ಪೊಲೀಸರಿಂದ ತಪ್ಪಿಸಿಕೊಳ್ಳಲು ನಾಲೆಗೆ ಹಾರಿದ ಜೂಜುಕೋರನ ದುರಂತ ಸಾವು
ಮಂಡ್ಯ

ಪೊಲೀಸರಿಂದ ತಪ್ಪಿಸಿಕೊಳ್ಳಲು ನಾಲೆಗೆ ಹಾರಿದ ಜೂಜುಕೋರನ ದುರಂತ ಸಾವು

June 16, 2018

ಮಂಡ್ಯ:  ಜೂಜು ಅಡ್ಡೆ ಮೇಲೆ ದಾಳಿ ನಡೆ ಸಿದ ಪೊಲೀಸರಿಂದ ತಪ್ಪಿಸಿಕೊಳ್ಳಲು ನಾಲೆಗೆ ಹಾರಿದ ಜೂಜುಕೋರ ದುರಂತ ಸಾವಿ ಗೀಡಾದ ದುರ್ಘಟನೆ ಚಿಕ್ಕೇಗೌಡನ ದೊಡ್ಡಿ ಸಮೀಪ ಗುರುವಾರ ರಾತ್ರಿ ನಡೆದಿದೆ. ಜೂಜುಕೋರ ಮಧು, ನಾಲೆಗೆ ಹಾರಿ ಸಾವನ್ನಪ್ಪಿದವ.

ಘಟನೆ ಹಿನ್ನೆಲೆ: ಜೂಜು ನಡೆಯು ತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಕಳೆದ ರಾತ್ರಿ ಡಿಸಿಆರ್‍ಬಿ ಪೊಲೀಸರು ಜೂಜು ಅಡ್ಡೆ ಮೇಲೆ ದಾಳಿ ಮಾಡುತ್ತಿದ್ದಂತೆ ಪೊಲೀಸ ರಿಂದ ತಪ್ಪಿಸಿಕೊಳ್ಳಲು ಮಧು ನಾಲೆಗೆ ಹಾರಿದ್ದಾನೆ. ಭಾರೀ ನೀರು ಹರಿಯು ತ್ತಿದ್ದ ಹಿನ್ನೆಲೆಯಲ್ಲಿ ನಾಲೆಯಿಂದ ಹೊರ ಬರಲಾಗದೇ ಸಾವನ್ನಪ್ಪಿದ್ದಾನೆ. ಮಧು ಶವಕ್ಕಾಗಿ ಪೊಲೀಸರು, ಗ್ರಾಮ ಸ್ಥರು ಸೇರಿದಂತೆ ಅಗ್ನಿಶಾಮಕ ಸಿಬ್ಬಂದಿ ಶೋಧನೆ ನಡೆಸುತ್ತಿದ್ದಾರೆ.

Translate »