ಆರ್‍ಎಂಪಿ ಕ್ವಾಟ್ರ್ರಸ್‍ನ 2 ಮನೆಗಳಲ್ಲಿ 30 ಲಕ್ಷ ಮೌಲ್ಯದ ನಗ-ನಾಣ್ಯ ಕಳವು
ಮೈಸೂರು

ಆರ್‍ಎಂಪಿ ಕ್ವಾಟ್ರ್ರಸ್‍ನ 2 ಮನೆಗಳಲ್ಲಿ 30 ಲಕ್ಷ ಮೌಲ್ಯದ ನಗ-ನಾಣ್ಯ ಕಳವು

December 17, 2018

ಮೈಸೂರು: ಮೈಸೂ ರಿನ ಕುವೆಂಪುನಗರದಲ್ಲಿರುವ ಆರ್‍ಎಂಪಿ ಕ್ವಾಟ್ರ್ರಸ್‍ನ 2 ಮನೆಗಳಲ್ಲಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತುಗಳು ಹಾಗೂ ನಗದನ್ನು ಕಳ್ಳರು ದೋಚಿ ದ್ದಾರೆ. ಕ್ವಾಟ್ರ್ರಸ್‍ನ ಬ್ರಹ್ಮಪುತ್ರ ಬ್ಲಾಕ್ ನಲ್ಲಿರುವ ಸಾಧನಾ ಪ್ರಸಾದ್ ಹಾಗೂ ಶ್ರೀನಿವಾಸ್‍ರಾವ್ ಮನೆಗಳಿಗೆ ನುಗ್ಗಿ ರುವ ಖದೀಮರು, ಸುಮಾರು 26 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 2.5 ಲಕ್ಷ ಮೌಲ್ಯದ ಬೆಳ್ಳಿ ವಸ್ತುಗಳು ಹಾಗೂ 2.6 ಲಕ್ಷ ರೂ. ನಗದನ್ನು ದೋಚಿ ಪರಾರಿ ಯಾಗಿದ್ದಾರೆ. ಸಾಧನಾ ಪ್ರಸಾದ್ ಅವರು ಡಿ.13ರಂದು ಸಂಜೆ ಮನೆಗೆ ಬೀಗ ಹಾಕಿ, ಬೆಂಗಳೂರಿಗೆ ತೆರಳಿ, ಮರುದಿನ ವಿಮಾನ ದಲ್ಲಿ ಪಾಟ್ನಾಗೆ ಹೋಗಿದ್ದರು. ಅಂದು ಸಂಜೆ ಪಕ್ಕದ ಮನೆಯವರು ಸಾಧನಾ ಅವರ ತಾಯಿಗೆ ಕರೆ ಮಾಡಿ, ಕಳ್ಳತನ ವಾಗಿರುವ ಬಗ್ಗೆ ಮಾಹಿತಿ ನೀಡಿದ್ದರು. ಡಿ.15ರಂದು ಬೆಳಿಗ್ಗೆ ಮನೆಗೆ ಬಂದು ಪರಿಶೀಲಿಸಿದಾಗ ಬಾಗಿಲ ಬೀಗ ಮುರಿದು ಸುಮಾರು 19.10 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 6 ಸಾವಿರ ಮೌಲ್ಯದ ಬೆಳ್ಳಿ ವಸ್ತುಗಳು ಹಾಗೂ 2 ಲಕ್ಷ ರೂ. ನಗದು ದೋಚಿರುವುದು ಬೆಳಕಿಗೆ ಬಂದಿತು.

ಹಾಗೆಯೇ ಶ್ರೀನಿವಾಸರಾವ್ ಅವರು ಡಿ.13ರಂದು ಕುಟುಂಬ ಸಮೇತ ತಿರು ಪತಿಗೆ ತೆರಳಿದ್ದರು. ಮರುದಿನ ಸಂಜೆ ನೆರೆಮನೆಯ ಕೃಷ್ಣಕುಮಾರ್ ಅವರು ಕರೆ ಮಾಡಿ,ಕಳ್ಳತನವಾಗಿರುವ ಬಗ್ಗೆ ತಿಳಿಸಿದ್ದಾರೆ. ಡಿ.15ರಂದು ಬೆಳಿಗ್ಗೆ ಮನೆಗೆ ವಾಪಸ್ಸಾದಾಗ ಬಾಗಿಲು ಮುರಿದಿತ್ತು. ಮನೆಯಲ್ಲಿದ್ದ ಪ್ರಮುಖ ದಾಖಲೆ ಪತ್ರಗಳು, ಬಟ್ಟೆಗಳು ಸೇರಿದಂತೆ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಅಲ್ಲದೆ ಬೀರುವಿನಲ್ಲಿದ್ದ ಸುಮಾರು 7 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 2.5 ಲಕ್ಷ ರೂ. ಬೆಳ್ಳಿ ಪದಾರ್ಥ ಗಳು ಹಾಗೂ 60 ಸಾವಿರ ರೂ. ಹಣವನ್ನು ಕಳ್ಳತನ ಮಾಡಿರುವುದು ತಿಳಿಯಿತು.
ವಿಷಯ ತಿಳಿದ ಅಶೋಕಪುರಂ ಠಾಣೆ ಪೊಲೀಸರು, ಸ್ಥಳ ಪರಿಶೀಲನೆ ನಡೆಸಿ, ದೂರಿನನ್ವಯ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಿದ್ದಾರೆ.

ಭದ್ರತೆ ಬೇದಿಸೋ ಖದೀಮರು: ನಜರ್‍ಬಾದ್ ಪೊಲೀಸ್ ಠಾಣಾ ವ್ಯಾಪ್ತಿಯ ಡಿಎಫ್‍ಆರ್‍ಎಲ್ ಕಾಲೋನಿಯಲ್ಲಿ 5 ತಿಂಗಳ ಹಿಂದೆ 2 ಮನೆಗಳಲ್ಲಿ ಕಳ್ಳತನ ನಡೆ ದಿತ್ತು. ಗೋಪಾಲಕೃಷ್ಣ ಹಾಗೂ ಸಗಾಯ್ ದಾಸ್ ಎಂಬುವರ ಮನೆಗಳ ಬೀಗ ಮುರಿದು ಒಳ ನುಗ್ಗಿದ್ದ ಖದೀಮರು, ಲಕ್ಷಾಂತರ ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿದ್ದರು. ಇದೀಗ ಕುವೆಂಪುನಗರದಲ್ಲಿರುವ ಆರ್‍ಎಂಪಿ ಕಾಲೋನಿ ಯಲ್ಲೂ ಅದೇ ಮಾದರಿ ಕಳ್ಳತನ ನಡೆದಿರುವುದು ಆತಂಕದ ಸಂಗತಿ.

ಎರಡೂ ಕಾಲೋನಿಯಲ್ಲಿ ಬಿಗಿ ಭದ್ರತಾ ವ್ಯವಸ್ಥೆಯಿದೆ. ಹಗಲಿರುಳು ಭದ್ರತಾ ಸಿಬ್ಬಂದಿ ಗಸ್ತು ತಿರುಗುತ್ತಾರೆ. ಆದರೂ ಖದೀಮರು ಕಳ್ಳತನ ನಡೆಸಿರುವುದು ಭದ್ರತೆಗೆ ಸವಾಲೆಸೆದಂತಿದೆ. ಮನೆಯವರೆಲ್ಲಾ ಒಂದೆರಡು ದಿನ ಹೊರ ಹೋಗುತ್ತಾರೆ ಎಂಬು ದನ್ನು ತಿಳಿದೇ ಖದೀಮರು ದುಷ್ಕøತ್ಯ ನಡೆಸಿದ್ದಾರೆ. ಬಾಗಿಲಿನ ಬೀಗ ಮುರಿದಿರುವುದು, ಮನೆಯಲ್ಲಿದ್ದ ವಸ್ತುಗಳನ್ನೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿಸಾಡಿರುವುದನ್ನು ನೋಡಿದರೆ ಡಿಎಫ್‍ಆರ್‍ಎಲ್ ಕಾಲೋನಿಯಲ್ಲಿ ಕಳ್ಳತನ ಮಾಡಿದ್ದ ಖದೀಮರೇ, ಆರ್‍ಎಂಪಿ ಕಾಲೋನಿಯಲ್ಲೂ ಕೈ ಚಳಕ ನಡೆಸಿರಬಹುದು ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪೊಲೀ ಸರು, ವಿವಿಧ ಆಯಾಮಗಳಲ್ಲಿ ತನಿಖೆ ಚುರುಕುಗೊಳಿಸಿದ್ದಾರೆ. ಬಿಗಿ ಭದ್ರತೆ ಇದ್ದರೂ ಕಾಲೋನಿ ಒಳ ಆವರಣ ಪ್ರವೇಶಿಸಲು ಹೇಗೆ ಸಾಧ್ಯವಾಯಿತು?. ಮನೆಗೆ ಬೀಗ ಹಾಕಿ ಪ್ರವಾಸಕ್ಕೆ ಹೋಗಿರುವುದನ್ನು ಹೇಗೆ ತಿಳಿಯುತ್ತಾರೆ?. ಯಾರಾದರೂ ಮಾಹಿತಿ ನೀಡುತ್ತಾರೆಯೇ?. ಇಲ್ಲ ಬೇರೆ ಬೇರೆ ಸೋಗಿನಲ್ಲಿ ಹೊಂಚು ಹಾಕಿ, ಮಾಹಿತಿ ಕಲೆ ಹಾಕುತ್ತಾರಾ?. ಹೀಗೆ ಹತ್ತಾರು ಪ್ರಶ್ನೆಗಳು ಕಾಲೋನಿ ನಿವಾಸಿಗಳನ್ನು ಕಾಡುತ್ತಿವೆ.

Translate »