ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆ
ಕೊಡಗು

ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆ

January 19, 2019

ಸೋಮವಾರಪೇಟೆ: ಜೀವನದಲ್ಲಿ ಜಿಗುಪ್ಸೆಗೊಂಡು ಗನ್‍ಮ್ಯಾನ್ ಒಬ್ಬರು ಗುಂಡುಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಕುಮಾರಳ್ಳಿ ಬಾಚಳ್ಳಿ ಗ್ರಾಮದಲ್ಲಿ ಶನಿವಾರ ನಡೆದಿದೆ.

ಗ್ರಾಮದ ನಿವಾಸಿ ಚಿನ್ನಪ್ಪ(58) ಆತ್ಮಹತ್ಯೆಗೆ ಶರಣಾದವರು. ಕೃಷಿಕರಾಗಿದ್ದ ಚಿನ್ನಪ್ಪ ಇತ್ತೀಚೆಗೆ ಬೆಂಗಳೂರಿನಲ್ಲಿ ಗನ್‍ಮ್ಯಾನ್ ಆಗಿ ನೌಕರಿ ಮಾಡುತ್ತಿದ್ದರು. ಶನಿವಾರ ಬೆಳಿಗ್ಗೆ ಬೆಂಗಳೂರಿನಿಂದ ಮನೆಗೆ ಬಂದವರು ತನಗೆ ಸೇರಿದ ಕೋವಿನಿಂದ ಮನೆಯೊಳಗೆ ಕುತ್ತಿಗೆ ಭಾಗಕ್ಕೆ ಗುಂಡು ಹಾರಿಸಿಕೊಂಡಿದ್ದಾರೆ. ಮನೆಯಲ್ಲಿದ್ದ ಪತ್ನಿ ತಂಗಮ್ಮ ಪಟ್ಟಣದ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ. ಮೃತರ ಇಬ್ಬರು ಮಕ್ಕಳಾದ ಪೊನ್ನಣ್ಣ, ರಂಜನ್ ಕೂಡ ಬೆಂಗಳೂರಿನಲ್ಲಿ ಗನ್‍ಮ್ಯಾನ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ.

Translate »