ಶಿಲ್ಪ ಕಲಾವಿದರ ಕಡೆಗಣನೆ
ಮೈಸೂರು

ಶಿಲ್ಪ ಕಲಾವಿದರ ಕಡೆಗಣನೆ

September 22, 2019

ಮೈಸೂರು, ಸೆ. 21(ಆರ್‍ಕೆ)- ದಸರಾ ಮಹೋತ್ಸವದಲ್ಲಿ ಅರಮನೆ ಸೌಂದರ್ಯಕ್ಕೆ ಹಗಲಿರುಳು ದುಡಿದ ಚಿತ್ರ ಮತ್ತು ಶಿಲ್ಪ ಕಲಾವಿದರನ್ನು ಕಡೆಗಣಿಸಲಾಗುತ್ತಿದೆ ಎಂದು ಮೈಸೂರು ಆರ್ಟ್ ಗ್ಯಾಲರಿಯ ಹಿರಿಯ ಶಿಲ್ಪ ಕಲಾವಿದ ಎಲ್. ಶಿವ ಲಿಂಗಪ್ಪ ಆರೋಪಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ದಸರಾ ಸಂದರ್ಭದಲ್ಲಿ ಸರ್ಕಾರವು ಆಸ್ಥಾನ್ ವಿದ್ವಾನ್ ಪ್ರಶಸ್ತಿ ನೀಡುತ್ತಿದೆ. ಈ ವರ್ಷದಿಂದ ಲಾದರೂ ಚಿತ್ರ ಮತ್ತು ಶಿಲ್ಪ ಕಲಾವಿದರಿಗೂ ಈ ಪ್ರಶಸ್ತಿಯನ್ನು ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

Translate »