ಮೈಸೂರು,ಸೆ.12(ಆರ್‍ಕೆ)-ರಾಜ್ಯ ದಲ್ಲಿ ರುವ ಆದಿವಾಸಿ ಸಮುದಾಯಗಳಿಗೆÉ ಮೂಲ ಸೌಲಭ್ಯ ಒದಗಿಸಿ ಸಮಗ್ರ ಅಭಿವೃದ್ಧಿಪಡಿ ಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಭರವಸೆ ನೀಡಿದರು.
ಆದಿವಾಸಿ ಸಮನ್ವಯ ಮಂಚ್ ಹಾಗೂ ರಾಜ್ಯ ಮೂಲ ಆದಿವಾಸಿ ವೇದಿಕೆ ವತಿಯಿಂದ ಮೈಸೂರಿನ ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಇಂದು ಆರಂಭವಾದ ಎರಡು ದಿನಗಳ ಮೂಲ ಆದಿವಾಸಿ ಹಕ್ಕು ಮತ್ತು ಅಧಿ ಕಾರ ದಿವಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಆದಿವಾಸಿ ಸಮುದಾಯದವರು ಸಾವಿ ರಾರು ವರ್ಷಗಳಿಂದ ಮುಖ್ಯವಾಹಿನಿಗೆ ಬರಲಾರದೆ ಸರ್ಕಾರದ ಯೋಜನೆಗಳಿಂದ ವಂಚಿತರಾಗುತ್ತಿದ್ದಾರೆ. ಅದಕ್ಕಾಗಿ ಅವರು ವಾಸಿಸುತ್ತಿರುವ ಗ್ರಾಮಗಳಿಗೆ ಸರ್ಕಾರ ಅಗತ್ಯ ಸೌಲಭ್ಯ ಕಲ್ಪಿಸಿ ಅಭಿವೃದ್ಧಿಪಡಿಸಲು ಕಾರ್ಯ ಕ್ರಮ ರೂಪಿಸಲಾಗುತ್ತಿದೆ ಎಂದರು.
ರಾಜ್ಯ ಹಾಗೂ ದೇಶದಲ್ಲಿ ಬುಡಕಟ್ಟು ಜನರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅವರು ಸಮಾಜದ ಮುಖ್ಯವಾಹಿನಿಗೆ ಬರಬೇಕು. ಹೆಚ್.ಡಿ.ಕೋಟೆ ಭಾಗದ ಹಾಡಿಗಳಿಗೆ ವಿದ್ಯುತ್ ಸೌಲಭ್ಯ ಒದಗಿಸಲು ಮತ್ತು ಮಳೆಯಿಂದ ಹಾನಿಗೊಳಗಾದ ಮನೆಗಳ ನಿರ್ಮಾಣ ಮಾಡಲೂ ಸಹ ಸರ್ಕಾರ ಮುಂದಾ ಗಲಿದೆ ಎಂದೂ ಅವರು ತಿಳಿಸಿದರು.
ಆದಿವಾಸಿ ಸಮನ್ವಯ ಮಂಚ್‍ನ ಸಂಚಾ ಲಕರಾದ ನಿಕೋಲಾಲ್ ಬಾರ್ಲ, ಅಶೋಕ ಚೌಧರಿ, ಸಂಶೋಧಕ ಡಾ.ಅಭಯ್ ಕ್ಷಾಕ್ಷಾ, ವಿಶ್ವಸಂಸ್ಥೆ ಪ್ರತಿನಿಧಿ ಪೂನಂಚೌಧರಿ, ಸೀನಿ ಯರ್ ಸೋಷಿಯಲ್ ಮೆಂಟರ್ ಡಾ. ಜರಿಪಿಯಾಸ್, ಭೂಹಕ್ಕು ಹೋರಾಟ ಗಾರ ಎಸ್.ಆರ್.ಹಿರೇಮಠ, ರಾಜ್ಯ ಮೂಲ ನಿವಾಸಿ ವೇದಿಕೆ ಅಧ್ಯಕ್ಷ ಕೆ.ಎನ್. ವಿಠಲ್, ಖಜಾಂಚಿ ಕೃಷ್ಣಮೂರ್ತಿ, ಸಹ ಪ್ರಾಧ್ಯಾ ಪಕಿ ಡಾ.ಶೀಲಾ ಖರೆ, ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ನಿರ್ದೇಶಕ ಬಸವನ ಗೌಡ, ಡಾ.ಎ.ಆರ್.ವಾಸವಿ, ಡಾ. ಪ್ರಶಾಂತ್ ಡಾ.ಸಿದ್ದಪ್ಪ, ಡಾ.ಜ್ಯೋತಿ ಹಾಗೂ ಹಲವು ಆದಿವಾಸಿ ಸಂಘ ಸಂಸ್ಥೆಗಳ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ರಾಜ್ಯದ ಹಲವು ಜಿಲ್ಲೆಗಳೂ ಸೇರಿದಂತೆ ದೇಶಾದ್ಯಂತ 22 ರಾಜ್ಯಗಳಿಂದ ಸುಮಾರು 1 ಸಾವಿರ ಮಂದಿ ಆದಿವಾಸಿಗಳು ಕಾರ್ಯ ಕ್ರಮದಲ್ಲಿ ಭಾಗವಹಿಸಿದ್ದಾರೆ. ನಾಳೆ (ಸೆ.13) ಬೆಳಿಗ್ಗೆ 10 ಗಂಟೆಗೆ ಅರಮನೆ ಶ್ರೀ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಮಹಾ ರಾಜ ಕಾಲೇಜು ಶತಮಾನೋತ್ಸವ ಭವನ ದವರೆಗೆ ತಮ್ಮ ಹಕ್ಕು ಪ್ರತಿಪಾದಿಸಲು ಭಾರೀ ಮೆರವಣಿಗೆ ನಡೆಸಲಿದ್ದಾರೆ. ಅರಣ್ಯ ಹಕ್ಕು ಕಾಯ್ದೆ ಅನುಷ್ಠಾನ, 5ನೇ ಅಧಿನಿಯಮ ಜಾರಿ ಹಾಗೂ ಶಾಸನಬದ್ಧ ಅನುದಾನ, ಬುಡಕಟ್ಟು ಉಪಯೋಜನೆ ಅನುದಾನ ಬಿಡುಗಡೆ ಮಾಡಬೇಕೆಂಬುದು ಆದಿವಾಸಿ ಗಳ ಪ್ರಮುಖ ಬೇಡಿಕೆಯಾಗಿದೆ.