ಸಾರಾ ಸ್ನೇಹ ಬಳಗದಿಂದ ವಿದ್ಯಾರ್ಥಿಗಳಿಗೆ ಉಚಿತ ನೋಟ್‍ಬುಕ್ ವಿತರಣೆ
ಮೈಸೂರು

ಸಾರಾ ಸ್ನೇಹ ಬಳಗದಿಂದ ವಿದ್ಯಾರ್ಥಿಗಳಿಗೆ ಉಚಿತ ನೋಟ್‍ಬುಕ್ ವಿತರಣೆ

January 10, 2019

ಕೆ.ಆರ್.ನಗರ: ಸಾ.ರಾ.ಸ್ನೆಹ ಬಳಗದಿಂದ ಈ ವರ್ಷವೂ ತಾಲೂಕಿನ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ತಲಾ 6 ಲಾಂಗ್ ಬೈಂಡ್ ಪುಸ್ತಕಗಳ ವಿತರಣೆ ಮಾಡಲಾಯಿತು.

ಪಟ್ಟಣದ ಬನ್ನಿಮಂಟಪದ ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಅವರಣದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಸಾ.ರಾ.ಸ್ನೇಹ ಬಳಗದ ಕಾರ್ಯದರ್ಶಿ ಚೌಕಹಳ್ಳಿ ಅನಂದ್ ಮಾತನಾಡಿ, ನಮ್ಮ ಬಳಗದಿಂದ ಪ್ರತಿ ವರ್ಷವು 8ನೇ ತರಗತಿಯಿಂದ ಸ್ನಾತಕೋತ್ತರ ಶಿಕ್ಷಣದವರೆಗಿನ ವಿದ್ಯಾರ್ಥಿಗಳಿಗೆ ಉಚಿತವಾಗಿ ಲಾಂಗ್ ಬೈಂಡ್ ಪುಸ್ತಕಗಳನ್ನು ನೀಡಲಾಗುತ್ತಿದೆ.

ಸಚಿವ ಸಾ.ರಾ.ಮಹೇಶ್ ಅವರ ಆಶಯದಂತೆ ಈ ಬಾರಿ 5ನೇ ತರಗತಿ ಮಕ್ಕಳಿಗೂ ಬೈಂಡ್ ಪುಸ್ತಕ ನೀಡುತ್ತಿದ್ದೇವೆ ಎಂದು ಮುಖ್ಯ ಶಿಕ್ಷಕಿ ಸುಲೋಜನ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಉಳ್ಳವರು, ಇಲ್ಲದವರು ಇಬ್ಬರೂ ಇರುತ್ತಾರೆ. ಆರ್ಥಿಕವಾಗಿ ಹಿಂದುಳಿದÀ ವಿದ್ಯಾರ್ಥಿಗಳಿಗೆ ಸಾ.ರಾ.ಮಹೇಶ್ ಅವರು ಸಮಾಜಮುಖಿ ಸೇವೆಗಳ ಮೂಲಕ ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ಪ್ರಶಂಸಿಸಿದರು.

ಜಾ.ದಳ ವಕ್ತಾರ ಕೆ.ಎಲ್.ರಮೇಶ್, ಕೆ.ಮಹದೇವ್, ಸ್ವಾಮಿಗೌಡ, ಅರಸ್, ಟಿ.ಪಿ.ರೂಪ, ಪ್ರಮೀಳಾ ಹುಗಿ ಕಳಸೇಗೌಡ, ಶಿವಣ್ಣ ಮುಂತಾದವರು ಪಾಲ್ಗೂಂಡಿದ್ದರು.

Translate »