ಮಕ್ಕಳ ಲೈಂಗಿಕ ಶೋಷಕರ ಪರ ವಕಾಲತು ಸಲ್ಲ: ಗುಬ್ಬಿಗೂಡು ರಮೇಶ್
ಮೈಸೂರು

ಮಕ್ಕಳ ಲೈಂಗಿಕ ಶೋಷಕರ ಪರ ವಕಾಲತು ಸಲ್ಲ: ಗುಬ್ಬಿಗೂಡು ರಮೇಶ್

September 13, 2019

ಮೈಸೂರು, ಸೆ.12(ಎಂಕೆ)- ಮಕ್ಕಳ ಮೇಲೆ ದೌರ್ಜನ್ಯ, ಅತ್ಯಾಚಾರ, ಹಿಂಸಾ ಚಾರಗಳು ಇಂದಿಗೂ ನಡೆಯುತ್ತಲಿದ್ದು, ನಿಧಿ ಸಿಗಲಿದೆ ಎಂಬ ಮೂಢನಂಬಿಕೆ ಯಿಂದ ಬಾಗಲಕೋಟೆಯಲ್ಲಿ 6 ವರ್ಷದ ಬಾಲಕಿ ಮೇಲೆ ನಡೆದ ಕೃತ್ಯ ಇದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದೆ ಎಂದು ಸಂಸ್ಕøತಿ ಚಿಂತಕ ಗುಬ್ಬಿಗೂಡು ರಮೇಶ್ ವಿಷಾದಿಸಿದರು.

ಮೈಸೂರಿನ ಕಲಾಮಂದಿರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ‘ಪ್ರಥಮ ಮೈಸೂರು ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನ’ದ ಸಮಾರೋಪ ಸಮಾರಂಭ ದಲ್ಲಿ ಮಾತನಾಡಿದ ಅವರು, ಮಕ್ಕಳನ್ನು ಹೀನಕೃತ್ಯಗಳಿಗೆ ಬಳಸಿಕೊಳ್ಳುವವರ ಪರ ವಕೀಲರು ಯಾರೂ ವಕಾಲತ್ತು ವಹಿಸ ಬಾರದು ಎಂದು ಮನವಿ ಮಾಡಿದರು.

ದೆಹಲಿಯಲ್ಲಿ ನಡೆದ ನಿರ್ಭಯ ಪ್ರಕ ರಣದ ಪ್ರಮುಖ ಆರೋಪಿಯಾಗಿದ್ದ ಬಾಲಾ ಪರಾಧಿಗೆ ಶಿಕ್ಷೆ ವಿಧಿಸುವ ಬಗ್ಗೆ ಸಾಕಷ್ಟು ಚರ್ಚೆ ಗಳು ನಡೆದವು. ಬಾಲಾಪರಾಧಿಗೆ ಶಿಕ್ಷೆಯಾ ದಾಗ ಆತನ ತಾಯಿಯೇ ಸ್ವತಃ ತೀರ್ಪಿನ ಪರವಾಗಿ ನಿಂತಿದ್ದರು. ಆದ್ದರಿಂದಲೇ ಪೋಷ ಕರು ತಮ್ಮ ಮಕ್ಕಳನ್ನು ಹೇಗೆ ಬೆಳೆಸಬೇಕು ಎಂಬುದನ್ನು ಅರಿತುಕೊಳ್ಳಬೇಕು ಎಂದರು.

ಮಕ್ಕಳಲ್ಲಿ ನಾಡು-ನುಡಿ, ಚಿಂತನೆ, ವೈಚಾರಿಕತೆಯ ಅರಿವು ಮೂಡಿಸುವ ನಿಟ್ಟಿ ನಲ್ಲಿ ಪ್ರಥಮ ಮಕ್ಕಳ ಸಾಹಿತ್ಯ ಸಮ್ಮೇ ಳನದ ಆಯೋಜನೆ ಶ್ಲಾಘನೀಯವಾಗಿದೆ. 16 ವರ್ಷದ ಸಮ್ಮೇಳನಾಧ್ಯಕ್ಷ ಅರ್ಜುನ್ ಅವರೊಂದಿಗೆ ನೂರಾರು ವಿದ್ಯಾರ್ಥಿ ಗಳಿಂದ ಸಾಹಿತ್ಯ ಮತ್ತಷ್ಟು ಬೆಳೆಯಲಿ. ಇದೇ ವಯಸ್ಸಿನಲ್ಲಿಯೇ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಈ ನಾಡಿನ ಮನೆ ಮನೆಯ ದೀಪವಾಗಿದ್ದು ಎಂದು ತಿಳಿಸಿದರು.

ಸಾಹಿತ್ಯ ಪರಿಷತ್ ಕಥೆ ಹೇಳೋಣ-ಕೇಳೋಣ ಎಂಬ ವಿನೂತನ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳಬೇಕು. ಶಿಶು ಸಾಹಿತ್ಯ ಹಾಡುಗಳು ಹಾಗೂ ಹಾಡು ಗಳಲ್ಲಿರುವ ಕಥೆಯ ಸಾರಾಂಶವನ್ನು ಮಕ್ಕಳಿಗೆ ತಿಳಿ ಹೇಳ ಬೇಕು. ‘ಹೇಳಿದ್ದು ಸುಳ್ಳಾಗಬಹುದು ನೋಡಿದ್ದು ಸುಳ್ಳಾಗ ಬಹುದು’ ಹಾಗೂ ನಾಗರಹಾವು ಚಿತ್ರದ ‘ಕನ್ನಡ ನಾಡಿನ ವೀರರಮಣಿಯ’ ಮೊದ ಲಾದ ಹಾಡುಗಳನ್ನು ಪರಿಚಯಿಸಿ, ಸಾಹಿ ತ್ಯದ ವಿವೇಕ ವೃದ್ಧಿಸಬೇಕು ಎಂದರು.

ಸಾಹಿತಿ ಶಂಕರ್ ದೇವನೂರು ಮಾತ ನಾಡಿದರು. ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಾದ ಹೆಚ್.ಖುಷಿ, ಎಸ್.ಶಶಾಂಕ, ಎಂ. ಸಾಹಿತ್ಯ, ಋತ್ವಿಕ್ ಸಿ.ರಾಜ್, ಜಿ.ದರ್ಶನ್, ನೂರ್ ಸುಹಾನಿ, ಕೆ.ದೀಪಿಕಾ, ಕೆಂಪ ರಾಜು ಹಾಗೂ ಮಕ್ಕಳ ಕ್ಷೇತ್ರದ ಸಾಧಕ ರಾದ ಜ್ಯೋತಿ, ಹೆಚ್.ಕೆ.ರಾಮನಾಥ್, ಕೆ.ವಿ.ಸೌಮ್ಯ, ಎನ್.ವೆಂಕೋಬರಾವ್, ಫಜಿಲ್ಹಾತ್, ಜಮುನಾ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಮಲೆಯೂರು ಗುರುಸ್ವಾಮಿ, ಜಿಲ್ಲಾ ಕಸಾಪ ಅಧ್ಯಕ್ಷ ವೈ.ಡಿ.ರಾಜಣ್ಣ, ಸಮ್ಮೇಳನಾಧ್ಯಕ್ಷ ಎಂ.ಎಸ್.ಅರ್ಜುನ್, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷರಾದ ಎಂ.ಚಂದ್ರಶೇಖರ್, ಮಡ್ಡಿಕೆರೆ ಗೋಪಾಲ್, ರಂಗಕರ್ಮಿ ರಾಜ ಶೇಖರ ಕದಂಬ, ಜಯಪ್ಪ ಹೊನ್ನಾಳಿ, ಕೆ.ಎಸ್.ನಾಗರಾಜು, ಅರಸೇಗೌಡ ಮತ್ತಿ ತರರು ಉಪಸ್ಥಿತರಿದ್ದರು.

Translate »