ನಾಳೆ `ಕಾಯಕ ತಪಸ್ವಿ’ ದೃಶ್ಯ-ನಾಟ್ಯ-ಸಂಗಮ ಪ್ರದರ್ಶನ
ಮೈಸೂರು

ನಾಳೆ `ಕಾಯಕ ತಪಸ್ವಿ’ ದೃಶ್ಯ-ನಾಟ್ಯ-ಸಂಗಮ ಪ್ರದರ್ಶನ

September 22, 2019

ಮೈಸೂರು, ಸೆ.21- ಸುತ್ತೂರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠದ 23ನೇ ಪೀಠಾಧಿಪತಿಗಳಾದ ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಮಹಾ ಸ್ವಾಮಿಗಳವರ ಜೀವನಾಧಾರಿತ ಕಥಾನಕ `ಕಾಯಕ ತಪಸ್ವಿ’ ದೃಶ್ಯ-ನಾಟ್ಯ-ಸಂಗಮ ಪ್ರದರ್ಶನವನ್ನು ಸೆ.23ರಂದು ಸಂಜೆ 6 ಗಂಟೆಗೆ ಮೈಸೂರಿನ ಕಲಾಮಂದಿರದಲ್ಲಿ ಏರ್ಪಡಿಸಲಾಗಿದೆ. ಶ್ರೀಗಳ ವರ ಜೀವನ ದರ್ಶನವನ್ನು ಸಂಗೀತ, ನೃತ್ಯ ಹಾಗೂ ನಾಟಕದ ಮೂಲಕ ಧ್ವನಿ ಬೆಳಕಿನ ವಿಶಿಷ್ಟ ರಂಗವಿನ್ಯಾಸದೊಡನೆ ಬೆಂಗಳೂ ರಿನ ಅರ್ಥ ಅಕಾಡೆಮಿಯವರು ಪ್ರಸ್ತುತಪಡಿಸಲಿದ್ದಾರೆ. ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಸಂಸದ ಪ್ರತಾಪ್ ಸಿಂಹ ಅಧ್ಯಕ್ಷತೆ ವಹಿಸುವರು. ಶಾಸಕರಾದ ಜಿ.ಟಿ. ದೇವೇಗೌಡ, ಎಸ್.ಎ. ರಾಮದಾಸ್, ತನ್ವೀರ್ ಸೇಠ್, ಎಲ್.ನಾಗೇಂದ್ರ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

Translate »