ದೇಶಕ್ಕೆ ಒಂದಾದರೂ ನೊಬೆಲ್ ಪ್ರಶಸ್ತಿ ಬಂದಿದೆಯೆ? ಹೀಗಾ ಗಲು ಶಿಕ್ಷಣ ವ್ಯವಸ್ಥೆಯಲ್ಲಿರುವ ದೋಷವೇ ಕಾರಣ. ಇಂದು ವಿದ್ಯಾರ್ಥಿಗಳನ್ನು ಕೇವಲ ತರಗತಿಗಳಿಗೇ ಸೀಮಿತಗೊಳಿಸಿದ್ದೇವೆ ಎಂದರು.
ಜೀವನ ಪರ್ಯಂತ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳುವ, ಹೊಸತನ್ನು ಕಲಿಯು ವವರನ್ನು ರೂಪಿಸುವಲ್ಲಿ ನಾವು ಸೋಲು ತ್ತಿದ್ದೇವೆ. ಪದವಿ ಹಾಗೂ ಕೆಲಸ ಬೇಡುವ ವಿದ್ಯಾರ್ಥಿಗಳನ್ನು ರೂಪಿಸುತ್ತಿದ್ದೇವೆ. ಆದರೆ, ಪಾಶ್ಚಾತ್ಯರು ಸೃಜನಶೀಲ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸುತ್ತಿದ್ದಾರೆ ಎಂದು ನುಡಿದರು.
ಪ್ರೊ.ಅಶೋಕ್ ರಾವ್, ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಪಿ.ವಿಶ್ವನಾಥ್, ಕಾಲೇಜು ಪ್ರಾಂಶುಪಾಲ ಪ್ರೊ.ಸದಾಶಿವೇ ಗೌಡ ಇದ್ದರು.