ರೈತರ ಮಾರುಕಟ್ಟೆ ಸಮಸ್ಯೆಗೆ ಆಹಾರ ತಂತ್ರಜ್ಞರು ಪರಿಹಾರ ಕಲ್ಪಿಸಬೇಕು
ಮೈಸೂರು

ರೈತರ ಮಾರುಕಟ್ಟೆ ಸಮಸ್ಯೆಗೆ ಆಹಾರ ತಂತ್ರಜ್ಞರು ಪರಿಹಾರ ಕಲ್ಪಿಸಬೇಕು

December 17, 2018

ಮೈಸೂರು: ದೇಶದ ರೈತರು ಎದುರಿಸುತ್ತಿರುವ ಮಾರುಕಟ್ಟೆ ಸಮಸ್ಯೆಗೆ ಆಹಾರ ತಂತ್ರಜ್ಞಾನ-ವಿಜ್ಞಾನ ಕ್ಷೇತ್ರದ ತಜ್ಞರುಗಳು ಪರಿಹಾರ ಕಂಡು ಹಿಡಿಯಬೇಕಿದೆ ಎಂದು ಕೇಂದ್ರ ಸರ್ಕಾರದ ನ್ಯಾಷನಲ್ ರೈನ್‍ಫೆಡ್ ಏರಿಯಾ ಅಥಾರಿಟಿ ಸಿಇಓ ಅಶೋಕ್ ದಳವಾಯಿ ತಿಳಿಸಿದರು.
ಮೈಸೂರಿನ ಸಿಎಫ್‍ಟಿಆರ್‍ಐ ಆವರಣದಲ್ಲಿ ವಿe್ಞÁನಿಗಳು ಮತ್ತು ತಂತ್ರಜ್ಞರ ಸಂಘವು ಸಿಎಫ್‍ಟಿಆರ್‍ಐ-ಸಿಎಸ್‍ಐಆರ್ ಮತ್ತು ಡಿಅಫ್‍ಆರ್‍ಎಲ್-ಡಿಆರ್‍ಡಿಒ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ 4 ದಿನಗಳ ಅಂತಾರಾಷ್ಟ್ರೀಯ ಆಹಾರ ಸಮಾ ವೇಶ-2018ರ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಜ್ಞಾನ-ತಂತ್ರಜ್ಞಾನವೂ ಬೇಡಿಕೆ ಮತ್ತು ಪೂರೈಕೆ ಸಮಸ್ಯೆ ಬಗೆಹರಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕಿದೆ. ಕೃಷಿ ಉತ್ಪನ್ನಗಳ ಬಳಕೆದಾರರಾಗಿರುವ ರೈತರು, ಆಹಾರೋ ತ್ಪನ್ನಗಳನ್ನು ಬಳಸುವಾಗ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ. ಹಾಗಾಗಿ ಜನರಿಗೆ ಪೆÇೀಷಕಾಂಶಯುಕ್ತ ಆಹಾರ ನೀಡಬೇಕಿದೆ. ಅಲ್ಲದೆ, ದೇಶದಲ್ಲಿ ಸಾಕಷ್ಟು ಜನರು ಅಪೌಷ್ಟಿಕತೆ ಯಿಂದ ಬಳಲುತ್ತಿದ್ದು, ಪೌಷ್ಟಿಕ ಆಹಾರ ಸೇವನೆಗೆ ಒತ್ತು ನೀಡಬೇಕಿದೆ ಎಂದರು.

ನಾವು ಬೆಳೆದ ತರಕಾರಿಗಳನ್ನು 6-8 ಗಂಟೆವರೆಗೂ ಇಟ್ಟುಕೊಳ್ಳಲು ಸಾಧ್ಯವಿದೆ. ಈ ಹಿಂದೆ ಬೆಳೆದ ತರಕಾರಿಗಳನ್ನು ದೂರದ ಜಿಲ್ಲೆಗಳಿಗೆ ಸಾಗಿಸಲು ಸಾಧ್ಯವಾಗುತ್ತಿರಲಿಲ್ಲ. ಆದರೆ, ಇಂದು ಸಂಪರ್ಕ ಕ್ರಾಂತಿಯಾಗಿದ್ದು, ಕ್ಷಣ ಮಾತ್ರದಲ್ಲಿ ದೂರದ ಜಿಲ್ಲೆಗಳನ್ನು ತಲುಪಿ ಮಾರಾಟ ಮಾಡಬಹುದಾಗಿದೆ. ಆದರೆ, ಇದನ್ನು ಯಾರೂ ಬಳಕೆ ಮಾಡಿಕೊಳ್ಳುತ್ತಿಲ್ಲ. ಸಂಪರ್ಕ ಕ್ರಾಂತಿಗೆ ಪೂರಕವಾಗಿ ವಿಜ್ಞಾನ-ತಂತ್ರಜ್ಞಾನ ಬಳಸಿ, ಇರುವ ತರಕಾರಿಗಳು ಮತ್ತಷ್ಟು ಸಮಯದವರೆಗೆ ಉಳಿಯುವಂತಾದರೆ ರೈತರು ಬೆಳೆದ ತರಕಾರಿ ಬೆಳೆಗೆ ಉತ್ತಮ ಬೆಲೆ ತಂದುಕೊಡಲು ಸಾಧ್ಯವಿದೆ ಎಂದರು.
ಈ ಹಿಂದೆ ಭಾರತವು ಆಹಾರ ಸಮಸ್ಯೆಯಿಂದ ಬಳಲುತ್ತಿತ್ತು. ಈ ವೇಳೆ ವಿಜ್ಞಾನ ಮತ್ತು ತಂತ್ರಜ್ಞಾನ ಬಳಸಿ ಕೃಷಿ ಕೈಕೊಂಡಿದ್ದರಿಂದ ಕೆಲವೇ ವರ್ಷಗಳಲ್ಲಿ ಆಹಾರ ಸಮಸ್ಯೆ ದೂರಾಗಿ ಸ್ವಾವಲಂಬನೆ ಸಾಧಿಸಿತು ಎಂದರು. ಎಎಫ್‍ಎಸ್‍ಟಿ ಅಧ್ಯಕ್ಷ ಡಾ. ಪ್ರಬೋದ್ ಎಸ್. ಹಲ್ದೆ, ತಾಂತ್ರಿಕ ಸಮಿತಿ ಅಧ್ಯಕ್ಷ ಡಾ.ಅಶೋಕ್ ಕೆ.ಶ್ರೀವಾಸ್ತವ, ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್‍ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Translate »