ಮೈಸೂರು, ಸೆ.21- ನಂಜನಗೂಡು ವಿಭಾಗದ ಚಾಮುಂಡೇಶ್ವರಿ ವಿದ್ಯುತ್ ಸರಬ ರಾಜು ನಿಗಮ ನಿಯಮಿತ ವತಿಯಿಂದ 2ನೇ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಯನ್ನು ಹಮ್ಮಿಕೊಳ್ಳಲಾಗಿದೆ. ಸೆ.23ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಬನ್ನೂರು ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯ ಬನ್ನೂರು ಪಟ್ಟಣ, ಕೊಡಗಳ್ಳಿ, ಬೀಸೀಹಳ್ಳಿ, ಹೆಗ್ಗೂರು, ಅತ್ತಳ್ಳಿ, ಕೇತುಪುರ, ರಂಗಸಮುದ್ರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪ್ರದೇಶ, ಸೆ.24ರಂದು ಮಲಿಯೂರು ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯ ಚಿದ್ರವಳ್ಳಿ ಮತ್ತು ದೊಡ್ಡಬಾಗಿಲು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪ್ರದೇಶ, ಸುತ್ತೂರು, ಬಿಳಿಗೆರೆ, ಹೊರಳವಾಡಿ, ನಗರ್ಲೆ, ತಾಯೂರು, ಮಲ್ಲೂಪುರ, ಹೊಸಕೋಟೆ, ತುಮ್ಮನೇರಳೆ, ಗೋಳೂರು ಮತ್ತು ಮಹದೇವನಗರ, ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.