ಕನ್ನಡದಲ್ಲಿ ಅಧಿಕ ಚಿತ್ರಗಳು ನಿರ್ಮಾಣವಾದರೂ ಗುಣಮಟ್ಟ ಮಾತ್ರ ಕುಸಿತ
ಮೈಸೂರು

ಕನ್ನಡದಲ್ಲಿ ಅಧಿಕ ಚಿತ್ರಗಳು ನಿರ್ಮಾಣವಾದರೂ ಗುಣಮಟ್ಟ ಮಾತ್ರ ಕುಸಿತ

September 22, 2019

ಮೈಸೂರು, ಸೆ.21(ಎಂಟಿವೈ)- ವಾಹಿನಿಗಳಲ್ಲಿ ಪ್ರಸಾರ ವಾಗುವ ಧಾರಾವಾಹಿಗಳ ಪರಿಣಾಮದಿಂದ ಸದಭಿ ರುಚಿಯ ಚಿತ್ರಗಳನ್ನು ನೋಡಲು ಪ್ರೇಕ್ಷಕರು ಚಿತ್ರಮಂ ದಿರಕ್ಕೆ ಬರುವುದು ಕ್ಷೀಣಿಸಿದೆ. ಕೇವಲ ಸಿಳ್ಳೆ ಹೊಡೆದು ಕುಣಿಸುವ ಸನ್ನಿವೇಶವಿರುವ ಸಿನಿಮಾಗಳನ್ನಷ್ಟೇ ಯುವ ಸಮೂಹ ನೋಡುತ್ತಿರುವುದರಿಂದ 25 ದಿನದ ಪ್ರದ ರ್ಶನವೇ ದೊಡ್ಡ ಸಂಭ್ರಮವಾಗುತ್ತಿದೆ ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕøತ ನಿರ್ದೇಶಕ ಪಿ.ಶೇಷಾದ್ರಿ ವಿಷಾದಿಸಿದ್ದಾರೆ.

ಮೈಸೂರಿನ ಪತ್ರಕರ್ತರ ಭವನದಲ್ಲಿ ಶನಿವಾರ ಸಂವಾದದಲ್ಲಿ ಮಾತನಾಡಿದ ಅವರು, ಈ ಹಿಂದೆ ರಂಗಭೂಮಿ ಮತ್ತು ಸಿನಿಮಾ ಜನರಿಗೆ ಮನರಂಜನೆ ನೀಡುವ ದೃಶ್ಯ ಮಾಧ್ಯಮವಾಗಿದ್ದವು. ಮನರಂಜನೆ ಗಾಗಿ ಗ್ರಾಮೀಣ ಜನರು ಒಳಗೊಂಡಂತೆ ಎಲ್ಲರೂ ಸಿನಿಮಾ, ನಾಟಕವನ್ನು ನೋಡುತ್ತಿದ್ದರು. ಕಾಲ ಕ್ರಮೇಣ ಮನೆಗಳ ಹೊಕ್ಕಿದ ದೂರದರ್ಶನ(ಟಿವಿ) ಜನರನ್ನು ಮನೆಯಿಂದ ಹೊರಬರದಂತೆ ಮಾಡಿದೆ. ಈ ನಡುವೆ ಧಾರಾವಾಹಿಗಳು ಇನ್ನಷ್ಟು ಬಿಗಿಯಾಗಿ ಹಿಡಿದುಕೊಂಡಿದ್ದು, ಮನರಂಜನೆಗಾಗಿ ಮನೆಯಿಂದ ಹೊರ ಬರುವುದನ್ನು ಮತ್ತಷ್ಟು ಪರಿಣಾಮಕಾರಿಯಾಗಿ ತಡೆದಿದೆ ಎಂದರು.

ಪ್ರಸ್ತುತ ಸಿನಿಮಾ ನೋಡಲು ಕಾಲೇಜು ವಿದ್ಯಾರ್ಥಿ ಗಳು ಹಾಗೂ ಯುವಜನರು ಮಾತ್ರ ಬರುತ್ತಿದ್ದಾರೆ. ಸಿಳ್ಳೆ ಹೊಡೆಯಲು ಮತ್ತು ಕುಣಿ ಯಲು ಅವಕಾಶವಿರುವ ಸಿನಿಮಾ ಗಳನ್ನು ಮಾತ್ರ ಯುವಜನತೆ ನೋಡುತ್ತಿದೆ. ಈ ಹಿಂದೆ ತೆರೆ ಕಂಡ ಹಲವಾರು ಚಿತ್ರಗಳು ಶತ ದಿನ ಪ್ರದರ್ಶನಗೊಂಡಿದ್ದವು. ಆದರೆ ಇಂದು ಕೇವಲ 25ನೇ ದಿನದ ಪ್ರದರ್ಶನವೇ ದೊಡ್ಡ ಸಂಭ್ರಮವಾಗಿ ಪರಿಣಮಿಸಿರುವುದು ದುರ್ದೈವ. ಪ್ರೇಕ್ಷ ಕರ ಕೊರತೆ ಚಲನಚಿತ್ರಕ್ಕೆ ಕಾಡುತ್ತಿದೆ.

ಕನ್ನಡ ಚಿತ್ರರಂಗದಲ್ಲಿ ಸಿನಿಮಾಗಳು ಹೆಚ್ಚು ನಿರ್ಮಾಣ ಗೊಳ್ಳುತ್ತಿರುವುದಕ್ಕೆ ನಾವು ಹೆಮ್ಮೆ ಪಡಬೇಕಿದ್ದು, ಆದರೆ, ಅವುಗಳ ಗುಣಮಟ್ಟದಲ್ಲಿ ಹಿಂದಿರುವುದನ್ನು ಒಪ್ಪಿಕೊಳ್ಳ ಬೇಕಿದೆ. ಕಳೆದ ವರ್ಷ 278 ಸಿನಿಮಾಗಳು ಬಿಡುಗಡೆ ಯಾದವು. ನಾವು ಸಿನಿಮಾ ನಿರ್ಮಾಣದಲ್ಲಿ ಮುಂದಿ ದ್ದರೂ, ಗುಟ್ಟಮಟ್ಟದ ಚಿತ್ರಗಳನ್ನು ನೀಡುವಲ್ಲಿ ಹಿಂದುಳಿ ದಿz್ದÉೀವೆ. 70ರ ದಶಕದಲ್ಲಿ ಕನ್ನಡ ಚಿತ್ರದಲ್ಲಿ ಮಹತ್ತರ ವಾದ ಬದಲಾವಣೆಯಾಗಿದೆ. ಆ ನಂತರ ಪ್ರತಿ 10 ವರ್ಷಕ್ಕೊಮ್ಮೆ ಬದಲಾವಣೆ ಆಗುತ್ತ ಬರುತ್ತಿದೆ. ಪುಟ್ಟಣ್ಣ ಕಣಗಾಲ್, ಗಿರೀಶ್ ಕಾರ್ನಾಡ್, ಗಿರೀಶ್ ಕಾಸರವಳ್ಳಿ ಹೀಗೆ ಅನೇಕರು ಕಾದಂಬರಿ ಆಧಾರಿತ ಸಿನಿಮಾ ಗಳನ್ನು ಮಾಡಿದ್ದು, ಅವುಗಳಿಗೆ ಪ್ರೇಕ್ಷಕರ ಮನ್ನಣೆಯೂ ದೊರೆತಿದೆ. ಈಗಲೂ ಇಂತಹ ಸಂವೇದನಾತ್ಮಕ ಮತ್ತು ಪ್ರಯೋಗಶೀಲ ಸಿನಿಮಾಗಳ ನಿರ್ಮಾಣವಾಗುತ್ತಿದ್ದು, ಒಂದು ಮೊಟ್ಟೆ ಕಥೆ, ತಿಥಿ ಇಂತಹ ಕೆಲವು ಚಿತ್ರ ಗಳನ್ನು ಜನರು ಮೆಚ್ಚಿಗೊಂಡಿದ್ದಾರೆ. ಇಂತಹ ಸಿನಿಮಾ ಗಳಿಗೆ ಮನ್ನಣೆ ದೊರೆಯಲಿದ್ದು, ಮುಂದಿನ ದಿನಗಳಲ್ಲಿ ಇಂತಹ ಸಿನಿಮಾಗಳು ಹೆಚ್ಚು ಗೆಲ್ಲಲಿವೆ ಎಂದರು.

ನಾನು ಈಗಾಗಲೇ 11 ಚಿತ್ರಗಳನ್ನು ನಿರ್ಮಿಸಿದ್ದೇನೆ, ಹಲವು ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿಗಳು ಹಲವು ಚಿತ್ರ ಗಳಿಗೆ ದೊರೆತಿವೆ. ಆದರೆ ನಾನು ಎಂದಿಗೂ ಪ್ರಶಸ್ತಿ ಗಾಗಿ ಸಿನಿಮಾ ಮಾಡಿಲ್ಲ. ಪ್ರಸ್ತುತದ ವಿಷಯಗಳನ್ನು ಇಟ್ಟುಕೊಂಡು ಸಿನಿಮಾ ಮಾಡುವುದು ನನ್ನ ಆಸಕ್ತಿ. ಉತ್ತಮ ಚಿತ್ರಗಳಿಗೆ ಪ್ರಶಸ್ತಿ ಬರಬೇಕು ಎಂಬುದು ನನ್ನ ಆಶಯವಷ್ಟೇ. ಈಗ ಗಾಂಧೀಜಿ ಅವರು 150ನೇ ಜನ್ಮದಿನದ ಅಂಗವಾಗಿ ಗಾಂಧಿ ಕುರಿತು ಏನಾದರೂ ಮಾಡಬೇಕು ಎಂದು ಕೊಂಡು ಕನ್ನಡ, ಹಿಂದಿ, ಇಂಗ್ಲಿಷ್ ಭಾಷೆಯಲ್ಲಿ `ಮೋಹನದಾಸ’ ಸಿನಿಮಾ ಮಾಡಿz್ದÉೀನೆ.

ಬೋಳುವಾರು ಮಹಮ್ಮದ್ ಕುಂ ಅವರ `ಪಾಪು ಗಾಂಧಿ, ಬಾಪು ಗಾಂಧಿ’ ಕೃತಿಯಿಂದ ಪ್ರೇರಿತರಾಗಿ ಮಹಾತ್ಮ ಗಾಂಧೀಜಿ ಬಾಲ್ಯ ಜೀವನವನ್ನು ಕಥಾ ಹಂದರವಾಗಿ ಹೊಂದಿರುವ `ಮೋಹನದಾಸ’ ಚಿತ್ರ ನಿರ್ಮಾಣ ಮಾಡಲಾಗಿದೆ. ಚಿತ್ರದಲ್ಲಿ ಪರಮಸ್ವಾಮಿ ಹಾಗೂ ಸಮರ್ಥ ಮಹಾತ್ಮ ಗಾಂಧೀಜಿಯ ಪಾತ್ರವನ್ನು ನಿರ್ವಹಿಸಿದ್ದು, ಶೃತಿ ಪುತಲೀಬಾಯಿಯ ಪಾತ್ರಕ್ಕೆ ಜೀವ ತುಂಬಿದ್ದಾರೆ ಎಂದರು.

ಗುಜರಾತ್ ಪೋರಬಂದರ್‍ನ ಗಾಂಧೀಜಿ ಜನಿ ಸಿದ ಮನೆ, ರಾಜಕೋಟ್‍ನಲ್ಲಿ ಗಾಂಧೀಜಿ ವಾಸವಿದ್ದ ಮನೆ, ಅವರು ಓದಿದ ಶಾಲೆ ಹಾಗೂ ಬೆಂಗಳೂರಿ ನಲ್ಲಿ ಚಿತ್ರೀಕರಣ ಮಾಡಲಾಗಿದೆ. ಚಿತ್ರವೂ ಇದೇ ಅಕ್ಟೋಬರ್ 2ರಂದು ಬಿಡುಗಡೆ ಮಾಡಬೇಕು ಎಂದುಕೊಂಡಿದ್ದೇವೆ ಎಂದರು. ಇದೇ ಸಂದರ್ಭ ದಲ್ಲಿ ಪಿ.ಶೇಷಾದ್ರಿ ಮತ್ತು ಬಾಲನಟ ಪರಮ್ ಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ಸಂವಾದದಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ, ಪ್ರಧಾನ ಕಾರ್ಯದರ್ಶಿ ಲೋಕೇಶ್ ಬಾಬು ಇದ್ದರು

Translate »