ಮಡಿಕೇರಿ: ಕುರುಚಲು ಕಾಡಿಗೆ ಬೆಂಕಿ ಬಿದ್ದು, ಮನೆಯೊಂದರ ಮುಂದೆ ನಿಲ್ಲಿಸಲಾಗಿದ್ದ ಕಾರಿಗೆ ಬೆಂಕಿ ತಗುಲಿ ಕಾರಿನ ಒಂದು ಭಾಗ ಸುಟ್ಟು ಕರಕಲಾದ ಘಟನೆ ನಗರದ ಚೈನ್‍ಗೇಟ್ ಬಳಿ ಸಂಭವಿಸಿದೆ.
ಚೈನ್‍ಗೇಟ್ ನಿವಾಸಿ ಗಿರಿ ಗಣೇಶ್ ಎಂಬವರ ಮನೆಯ ಪಕ್ಕ ದಲ್ಲಿದ್ದ ಕುರುಚಲು ಕಾಡಿಗೆ ಮಧ್ಯಾಹ್ನ 1 ಗಂಟೆಯ ವೇಳೆಗೆ ಆಕ ಸ್ಮಿಕವಾಗಿ ಬೆಂಕಿ ತಗುಲಿತ್ತು. ಗಾಳಿಯ ತೀವ್ರತೆಗೆ ಸುತ್ತ ಮುತ್ತಲ ಪೊದೆಗೂ ಬೆಂಕಿ ಹರಡಿದ್ದಲ್ಲದೇ, ಗಿರಿ ಗಣೇಶ್ ಅವರ ಮನೆಯ ಆವರಣದಲ್ಲಿದ್ದ ಹುಲ್ಲಿನ ಮೆದೆಗೂ ಬೆಂಕಿ ಹರಡಿದೆ. ಈ ಸಂದರ್ಭ ಹುಲ್ಲಿನ ಮೆದೆಯ ಪಕ್ಕದಲ್ಲಿ ನಿಲ್ಲಿಸಲಾಗಿದ್ದ ಕಾರಿಗೂ ಬೆಂಕಿ ತಗುಲಿದೆ.
ಬೆಂಕಿಯ ತೀವ್ರತೆಗೆ ಟಾಟಾ ಇಂಡಿಗೋ(ಕೆಎ.05, ಎಂಇ. 6686) ಕಾರಿನ ಒಂದು ಭಾಗ ಸಂಪೂರ್ಣ ಸುಟ್ಟು ಕರಕಲಾಗಿದೆ. ವಿಷಯ ಅರಿತ ಸ್ಥಳೀಯ ಯುವಕರು ಅತ್ತ ತೆರಳಿ ಕಾರಿನ ಒಳ ಗಿದ್ದ ಗ್ಯಾಸ್ ಸಿಲಿಂಡರ್ ಅನ್ನು ಹೊರತೆಗೆದು ಮುಂದಾಗಬಹುದಾ ಗಿದ್ದ ಭಾರೀ ಅನಾಹುತವನ್ನು ತಪ್ಪಿಸಿ, ಬಳಿಕ ಕಾರಿನ ಬೆಂಕಿ ನಂದಿ ಸುವಲ್ಲಿ ಯಶಸ್ವಿಯಾದರು. ಬಳಿಕ ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಸ್ಥಳಕಾಗಮಿಸಿದ ಸಿಬ್ಬಂದಿಗಳು, ಕುರುಚಲು ಪೊದೆಗೆ ಹರಡುತ್ತಿದ್ದ ಬೆಂಕಿಯನ್ನು ನಂದಿಸಿದ್ದಾರೆ. ಅಗ್ನಿ ಅವಘಡದಿಂದ ಗಿರಿ ಗಣೇಶ್ ಅವರಿಗೆ ಅಂದಾಜು 30 ಸಾವಿರ ರೂ. ನಷ್ಟ ಸಂಭವಿಸಿದೆ.