ಮೈಸೂರು, ಸೆ.21(ಪಿಎಂ)- ಯುವ ಜನತೆಯೇ ಪ್ರಗತಿಪರ ಭಾರತ ನಿರ್ಮಾ ಣಕ್ಕೆ ಪ್ರೇರಕಶಕ್ತಿ ಎಂದು ಮುಂಬೈನ ಇಲ್ಯೂಮ್ನೆ ನಾಲೆಡ್ಜ್ ರಿಸೋರ್ಸ್‍ನ ಸಂಸ್ಥಾ ಪಕ ಹಾಗೂ ಸಿಇಓ ಶ್ರೀನಿವಾಸ್ ವೆಂಕಟ ರಾಮ್ ಅವರು ಅಭಿಪ್ರಾಯಪಟ್ಟರು.
ಮೈಸೂರು ವಿವಿ ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಸ್ವಾಮಿ ವಿವೇಕಾ ನಂದರ ಚಿಕಾಗೋ ಭಾಷಣದ 125ನೇ ವರ್ಷಾಚರಣೆ ಅಂಗವಾಗಿ ಶ್ರೀ ರಾಮಕೃಷ್ಣ ಆಶ್ರಮ, ಮೈಸೂರು ವಿವಿ ಜಂಟಿ ಆಶ್ರಯ ದಲ್ಲಿ ಹಮ್ಮಿಕೊಂಡಿರುವ ರಾಷ್ಟ್ರೀಯ ವಿಚಾರ ಸಂಕಿರಣದ 3ನೇ ವಿಚಾರ ಗೋಷ್ಠಿ ಯಲ್ಲಿ ಶನಿವಾರ `ಪ್ರಗತಿಪರ ಭಾರತ ನಿರ್ಮಾಣಕ್ಕೆ ಯುವ ಶಕ್ತಿಯ ಪರಿ ವರ್ತನೆ’ ಕುರಿತು ಮಾತನಾಡಿದರು.
ಅರ್ಥ ವ್ಯವಸ್ಥೆಯ ಅಭಿವೃದ್ಧಿಯೇ ಪ್ರಗತಿ ಪರ ಭಾರತ ನಿರ್ಮಾಣಕ್ಕೆ ರಹದಾರಿ ಎನ್ನುವ ಭಾವನೆ ಬಹುತೇಕರಲ್ಲಿದೆ. ಆದರೆ ಇದು ಪ್ರಗತಿಯ ಒಂದು ಭಾಗವಷ್ಟೇ. ಸಾಮಾಜಿಕ ಹಾಗೂ ಮಾನವ ಕುಲದ ಪ್ರಗತಿಯೂ ಒಳಗೊಂಡಂತೆ ಅರ್ಥ ವ್ಯವಸ್ಥೆ ಅಭಿವೃದ್ಧಿಗೊಳ್ಳಬೇಕು. ಆಗಲೇ ರಾಷ್ಟ್ರದ ಕಲ್ಯಾಣ ಸಾಧ್ಯ. ಇಂತಹ ಪ್ರಗತಿ ಶೀಲ ಭಾರತ ನಿರ್ಮಿಸಲು ಯುವ ಶಕ್ತಿ ತನ್ನ ಆಂತರ್ಯದ ಅದ್ಭುತ ಸಾಮಥ್ರ್ಯ ಅರಿಯಬೇಕು ಎಂದು ತಿಳಿಸಿದರು.
ಪ್ರತಿಯೊಬ್ಬರು ತಮ್ಮ ಉಜ್ವಲ ಬದು ಕಿಗೆ ತಾವೇ ಶಿಲ್ಪಿ ಎನ್ನುವುದನ್ನು ಅರಿಯ ಬೇಕು. ವಿಶೇಷವಾಗಿ ನಮ್ಮ ಯುವ ಜನತೆ ಈ ವಿಚಾರದಲ್ಲಿ ಹೆಚ್ಚು ಜಾಗೃತರಾಗ ಬೇಕು. ನಮ್ಮ ಸುತ್ತಮುತ್ತಲಲ್ಲಿ ಬದ ಲಾವಣೆ ತರಲು ಮುಂದಾಗಬೇಕು. ಸನ್ನಿ ವೇಶಕ್ಕೆ ಅನುಗುಣವಾಗಿ ಸಮನ್ವಯತೆ ಹಾಗೂ ಸಹಕಾರದೊಂದಿಗೆ ಕಾರ್ಯ ಪ್ರವೃತ್ತರಾಗುವುದನ್ನು ಕಲಿಯಬೇಕು. ಕೇವಲ ಶೈಕ್ಷಣಿಕ ಪದವಿಗಳಿಗೆ ಸೀಮಿತಗೊಳ್ಳದೇ ನಮ್ಮ ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣಕ್ಕೆ ಆದ್ಯತೆ ನೀಡಬೇಕು ಎಂದು ಹೇಳಿದರು.
ಸ್ವಸಾಮಥ್ರ್ಯ ವೃದ್ಧಿಸಿಕೊಳ್ಳಲು ನಮ್ಮೊಳ ಗಿನ ಆಂತರಿಕ ಶಕ್ತಿ ಎಚ್ಚರಿಸಿಕೊಳ್ಳಬೇಕು. ಆಗ ಮಾತ್ರ ನಮ್ಮಿಂದ ಮಹತ್ಕಾರ್ಯ ಸಾಧಿಸಲು ಸಾಧ್ಯವಾಗುತ್ತದೆ. ಬೇರೆಯ ವರ ನಿರೀಕ್ಷೆಗಳಲ್ಲೇ ಬಂಧಿಯಾಗದೇ ತನ್ನ ಗುರಿಯ ಶಿಲ್ಪಿ ತಾನಾಗಲು ಒತ್ತು ನೀಡ ಬೇಕು. ಯಾಂತ್ರಿಕತೆಯಲ್ಲೇ ತಲ್ಲೀನವಾಗಿ ರುವ ಸಾಂಸ್ಥಿಕ ವಲಯದಲ್ಲಿ ಮಾನವೀ ಯತೆಯನ್ನು ಪುನರ್ ಪ್ರತಿಷ್ಠಾಪಿಸುವ ಅಗತ್ಯವಿದ್ದು, ಸಾಮರಸ್ಯದಿಂದ ಕೂಡಿದ ಅಭಿವೃದ್ಧಿ ಪಥದತ್ತ ರಾಷ್ಟ್ರ ಸಾಗಬೇಕಿದೆ ಎಂದರು. `ಅಮೆರಿಕದಲ್ಲಿ ಕಂಡು ಬಂದ ಸ್ವಾಮಿ ವಿವೇಕಾನಂದರ ಆಧ್ಯಾತ್ಮಿಕ ಶಕ್ತಿಯ ಅಭಿವ್ಯಕ್ತಿ’ ಕುರಿತು ಮಾತನಾಡಿದ ಬೆಂಗ ಳೂರು ಬಸವನಗುಡಿಯ ಶ್ರೀ ರಾಮಕೃಷ್ಣ ಆಶ್ರಮದ ಸ್ವಾಮಿ ಮಂಗಳನಾಥಾನಂದ ಮಹಾರಾಜ್, ಆಂತರ್ಯದಲ್ಲಿ ಅಡಕ ವಾಗಿರುವ ದಿವ್ಯ ಶಕ್ತಿಯನ್ನು ಇಡೀ ಜಗ ತ್ತಿಗೇ ಹೇಳಲು ಬಂದ ಶ್ರೀ ರಾಮಕೃಷ್ಣ ಪರಮ ಹಂಸರ ಪ್ರಥಮ ಶಿಷ್ಯ ಸ್ವಾಮಿ ವಿವೇಕಾ ನಂದ. ಅಂತಹ ಅದ್ಭುತ ಆಧ್ಯಾತ್ಮಿಕ ಶಕ್ತಿ ಯನ್ನು ಅವರು ಸಾಧಿಸಿಕೊಂಡಿದ್ದರು ಎಂದರು.
ಪಾಶ್ಚಿಮಾತ್ಯ ಮಹಿಳೆಯೊಬ್ಬರು ಸ್ವಾಮಿ ವಿವೇಕಾನಂದರು ಉಪನ್ಯಾಸ ಮುಗಿಸಿ, ಬಳಿಕ ಅವರಿಗೆ ಹಸ್ತಲಾಘವ ನೀಡುತ್ತಾಳೆ. ಆಕೆಗೆ 3 ದಿನಗಳವರೆಗೆ ಕೈ ತೊಳೆಯ ಬೇಕು ಎನ್ನಿಸುವುದೇ ಇಲ್ಲ. ಅಷ್ಟರ ಮಟ್ಟಿಗೆ ಅವಳಲ್ಲಿ ತನ್ನ ಕೈ ಪಾವಿತ್ರ್ಯಗೊಂಡಿದೆ ಎಂಬ ಭಾವ ಬಂದಿರುತ್ತದೆ. ಇದು ಸ್ವಾಮಿ ವಿವೇಕಾನಂದರ ಆಧ್ಯಾತ್ಮಿಕ ಶಕ್ತಿಯ ವೈಶಿಷ್ಟ್ಯ ಎಂದು ಹೇಳಿದರು.
ಮೈಸೂರಿನ ಶ್ರೀ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದಜಿ ಮಹಾ ರಾಜ್, ಮೈಸೂರು ವಿವಿ ಕುಲಪತಿ ಪ್ರೊ.ಜಿ. ಹೇಮಂತ್‍ಕುಮಾರ್, ರಾಮ ಕೃಷ್ಣ ವಿದ್ಯಾಶಾಲಾ ಪ್ರಾಂಶುಪಾಲ ಎಸ್. ಬಾಲಾಜಿ ಹಾಜರಿದ್ದರು.