ಜಂಬೂಸವಾರಿ ವೀಕ್ಷಣೆಗೆ ವಿದೇಶಿ ಪ್ರವಾಸಿಗರಿಗೆ ಉಚಿತ ಪಾಸ್
ಮೈಸೂರು

ಜಂಬೂಸವಾರಿ ವೀಕ್ಷಣೆಗೆ ವಿದೇಶಿ ಪ್ರವಾಸಿಗರಿಗೆ ಉಚಿತ ಪಾಸ್

September 22, 2019

ಮೈಸೂರು, ಸೆ.21-ಪ್ರತೀ ವರ್ಷದಂತೆ ಈ ವರ್ಷವೂ ಕಲ್ಪವೃಕ್ಷ ಟ್ರಸ್ಟ್ ಮತ್ತು ಜನ ಚೇತನ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಜಿಲ್ಲಾಡಳಿತದ ಸಹಯೋಗದೊಂದಿಗೆ, ಅ.8ರಂದು ನಡೆಯುವ ದಸರಾ ಮೆರವಣಿಗೆ ವೀಕ್ಷಿಸಲು ವಿದೇಶಿ ಪ್ರವಾಸಿಗರಿಗೆ, ಸಯ್ಯಾಜಿರಾವ್ ರಸ್ತೆಯ ಆರ್ಯುವೇದ ಕಾಲೇಜಿನ ಮುಂಭಾಗ ಫುಟ್‍ಪಾತ್‍ನಲ್ಲಿ ಟ್ರಸ್ಟ್‍ಗಳ ಸ್ವಂತ ಖರ್ಚಿನಲ್ಲಿ, ಶಾಮಿಯಾನ ಅಳವಡಿಸಿ, 1500 ಕುರ್ಚಿಗಳನ್ನು ಅಳವಡಿಸಿ ಉಚಿತವಾಗಿ ವಿದೇಶಿ ಪ್ರವಾಸಿಗರಿಗೆ ಪಾಸುಗಳನ್ನು ವಿತರಿಸಲಾಗುತ್ತಿದೆ. ಅಲ್ಲದೆ ಅವರಿಗೆ ಬಿಸ್ಲೆರಿ ನೀರಿನ ಬಾಟಲ್, ಬಿಸ್ಕತ್ತುಗಳನ್ನು ನೀಡಿ, ಇಂಗ್ಲಿಷ್‍ನಲ್ಲಿ ವೀಕ್ಷಕ ವಿವರಣೆ ನೀಡಲಾಗುತ್ತಿದೆ. ಮೈಸೂರು ದಸರಾ-2019ರ ವಿದೇಶಿ ಪ್ರವಾಸಿಗರ ಉಚಿತ ಪಾಸನ್ನು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ, ಗುರುವಾರ ಮೈಸೂರಿನಲ್ಲಿ ಬಿಡುಗಡೆಗೊಳಿಸಿದರು. ಈ ವೇಳೆ ಕಲ್ಪವೃಕ್ಷ ಟ್ರಸ್ಟ್‍ನ ಎ.ಜಿ.ದೇವರಾಜು, ಎಸ್. ಪ್ರಶಾಂತ್, ಜನಚೇತನ ಟ್ರಸ್ಟ್‍ನ ಆಧ್ಯಕ್ಷ ಪ್ರಸನ್ನ.ಎನ್.ಗೌಡ, ಬೆಟ್ಟೇಗೌಡ, ಶ್ರೀಮತಿ ಲಕ್ಷ್ಮೀದೇವಿ ಹಾಗೂ ಶ್ರೀಯು ಶೇಖರ್ ಉಪಸ್ಥಿತರಿದ್ದರು. ಉಚಿತ ಪಾಸುಗಳಿಗಾಗಿ ದೇವರಾಜು 9164837773, ಪದ್ಮ 9945891099, ಪ್ರಶಾಂತ್ 9844405624 ಅವರುಗಳನ್ನು ಸಂಪರ್ಕಿಸಬಹುದು.

Translate »