ವೀರಾಜಪೇಟೆ: ಕೇರಳದ ಕಣ್ಣೂರಿನಲ್ಲಿ ನಡೆದ ಮುಕ್ತ ಕರಾಟೆ ಪಂದ್ಯಾವಳಿಯಲ್ಲಿ ವಿರಾಜಪೇಟೆಯ ಓಕಿನೊವ ಯುಚಿರಿಯೋ ಕರಾಟೆ ವಿದ್ಯಾರ್ಥಿಗಳು 2 ಚಿನ್ನದ ಪದಕ, 10 ಬೆಳ್ಳಿ ಪದಕ, ಹಾಗೂ 5 ಕಂಚಿನ ಪದಕಗಳನ್ನು ಪಡೆದುಕೊಂಡಿದ್ದಾರೆ. ಮುಕ್ತ ಕರಾಟೆ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ರಾಹುಲ್, ಚಿಂತೇಶ್ ಭೀಮಯ್ಯ, ಮೋಹಿತ್, ಸಬೀನ್, ಬೆಳ್ಳಿಯಪ್ಪ, ಪೂವಯ್ಯ, ಉತ್ತಪ್ಪ, ಸೋನಿಕಾ, ಮೌನ, ಕಾವೇರಮ್ಮ, ಮತ್ತು ಅಲಿಸ್ ಡಿಸೋಜ ಇವರುಗಳು ವೀರಾಜಪೇಟೆ ಒಕಿನೋವಾ ಯುಚಿರಿಯೋ ಕರಾಟೆ ಶಾಲೆಯ ವಿದ್ಯಾರ್ಥಿಗಳಾಗಿದ್ದಾರೆ.