ರಸ್ತೆ ಗುಣಮಟ್ಟ ದೃಢೀಕರಣದ ನಂತರ ಕೊಡಗು-ಕೇರಳ ಹೆದ್ದಾರಿ ಲಘುವಾಹನ ಸಂಚಾರಕ್ಕೆ ಅನುಮತಿ ಡಿಸಿ
ಕೊಡಗು

ರಸ್ತೆ ಗುಣಮಟ್ಟ ದೃಢೀಕರಣದ ನಂತರ ಕೊಡಗು-ಕೇರಳ ಹೆದ್ದಾರಿ ಲಘುವಾಹನ ಸಂಚಾರಕ್ಕೆ ಅನುಮತಿ ಡಿಸಿ

July 4, 2018

ವಿರಾಜಪೇಟೆ:  ಕೊಡಗು-ಕೇರಳ ರಾಜ್ಯ ಹೆದ್ದಾರಿ ಮಾಕುಟ್ಟ ಮಾರ್ಗ ವಾಹನ ಸಂಚಾರ ಬಂದ್ ಆಗಿರುವ ರಸ್ತೆಗೆ ಇಂದು ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರು ಭೇಟಿ ನೀಡಿ ರಸ್ತೆಯ ಕಾಮಗಾರಿ ವೀಕ್ಷಿಸಿ ದರು. ಬಳಿಕ ಮಾತನಾಡಿದ ಅವರು ಲೋಕೋಪಯೋಗಿ ಇಲಾಖೆ, ಮಡಿಕೇರಿಯ ಪ್ರಾದೇಶಿಕ ಸಾರಿಗೆ ಕಚೇರಿ ಯಿಂದ ರಸ್ತೆ ಗುಣಮಟ್ಟದ ಧೃಢೀಕರಣದ ಆಧಾರದ ಮೇಲೆ ಇನ್ನು ಎರಡು ದಿನಗಳ ನಂತರ ಲಘು ವಾಹನ ಸಂಚಾರಕ್ಕೆ ಅನುಮತಿ ನೀಡಲಾಗುವುದು ಎಂದರು.

ಮಾಕುಟ್ಟ ರಸ್ತೆಯಲ್ಲಿ ಈಗಾಗಲೇ ಲಘು ವಾಹನ ಸಂಚಾರಕ್ಕೆ ಕಾಮಗಾರಿ ಪೂರ್ಣವಾಗಿದ್ದು ರಸ್ತೆಗೆ ಕುಸಿದಿದ್ದ ಬರೆಯ ಮಣ್ಣನು ತೆಗೆದು ರಸ್ತೆಯ ಮೇಲೆ ಬಿದ್ದಿದ್ದ ಮರಗಳನ್ನು ಬದಿಗೆ ಸರಿಸಲಾ ಗಿದ್ದು. ಎರಡನೇ ಹಂತದ ರಸ್ತೆ ದುರಸ್ತಿಯ ಶಾಶ್ವತ ಕಾರ್ಯಕ್ಕಾಗಿ ರೂ, ಆರು ಕೋಟಿ ವೆಚ್ಚದ ಕಾಮಗಾರಿಗೆ ಪ್ರಸ್ತಾವನೆ ಕಳಿಸ ಲಾಗಿದೆ. ಕಾಮಗಾರಿ ಪೂರ್ಣಗೊಂಡ ನಂತರ ಬಸ್ಸುಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಶ್ರೀ ವಿದ್ಯಾ ತಿಳಿಸಿದರು.

ಮಾಕುಟ್ಟ ರಸ್ತೆ ವೀಕ್ಷಿಸಲು ಜಿಲ್ಲಾಧಿಕಾರಿ ಜೊತೆಯಲ್ಲಿ ತಾಲೂಕು ತಹಸಿಲ್ದಾರ್ ಆರ್.ಗೋವಿಂದರಾಜ್, ಲೋಕೋಪಯೋಗಿ ಇಲಾಖೆಯ ಜಿಲ್ಲಾ ಅಬಿಯಂತರ ಪ್ರಭು, ಸಹಾಯಕ ಅಭಿಯಂತರ ಸುರೇಶ್, ಸರ್ಕಲ್ ಇನ್ಸ್‍ಪೆಕ್ಟರ್ ಕುಮಾರ್ ಆರಾಧ್ಯ, ಅರಣ್ಯ ವಿಭಾಗಾಧಿಕಾರಿ ಮರಿಯಾ ಕ್ರಿಸ್ತರಾಜು, ಕಂದಾಯ ಪರಿವೀಕ್ಷಕ ಪಳಂಗಪ್ಪ, ಠಾಣಾಧಿಕಾರಿ ಸುರೇಶ್ ಬೋಪಣ್ಣ ಹಾಗೂ ಇತರ ಅಧಿಕಾರಿಗಳು ಹಾಜರಿದ್ದರು.

ಪೆರುಂಬಾಡಿ ಚೆಕ್ ಪೋಸ್ಟ್ ಪೊಲೀ ಸರು ತರಾಟೆಗೆ: ಜಿಲ್ಲಾಧಿಕಾರಿ ಅವರು ಮಾಕುಟ್ಟಕ್ಕೆ ತೆರಳುವ ಸಂದರ್ಭದಲ್ಲಿ ಪೆರುಂ ಬಾಡಿ ಚೆಕ್ ಪೋಸ್ಟ್‍ನಲ್ಲಿದ್ದ ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು. ಯಾರೂ ಹಣ ಪಡೆದು ಲಘುವಾಹನಗಳನ್ನು ಮಾಕುಟ್ಟಕ್ಕೆ ಬಿಡುವಂತಿಲ್ಲ ಎಂದು ಆದೇಶಿಸಿದರಲ್ಲದೆ ಕರ್ತವ್ಯವನ್ನು ಸರಿಯಾಗಿ ಮಾಡಿ ಎಂದರು. ಕೇರಳದ ಕೂಟುಪೊಳೆ ಹಾಗೂ ಮಾಕುಟ್ಟದ ನಿವಾಸಿಗಳು ಹಾನಿಗೊಳಗಾದ ರಸ್ತೆಯನ್ನು ಸುಗಮ ಗೊಳಿಸಿ ಲಾರಿ ಬಸ್ಸು ಇತರ ಲಘುವಾಹನಗಳು ಸಂಚರಿಸಲು ತುರ್ತು ಕ್ರಮ ಕೈಗೊಳ್ಳುವಂತೆ ಡಿಸಿ ಮನವಿ ಮಾಡಿದರು.

Translate »