ಮೈಸೂರು,ಸೆ.21(ಎಸ್‍ಪಿಎನ್)-ಸ್ವಾಮಿ ವಿವೇಕಾನಂದರು ಚಿಕಾಗೋ (1893ರ ಸೆ.11ರಂದು) ಸರ್ವಧರ್ಮ ಸಮ್ಮೇಳನ ದಲ್ಲಿ ಭಾಷಣ ಮಾಡಿದ ನಂತರ ಭಾರತ ಆಧ್ಯಾತ್ಮದ ಬಗ್ಗೆ ಯೂರೋಪಿಯನ್ನ ರಲ್ಲಿದ್ದ ತಾತ್ಸಾರ ಮನೋಭಾವನೆ ಕಡಿಮೆ ಯಾಗಿ, ಅಂದಿನಿಂದ ವಿದೇಶಿ ನೆಲದಲ್ಲಿ ಭಾರತ ಸಂತರ ಬಗ್ಗೆ ಪೂಜ್ಯನೀಯ ಸ್ಥಾನ ದೊರಕಿದೆ ಎಂದು ಆದಿಚುಂಚನ ಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.
ಮೈಸೂರು ವಿವಿ ಮಾನಸ ಗಂಗೋತ್ರಿ ಆವರಣದ ಸೆನೆಟ್ ಭವನದಲ್ಲಿ ಮೈಸೂರು ವಿವಿ ಮತ್ತು ಶ್ರೀ ರಾಮಕೃಷ್ಣಾ ಶ್ರಮದ ಸಹಯೋಗದೊಂದಿಗೆ ಜರುಗಿದ ಚಿಕಾಗೋ ಸರ್ವಧರ್ಮ ಸಮ್ಮೇಳನದಲ್ಲಿ ಮಾತನಾಡಿದ `ಸ್ವಾಮಿ ವಿವೇಕಾನಂದರ ಭಾಷಣಕ್ಕೆ 125 ನೇ ವಾರ್ಷಿಕೋತ್ಸವ’ದ ಪ್ರಯುಕ್ತ ನಡೆದ ರಾಷ್ಟ್ರೀಯ ವಿಚಾರ ಸಂಕಿರಣದ ಮುಕ್ತಾಯ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಅಮೆರಿಕಾ ಚಿಕಾಗೋದಲ್ಲಿ ಸ್ವಾಮಿ ವಿವೇ ಕಾನಂದರು ಭಾಷಣ ಮಾಡಿದ ನಂತರ ಪಾಶ್ಚಾತ್ಯರಿಗೆ ಭಾರತ ಪರಂಪರೆ ಬಗ್ಗೆ ಅಧ್ಯ ಯನ ನಡೆಸುವ ಬಗ್ಗೆ ಒಲವು ವ್ಯಕ್ತವಾ ಯಿತು. ಅಲ್ಲಿಯವರೆಗೆ ನಮ್ಮನ್ನು ಭಿಕ್ಷುಕರು, ಹಾವಾಡಿಗರು ಎಂಬೆಲ್ಲಾ ವಿಶೇ ಷಣದೊಂ ದಿಗೆ ಊಹಿಸಿಕೊಂಡಿದ್ದ ಕಾಲ ಘಟ್ಟವದು. ಈ ಮನೋಭಾವವನ್ನು ಹೋಗಲಾಡಿಸಿದ ಕೀರ್ತಿ ವಿವೇಕಾನಂದರಿಗೆ ಸಲ್ಲುತ್ತದೆ ಎಂದರು.
ಸರ್ವಧರ್ಮ ಸಮ್ಮೇಳನದಲ್ಲಿ ಮೊದ ಲಿಗೆ ಅಮೆರಿಕಾದ ನನ್ನ ಸೋದರ, ಸೋದರಿಯರೇ ಎಂದು ಮಾತು ಆರಂ ಭಿಸಿ, ನೀವು ನಮ್ಮನ್ನು ಬರಮಾಡಿಕೊಂಡ ಪರಿ ಮತ್ತು ನಿಮ್ಮ ಆತಿಥ್ಯದಿಂದ ನಮ್ಮ ಹೃದಯ ತುಂಬಿ ಬಂದಿದೆ. ನಿಮ್ಮ ಪ್ರೀತಿಗೆ ಏನು ಹೇಳಬೇಕೆಂದು ತೋಚುತ್ತಿಲ್ಲ, ಮೂಕನಾಗಿದ್ದೇನೆ. ಪ್ರಪಂಚದ ಪುರಾತನ ಧರ್ಮದ ಪರವಾಗಿ ಹಾಗೂ ಕೋಟ್ಯಾಂ ತರ ಹಿಂದೂಗಳ ಪರವಾಗಿ ನಿಮಗೆ ಧನ್ಯವಾದ ಸಮರ್ಪಿಸುತ್ತೇನೆ. ಈ ವೇದಿಕೆ ಯಲ್ಲಿ ಬಹುದೂರದಿಂದ ಬಂದವರು, ನಾನಾ ಪ್ರದೇಶಗಳಿಗೆ ಸೇರಿದವರು ಒಟ್ಟಾ ಗಿದ್ದೀರಿ, ಸಹಿಷ್ಣುತೆ ಕುರಿತು ಮಾತನಾ ಡುತ್ತಿದ್ದೀರಿ. ಇಡೀ ಪ್ರಪಂಚಕ್ಕೆ ಸಹಿಷ್ಣುತೆ ಕಲಿಸಿದ ಧರ್ಮಕ್ಕೆ ಸೇರಿದವನೆಂಬ ಹೆಮ್ಮೆ ನನಗಿದೆ ಎಂಬ ಮಾತುಗಳು ಸಮ್ಮೇಳನ ದಲ್ಲಿ ಸೇರಿದ್ದ ಎಲ್ಲರ ಮನಸೆಳೆಯಿತು ಎಂದರು.
ಸ್ವಾಮಿ ವಿವೇಕಾನಂದರ ಮಾತು ಹೃದಯ ಮುಟ್ಟುವ ವಿಶೇಷ ವಾಕ್ಯಗಳು. ಇದನ್ನು ಇಂದಿನ ಪೀಳಿಗೆ ಅರ್ಥಮಾಡಿ ಕೊಂಡು ಪ್ರೇರಣೆಗೊಂಡು ಈ ಸಭಾಂ ಗಣದಲ್ಲಿ ಸೇರಿದ್ದೀರಿ, ಇದರ ಬಗ್ಗೆ ನಾವೇನು ಹೆಚ್ಚು ಹೇಳುವ ಅವಶ್ಯಕತೆ ಇಲ್ಲ. ನಾನು ಮೈಸೂರು ವಿವಿ ವಿದ್ಯಾರ್ಥಿಯಾಗಿದಾಗ, ಸ್ವಾಮಿ ವಿವೇಕಾನಂದರ ಆಧ್ಯಾತ್ಮ ಭಾಷಣ ಗಳಿಂದ ಪ್ರೇರಣೆಗೊಂಡು ಅವರ ಆಧ್ಯಾತ್ಮ ಜೀವನ ಬಗ್ಗೆ ಅಧ್ಯಯನ ನಡೆಸಿದ್ದೇನೆ. ದೇಶದಲ್ಲಿರುವ ನಾನಾ ಪಂಥ, ಸಮು ದಾಯದ ಬಹುತೇಕ ಸಂತರ ಹಿಂದೆ ವಿವೇಕಾನಂದರ ಪ್ರಭಾವವಿದೆ. ಅವರಲ್ಲಿ ನಾನೂ ಒಬ್ಬ ಎಂದು ಹೇಳಿದರು.
ನಾನೂ ವಿದ್ಯಾರ್ಥಿ ವೇತನ ಪಡೆದಿದ್ದೆ: ಕಳೆದ 25 ವರ್ಷಗಳ ಹಿಂದೆ ಚಿಕಾಗೋ ಭಾಷಣದ 100 ನೇ ವರ್ಷದ ಕಾರ್ಯ ಕ್ರಮದ ಪ್ರಯುಕ್ತ ಮೈಸೂರು ರಾಮ ಕೃಷ್ಣಾಶ್ರಮದಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಿದ್ದರು. ಆ ಸಮಯದಲ್ಲಿ ಮೈಸೂರು ವಿವಿ ವಿದ್ಯಾರ್ಥಿಯಾಗಿದ್ದ ನಾನೂ ಅರ್ಜಿ ಸಲ್ಲಿಸಿದೆ. ಅದರಂತೆ ನನಗೂ ವಿದ್ಯಾರ್ಥಿವೇತನ ನೀಡಲಾಯಿತು. ವಿದ್ಯಾರ್ಥಿ ವೇತನ ಪಡೆಯಲು ಬೆಂಗ ಳೂರಿನ ಆಶ್ರಮಕ್ಕೆ ಹೋಗಿದ್ದೆ. ವಿದ್ಯಾರ್ಥಿ ವೇತನ ಸ್ವೀಕರಿಸಿ, ಆ ಹಣದಲ್ಲಿ ವಿವೇಕಾ ನಂದ ಸಂದೇಶವಿರುವ ಎಲ್ಲಾ ಪುಸ್ತಕ ಗಳನ್ನು ಖರೀದಿಸಿದೆ. ಕೊನೆಗೆ ಮೈಸೂ ರಿನ ಬಸ್ ಪ್ರಯಾಣಕ್ಕೂ ಹಣ ಇಟ್ಟು ಕೊಳ್ಳುವುದು ಮರೆತು ಹೋಯಿತು.
ಇನ್ನೂ ಊರಿಗೆ ಹೋಗುವುದು ಹೇಗೆ ಎಂದು ಮತ್ತೆ ಆಶ್ರಮಕ್ಕೆ ಹಿಂದಿರುಗಿ ಒಂದೆ ರಡು ಪುಸ್ತಕಗಳನ್ನು ವಾಪಸ್ ನೀಡಿ ಹಣ ಕೇಳಿದೆ. ಆಗ ಅಲ್ಲಿನ ಸಿಬ್ಬಂದಿ, ರಶೀದಿ ಹಾಕಿದ ಮೇಲೆ ಮತ್ತೆ ಹಣ ನೀಡಲು ಸಾಧ್ಯ ವಿಲ್ಲ. ಆಶ್ರಮದ ಮುಖ್ಯಸ್ಥರಾದ ಸ್ವಾಮಿ ಪುರುಷೋತ್ತಮಾನಂದಜೀ ಅವರನ್ನು ಭೇಟಿಯಾಗುವಂತೆ ಸಲಹೆ ನೀಡಿದರು. ಅದರಂತೆ ಸ್ವಾಮೀಜಿ ಅವರನ್ನು ಭೇಟಿಯಾಗಿ ನಡೆದಿರುವ ವಿಚಾರ ಹೇಳಿಕೊಂಡೆ. ಆಗ ಅವರು ಎಲ್ಲಾ ಸ್ವಾಮೀಜಿಗಳನ್ನು ಕರೆದು ನಡೆದಿರುವ ವಿಚಾರವನ್ನು ಹಂಚಿಕೊಂಡು ಸಂಭ್ರಮಿಸಿದರು. ಪಡೆದಿರುವ ಪುಸ್ತಕ ಗಳನ್ನು ಎಂದಿಗೂ ಹಿಂದಿರುಗಿಸಬೇಡ ಎಂದು ಹೇಳಿ ಬಸ್ ಪ್ರಯಾಣಕ್ಕೆ ನಿಗದಿ ಗಿಂತ ಹೆಚ್ಚಿನ ಹಣವನ್ನೇ ನೀಡಿ ಕಳು ಹಿಸಿದರು ಎಂದು ನೆನಪಿಸಿ ಕೊಂಡರು.
ಯುವಕರಿಗೆ ಸ್ಫೂರ್ತಿಯಾಗಬೇಕು: ಮೈಸೂರು ಯಾದವಗಿರಿಯ ಶ್ರೀ ರಾಮ ಕೃಷ್ಣಾಶ್ರಮದ ಅಧ್ಯಕ್ಷರಾದ ಸ್ವಾಮಿ ಮುಕ್ತಿ ದಾನಂದ ಜೀ ಮಹಾರಾಜ್ ಮಾತ ನಾಡಿ, ಸಮಾಜದಲ್ಲಿ ಉತ್ತಮ ಆಲೋ ಚನೆ, ವಿಚಾರ ಧಾರೆಗಳಿಗೆ ಕೊರತೆಯಿಲ್ಲ. ಆದರೆ, ಅವು ಯುವ ಪೀಳಿಗೆಯ ಮನ ಪ್ರವೇಶಿಸುತ್ತಿಲ್ಲ. ಅನಾವಶ್ಯಕ ವಿಚಾರಗಳಿಗೆ ಹಾಗೂ ಮೊಬೈಲ್‍ನಲ್ಲಿ ಮುಳುಗಿರುವ ಯುವ ಜನತೆ ಮಾನಸಿಕ ಶಾಂತಿ ನೆಮ್ಮದಿ ಯನ್ನು ಕಳೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ ಸಂಶೋಧನೆ ನಡೆಯಬೇಕಿದೆ ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಮೈಸೂರು ವಿವಿಯ ಕುಲಪತಿ ಪೆÇ್ರ.ಜಿ. ಹೇಮಂತ್ ಕುಮಾರ್, ಮುಕ್ತ ವಿವಿಯ ಕುಲಪತಿ ಪೆÇ್ರ.ಎಸ್. ವಿದ್ಯಾಶಂಕರ್, ಡಾ. ಪೂರ್ಣಿಮಾ ಇದ್ದರು.