ಮಾತೃಭಾಷೆ ಇಲ್ಲವೇ ಪ್ರಾದೇಶಿಕ ಭಾಷೆಗೆ ಪ್ರಾಧಾನ್ಯತೆ ಅವಶ್ಯ: ಶ್ರೀನಿವಾಸ ಪ್ರಸಾದ್
ಮೈಸೂರು

ಮಾತೃಭಾಷೆ ಇಲ್ಲವೇ ಪ್ರಾದೇಶಿಕ ಭಾಷೆಗೆ ಪ್ರಾಧಾನ್ಯತೆ ಅವಶ್ಯ: ಶ್ರೀನಿವಾಸ ಪ್ರಸಾದ್

September 22, 2019

ಮೈಸೂರು, ಸೆ.21(ಎಸ್‍ಬಿಡಿ)- ಮಾತೃ ಭಾಷೆ ಅಥವಾ ಪ್ರಾದೇಶಿಕ ಭಾಷೆಗೆ ಹೆಚ್ಚು ಪ್ರಾಧಾನ್ಯತೆ ನೀಡಬೇಕೆಂದು ಸಂಸದ ವಿ.ಶ್ರೀನಿವಾಸ ಪ್ರಸಾದ್ ಅಭಿಪ್ರಾಯಿಸಿದರು.

ಮೈಸೂರು ವಿಶ್ವವಿದ್ಯಾನಿಲಯ ಹಾಗೂ ಬೆಂಗಳೂರು ಸಪ್ನ ಬುಕ್ ಹೌಸ್ ಸಹಯೋಗ ದಲ್ಲಿ ಮಾನಸಗಂಗೋತ್ರಿ ರಾಣಿ ಬಹ ದ್ದೂರ್ ಸಭಾಂಗಣದಲ್ಲಿ ಶನಿವಾರ ಸುತ್ತೂರು ಶ್ರೀಗಳ ಸಾನಿಧ್ಯದಲ್ಲಿ ನಡೆದ ಕಾರ್ಯ ಕ್ರಮದಲ್ಲಿ, ಮೈಸೂರು ವಿವಿ ಪ್ರಾಣಿಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ.ಸುತ್ತೂರು ಎಸ್.ಮಾಲಿನಿ ಅವರ `ವೈದ್ಯಕೀಯ ವೈರುಧ್ಯಗಳು’ ಹಾಗೂ `ಆನುವಂಶೀಯ ಕಾಯಿಲೆಗಳು’ ಪುಸ್ತಕಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
4ದೇಶದ ಅಧಿಕೃತ ಭಾಷೆಗಳಲ್ಲಿ ಹಿಂದಿಯೂ ಒಂದು. ಆದರೆ ಇಂಗ್ಲಿಷ್ ಮಾದರಿಯಲ್ಲಿ ಆಡಳಿತ ಭಾಷೆಯಾಗಿ ವ್ಯಾಪಿಸಿತು. ಭಾಷೆಯ ಬಗ್ಗೆ ಗೊಂದಲ ನಿರ್ಮಾಣವಾಗಿದೆ. ಹಿಂದಿ ದಿವಸ್ ಆಚರಣೆ ಬಂದಾಗಲೂ ಗೊಂದಲ ವಾಗಿದೆ. ವಿದ್ಯಾರ್ಥಿಯಾಗಿದ್ದಾಗ ನಾವು ಹಿಂದಿ ವಿರೋಧಿ ಚಳವಳಿ ಮಾಡಿದ್ದೆವು. ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷೆಗೆ ಹೆಚ್ಚು ಪ್ರಾಧಾನ್ಯತೆ ನೀಡಬೇಕು. ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಪ್ರಾದೇಶಿಕ ಭಾಷೆ ಯಲ್ಲೇ ಇರಬೇಕು. ಸಮಗ್ರ ಆಡಳಿತವೂ ಅದೇ ಭಾಷೆಯಲ್ಲಿರಬೇಕು. ನ್ಯಾಯಾಂಗ ದಲ್ಲೂ ಪ್ರಾದೇಶಿಕ ಭಾಷೆ ಬಳಕೆಯಾಗಬೇ ಕೆಂದು ಆಗ್ರಹಿಸಿದ್ದೆವು ಎಂದು ಸ್ಮರಿಸಿಕೊಂಡ ಅವರು, ಮಗು ಮೊದಲು ಆಡುವುದೇ ಮಾತೃಭಾಷೆಯಲ್ಲಿ. ನಮ್ಮ ಭಾಷೆಯಲ್ಲಿ ಆನಂದದಿಂದ ನಿರರ್ಗಳವಾಗಿ ಮಾತನಾ ಡುವ ರೀತಿಯಲ್ಲಿ ಬೇರೆ ಭಾಷೆಯನ್ನು ಬಳಸಲಾಗದು ಎಂದು ಹೇಳಿದರು.

ನೆರೆ ರಾಜ್ಯದಲ್ಲಿ ದೊಡ್ಡ ಭಾಷಾ ಚಳ ವಳಿಯೇ ನಡೆದು ಹೋಗಿದೆ. ಯಾವುದೇ ಭಾಷೆ ಮೇಲೆ ಒತ್ತಡ ಹೇರಬಾರದು. ನಮ್ಮ ಕನ್ನಡವೂ ಶಾಸ್ತ್ರೀಯ ಸ್ಥಾನಮಾನಕ್ಕೆ ಭಾಜನ ವಾಗಿದೆ. 2 ಸಾವಿರ ವರ್ಷಗಳ ಹಿಂದೆಯೇ ಲಿಪಿ ಬಳಕೆಯಾಗಿರುವ ಅತ್ಯಂತ ಶ್ರೀಮಂತ ಭಾಷೆ ಕನ್ನಡ, ತನ್ನದೇ ಆದ ಪರಂಪರೆ, ಸಂಸ್ಕøತಿ ಹೊಂದಿರುವುದು ಹೆಮ್ಮೆಯ ಸಂಗತಿ. ಜಗತ್ತಿನೆಲ್ಲೆಡೆ ಇಂಗ್ಲಿಷ್ ಪ್ರಭಾವವಿದೆ. ಸಂಪರ್ಕ, ಸಂವಹನ ಉದ್ದೇಶದಿಂದ ಎಲ್ಲಾ ಭಾಷೆ ಯನ್ನು ಕಲಿಯಬೇಕು. ಆದರೆ ಇಸ್ರೇಲ್ ನಂತಹ ಅನೇಕ ಮುಂದುವರೆದ ರಾಷ್ಟ್ರ ಗಳಲ್ಲಿ ತಮ್ಮದೇ ಭಾಷೆಯಲ್ಲಿ ಆಡಳಿತ ನಡೆಸು ತ್ತಿದ್ದಾರೆ. ಆದರೆ ಭಾರತದಲ್ಲಿ ಇಂಗ್ಲಿಷ್ ವ್ಯಾಮೋಹದಿಂದಾಗಿ ಪ್ರಭಾವವೂ ಹೆಚ್ಚಾ ಗಿದೆ ಎಂದು ಅಭಿಪ್ರಾಯಿಸಿದರು.

ಹಿಂದೆ ಕಾಲೇಜು ಹಂತದ ವಿಜ್ಞಾನ ಸಂಬಂಧಿತ ಕನ್ನಡ ಪಠ್ಯ ಪುಸ್ತಕಗಳು ಸಿಗು ತ್ತಿರಲಿಲ್ಲ. ಆದರೆ ಈಗ ಪ್ರಾಥಮಿಕದಿಂದ ಉನ್ನತ ಶಿಕ್ಷಣದವರೆಗೂ ವಿಜ್ಞಾನ ವಿಷಯ ಗಳನ್ನು ಕನ್ನಡದಲ್ಲಿ ಕಲಿಯಲು ಸಾಕಷ್ಟು ಪುಸ್ತಕಗಳಿವೆ. ಈ ನಿಟ್ಟಿನಲ್ಲಿ ಡಾ.ಸುತ್ತೂರು ಎಸ್.ಮಾಲಿನಿ ಅವರು ವೈಜ್ಞಾನಿಕ ವಿಚಾರ ಗಳನ್ನು ಜನಸಾಮಾನ್ಯರಿಗೆ ತಿಳಿಸಲು ಈ ಪುಸ್ತಕಗಳನ್ನು ಹೊರತಂದಿದ್ದಾರೆ. ಜಾಗತೀ ಕರಣ ಹಿನ್ನೆಲೆಯಲ್ಲಿ ನಮ್ಮಲ್ಲಿ ಇಷ್ಟೊಂದು ಬುದ್ಧಿಶಕ್ತಿ ಇದೆಯೇ? ಎಂದು ಚಿಂತನೆ ಮಾಡುವಷ್ಟರ ಮಟ್ಟಿಗೆ ವೈಜ್ಞಾನಿಕವಾಗಿ ಅಪಾರ ಸಂಶೋಧನೆ ನಡೆಯುತ್ತಿದೆ. ಆದರೆ ಮೌಢ್ಯತೆ, ಮೂಡನಂಬಿಕೆ ಇನ್ನೂ ಜೀವಂತವಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರಲ್ಲದೆ, ನಾನು ಅನುವಂಶೀಯ ಕಾಯಿಲೆಗಳ ಬಗ್ಗೆ ಮಾತನಾಡುವುದಿಲ್ಲ ಬೇಕಿದ್ದರೆ ಅನುವಂಶೀಯ ರಾಜಕೀಯದ ಬಗ್ಗೆ ಮಾತನಾಡುತ್ತೇನೆ ಎಂದು ನಗೆ ಚಟಾಕಿ ಹಾರಿಸಿದರು. ಮೈಸೂರು ವಿವಿ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಎಸ್.ಎನ್. ಹೆಗಡೆ, ಪುಸ್ತಕಗಳ ಕುರಿತು ಮಾತನಾಡಿ ದರು. ಇದೇ ಸಂದರ್ಭದಲ್ಲಿ ಮೈಸೂರು ವಿವಿಯ ಪ್ರೊ.ಎನ್.ಬಿ.ರಾಮಚಂದ್ರ, ಪ್ರೊ. ನೀಲಗಿರಿ ತಳವಾರ್, ಪ್ರೊ.ರಂಗನಾಥ್ ಹಾಗೂ ಮೆಡಿವೇವ್ ಆಸ್ಪತ್ರೆಯ ಡಾ.ಸಿ. ಶರತ್‍ಕುಮಾರ್ ಅವರನ್ನು ಅಭಿನಂದಿ ಸಲಾಯಿತು. ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್‍ಕುಮಾರ್, ಕರ್ನಾಟಕ ಮುಕ್ತ ವಿವಿ ಕುಲಪತಿ ಪ್ರೊ.ವಿದ್ಯಾಶಂಕರ್, ಲೇಖಕಿ ಡಾ.ಸುತ್ತೂರು ಎಸ್.ಮಾಲಿನಿ ಇನ್ನಿತರರು ಉಪಸ್ಥಿತರಿದ್ದರು.

ಅದ್ಧೂರಿ ದಸರಾ ಅಗತ್ಯವಿರಲಿಲ್ಲ ಸಂಸದ ಶ್ರೀನಿವಾಸ ಪ್ರಸಾದ್ ಬೇಸರ
ಕೊಳ್ಳೇಗಾಲ, ಸೆ.21- ರಾಜ್ಯದ ಜನ ಸಂಕಷ್ಟದಲ್ಲಿರುವಾಗ ಅದ್ಧೂರಿ ದಸರಾ ಅಗತ್ಯವಿರಲಿಲ್ಲ ಎಂದು ಮಾಜಿ ಸಂಸದ ವಿ.ಶ್ರೀನಿವಾಸ ಪ್ರಸಾದ್ ಕಿಡಿಕಾರಿದ್ದಾರೆ.

ಶನಿವಾರ ಕೊಳ್ಳೇಗಾಲ ಪಟ್ಟಣಕ್ಕೆ ಭೇಟಿ ನೀಡಿದ್ದ ಶ್ರೀನಿವಾಸ ಪ್ರಸಾದ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಓರ್ವ ಜನಪ್ರತಿನಿಧಿಯಾದ ನನ್ನನ್ನು ದಸರಾ ಕಾರ್ಯಕ್ರಮಗಳಿಗೆ ನಿರ್ಲಕ್ಷ್ಯ ಮಾಡಲು ಸಾಧ್ಯವಿಲ್ಲ.

ಆದರೆ ಕಾರ್ಯಕ್ರಮಗಳಲ್ಲಿ ನಾನು ಯಾವ ಕಾರಣಕ್ಕೂ ಭಾಗವಹಿಸು ವುದಿಲ್ಲ. ಪ್ರವಾಹದಿಂದ ರಾಜ್ಯದ ಜನ ಸಂಕಷ್ಟದಲ್ಲಿರುವಾಗ ಅದ್ಧೂರಿ ದಸರಾದ ಅವಶ್ಯಕತೆ ಇರಲಿಲ್ಲ. ಅದೆಷ್ಟೋ ಜನ ತುತ್ತು ಅನ್ನಕ್ಕೂ ಪರಿತಪಿಸುವಾಗ ನಾವು ಆಹಾರ ಮೇಳ ಮಾಡಿ ತಿಂದು ತೇಗುವುದು, ಯುವ ದಸರಾ ನಡೆಸಿ ಕುಣಿದು ಕುಪ್ಪಳಿಸುವುದು ಸರಿಯಲ್ಲ. ಅದು ಸಾಂಪ್ರದಾಯಿಕ ದಸರಾ ಎನಿಸು ವುದಿಲ್ಲ. ಇವನ್ನೆಲ್ಲ ಬಿಟ್ಟು, ಸರಳವಾಗಿ ದಸರಾ ಆಚರಿಸುವಂತೆ ನಾನು ಹೇಳಿದ್ದೆ. ಆದರೆ ಉಸ್ತುವಾರಿ ಸಚಿ ವರು ನನ್ನ ಮಾತನ್ನು ಕೇಳಲಿಲ್ಲ ಎಂದು ಸಂಸದ ಶ್ರೀನಿವಾಸ್ ಪ್ರಸಾದ್ ಅಸಮಾಧಾನ ವ್ಯಕ್ತಪಡಿಸಿದರು.

ಹಸಿರು ಸಂತೆಯಲ್ಲಿ ಕೃಷಿ ಉತ್ಪನ್ನಗಳ ಮಾರಾಟ: ನೋಂದಣಿ ಆರಂಭ
ಮೈಸೂರು, ಸೆ.21- ಮೈಸೂರು ದಸರಾ ಮಹೋತ್ಸವದ ಪ್ರಯುಕ್ತ ಪ್ರವಾಸೋದ್ಯಮ ಇಲಾಖೆ ವತಿಯಿಂದ ಮೈಸೂರು ನಗರದಲ್ಲಿ ಹಸಿರು ಸಂತೆ (ರೈತರ ಸಂತೆ) ಕಾರ್ಯಕ್ರಮವನ್ನು ಅಕ್ಟೋಬರ್ 5ರಂದು ಶನಿವಾರ ಬೆಳಿಗ್ಗೆ 8ರಿಂದ ಸಂಜೆ 6 ಗಂಟೆಯವರೆಗೆ ಜಿಪಂ ಮುಂಭಾಗದ ಕೃಷ್ಣರಾಜ ಬುಲೇವಾರ್ಡ್ ರಸ್ತೆಯಲ್ಲಿ (ಮಹಾತ್ಮ ಗಾಂಧಿ ಪ್ರತಿಮೆಯಿಂದ ಕ್ರಾಫರ್ಡ್ ಸಭಾಂಗಣದವರೆಗೆ) ಆಯೋಜಿಸಲಾಗಿದೆ.

ಈ ಕಾರ್ಯಕ್ರಮವನ್ನು ಕೃಷಿ ಇಲಾಖೆ ಮತ್ತು ಪ್ರಾಂತೀಯ ಸಾವಯವ ಒಕ್ಕೂಟಗಳು ಜಂಟಿಯಾಗಿ ಅನುಷ್ಠಾನ ಮಾಡುತ್ತಿವೆ. ಕಾರ್ಯಕ್ರಮದಲ್ಲಿ ಕೃಷಿ ಉತ್ಪನ್ನಗಳು, ಮೌಲ್ಯವರ್ಧಿತ ಉತ್ಪನ್ನಗಳು ಸಾವಯವ / ಸಿರಿಧಾನ್ಯ ಉತ್ಪನ್ನಗಳು ಅಥವಾ ಸಿರಿ ಧಾನ್ಯಗಳು / ಸಾವಯವ ಉತ್ಪನ್ನಗಳಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ಸಾವಿರಾರು ಗ್ರಾಹಕರಿಗೆ ಪರಿಚಯಿಸಿ ಮಾರಾಟ ಮಾಡಲು ಅವಕಾಶವಿದೆ.

Translate »