ಮೈಸೂರಿನ ಪ್ರೊ. ಬಿ.ಎಸ್. ವಿಜಯರಾಘವನ್ ಅವರಿಗೆರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ
ಮೈಸೂರು

ಮೈಸೂರಿನ ಪ್ರೊ. ಬಿ.ಎಸ್. ವಿಜಯರಾಘವನ್ ಅವರಿಗೆರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ

September 22, 2019

ಮೈಸೂರು, ಸೆ.21(ಆರ್‍ಕೆ)- 2019ನೇ ಸಾಲಿನ ರಾಜ್ಯ ಸಂಗೀತ ವಿದ್ವಾನ್ ಪ್ರಶ ಸ್ತಿಗೆ ಮೈಸೂರಿನ ಖ್ಯಾತ ಸಂಗೀತ ವಿದ್ವಾಂಸ ರಾದ ಪ್ರೊ.ಬಿ.ಎಸ್.ವಿಜಯರಾಘವನ್ ಅವರನ್ನು ಆಯ್ಕೆ ಮಾಡಲಾಗಿದೆ. ಮೈಸೂರು ಜಿಲ್ಲಾ ಪಂಚಾಯ್ತಿ ಕಚೇರಿ ಸಭಾಂಗಣ ದಲ್ಲಿ ದಸರಾ ಸಾಂಸ್ಕøತಿಕ ಕಾರ್ಯಕ್ರಮ ಗಳ ಪೋಸ್ಟರ್ ಬಿಡುಗಡೆ ಮಾಡಿದ ನಂತರ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರು 2019ನೇ ಸಾಲಿನ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿಗೆ ಪ್ರೊ. ಬಿ.ಎಸ್.ವಿಜಯರಾಘವನ್ ಆಯ್ಕೆ ಯಾಗಿದ್ದಾರೆ ಎಂದು ಪ್ರಕಟಿಸಿದರು.

ದಸರಾ ಮಹೋತ್ಸವದ ಉದ್ಘಾಟನೆ ದಿನ ಸೆಪ್ಟೆಂಬರ್ 29ರಂದು ಸಂಜೆ ಅರಮನೆ ಆವರಣದಲ್ಲಿ ನಡೆಯಲಿರುವ ಸಾಂಸ್ಕøತಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾ ರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ ಅವರು ಸಂಗೀತ ವಿದ್ವಾನ್ ಪ್ರಶಸ್ತಿಯನ್ನು ಪ್ರದಾನ ಮಾಡುವರು.

ಮೈಸೂರಿನ ಕುವೆಂಪುನಗರದಲ್ಲಿ ವಾಸ ವಾಗಿರುವ 85 ವರ್ಷದ ಪ್ರೊ.ಬಿ.ಎಸ್. ವಿಜಯರಾಘವನ್ ಮೂಲತಃ ಶಿವಮೊಗ್ಗ ದವರು. ಎಂಎ ಮತ್ತು ವಿದ್ವತ್ ಕರ್ನಾ ಟಕ ಸಂಗೀತ ಪದವೀಧರರಾದ ಇವರು, ಸಂಗೀತ ಶಾಸ್ತ್ರ ಪ್ರವೀಣರಾದ ತಾತ ಬಿ.ಎಸ್.ರಾಮಯ್ಯ, ದೊಡ್ಡಪ್ಪ ಡಾ.ಬಿ. ದೇವೇಂದ್ರಪ್ಪ, ತಂದೆ ಬಿ.ಶೇಷಪ್ಪ ಹಾಗೂ ಚಿಕ್ಕಪ್ಪ ಪ್ರೊ.ಕೃಷ್ಣಪ್ಪ ಅವರಿಂದ ಸಂಗೀ ತಾಭ್ಯಾಸ ಮಾಡಿದವರು.

ಹಾಡುಗಾರಿಕೆ ಜೊತೆಗೆ ವೀಣೆ, ಪಿಟೀಲು, ಅವಧಾನ, ತಾಳ, ಪಂಚತಾಳೇಶ್ವರಿಯಲ್ಲಿ ಪ್ರಾವೀಣ್ಯತೆ, ವ್ಯಾಸರಾಜ, ವಾದಿರಾಜ, ಜಗನ್ನಾಥ ದಾಸರ ಕೃತಿಗಳಿಗೆ ರಾಗ-ತಾಳ ಗಳನ್ನು ಜೋಡಿಸಿರುವ ಪ್ರೊ.ವಿಜಯರಾಘ ವನ್, ಸೋಮವಾರಪೇಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ, ಮೈಸೂರು ವಿಶ್ವವಿದ್ಯಾನಿಲಯದ ಲಲಿತಕಲಾ ಕಾಲೇಜಿ ನಲ್ಲಿ ಸಂಗೀತ ಉಪನ್ಯಾಸಕರಾಗಿ, ಸಹಾ ಯಕ ಪ್ರಾಧ್ಯಾಪಕರಾಗಿ ಹಾಗೂ ಪ್ರಾಂಶು ಪಾಲರಾಗಿ ಸೇವೆ ಸಲ್ಲಿಸಿ 1995ರಲ್ಲಿ ನಿವೃತ್ತ ರಾಗಿದ್ದಾರೆ. 13ನೇ ವಯಸ್ಸಿನಲ್ಲಿ ಶ್ರೀ ಜಯಚಾಮರಾಜ ಒಡೆಯರ್ ಸಮ್ಮುಖ ದಲ್ಲಿ ಗಾಯನ ನಡೆಸಿಕೊಟ್ಟಿದ್ದ ಅವರಿಗೆ ಮಹಾರಾಜರಿಂದ ಶಿಷ್ಯವೇತನ ಪುರಸ್ಕಾರ ಲಭಿಸಿದೆ. ನವದೆಹಲಿಯಲ್ಲಿ 1957ರಲ್ಲಿ ನಡೆದ ಅಂತರ ವಿಶ್ವವಿದ್ಯಾನಿಲಯ ಯುವ ಜನೋತ್ಸವದಲ್ಲಿ ಮೈಸೂರು ವಿಶ್ವವಿದ್ಯಾನಿಲ ಯದ ಪರವಾಗಿ ಭಾಗವಹಿಸಿದ್ದರು.

ಗಾನ ಕಲಾ ನಿಪುಣ ಪ್ರಶಸ್ತಿ, ಶ್ರೀ ಶಿವ ಕುಮಾರಸ್ವಾಮಿಗಳಿಂದ ಗಾನ ಕಲಾ ಭೂಷಣ ಬಿರುದು, ಕರ್ನಾಟಕ ಕಲಾ ತಿಲಕ, 1994ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, ಸುಸ್ವರ ಪ್ರಶಸ್ತಿ, ಅನನ್ಯ ಪುರಸ್ಕಾರ, ಜೆಎಸ್‍ಎಸ್ ಸಂಗೀತ ಸಭಾದಿಂದ ಸಂಗೀತ ವಿದ್ಯಾನಿಧಿ ಪುರಸ್ಕಾರ, ನಾದಸುರಭಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಅವರು ಗಳಿಸಿದ್ದಾರೆ.

Translate »