ಬೈಕ್ ಹಿಂದೆ ಒಂದು ನಂಬರ್, ಮುಂದೆ ಮತ್ತೊಂದು ನಂಬರ್!
ಮೈಸೂರು

ಬೈಕ್ ಹಿಂದೆ ಒಂದು ನಂಬರ್, ಮುಂದೆ ಮತ್ತೊಂದು ನಂಬರ್!

January 17, 2019

ಮೈಸೂರು: ಆಗಾಗ ತನ್ನ ದ್ವಿಚಕ್ರ ವಾಹನದ ನಂಬರ್ ಪ್ಲೇಟ್ ಬದಲಾಯಿಸಿ ಓಡಿಸುತ್ತಿದ್ದ ವ್ಯಕ್ತಿಯೋರ್ವ ತಪಾಸಣೆ ವೇಳೆ ಸಿಕ್ಕಿಬಿದ್ದಿರುವ ಘಟನೆ ಆದಿಪಂಪ ರಸ್ತೆಯಲ್ಲಿ ನಡೆದಿದೆ.

ದೊಡ್ಡಹುಂಡಿ ಗ್ರಾಮದ ನಿವಾಸಿ ಬಸವರಾಜು(19) ಸಿಕ್ಕಿಬಿದ್ದವನು. ಆರೋಪಿ ಜ.14 ರಂದು ತನ್ನ ಇಬ್ಬರು ಸ್ನೇಹಿತ ರೊಂದಿಗೆ ಆದಿಪಂಪ ರಸ್ತೆಯಲ್ಲಿ ಬರು ವಾಗ ಅಲ್ಲಿಯೇ ತಪಾಸಣೆ ನಡೆಸುತ್ತಿದ್ದ ವಿವಿ ಪುರಂ ಸಂಚಾರಿ ಪೊಲೀಸರು ಮೂರು ಜನ ದ್ವಿಚಕ್ರ ವಾಹನದಲ್ಲಿ ಬರುತ್ತಿರುವು ದನ್ನು ಕಂಡು ತಡೆದು ನಿಲ್ಲಿಸಿದ್ದಾರೆ. ಈ ವೇಳೆ ವಾಹನ ನಂಬರ್ ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಘಟನೆ ಹಿನ್ನಲೆ: ಬೈಕ್‍ನ ಅಸಲಿ ನಂಬರ್ ಕೆಎ 09 ಹೆಚ್‍ಆರ್ 4414 ಆಗಿದ್ದು, ಕೆ.ಆರ್.ನಗರದ ಕನಕ ಬಡಾ ವಣೆಯ ನಿವಾಸಿ ಎಂ.ಪಿ.ಸಂತೋಷ್ ಎಂಬುವವರ ಹೆಸರಿನಲ್ಲಿದೆ. ಆದರೆ, ಸಿಕ್ಕಿಬಿದ್ದಿ ರುವ ಬಸವರಾಜು ಬೈಕ್‍ನ ನಂಬರ್‍ನ್ನು ಮುಂಭಾಗದಲ್ಲಿ ಕೆಎ 09 ಹೆಚ್‍ಆರ್ 4411 ಹಾಗೂ ಹಿಂಭಾಗದಲ್ಲಿ ಕೆಎ 09 ಹೆಚ್‍ಪಿ 4411 ಎಂದು ಬದಲಾಯಿಸಿದ್ದಾನೆ. ಈ ಸಂಬಂಧ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »