ಯೋಗದಿಂದ ಉತ್ತಮ ಆರೋಗ್ಯ ಸಾಧ್ಯ
ಮೈಸೂರು

ಯೋಗದಿಂದ ಉತ್ತಮ ಆರೋಗ್ಯ ಸಾಧ್ಯ

January 14, 2019

ಮೈಸೂರು: ಯೋಗದಿಂದ ಉತ್ತಮ ಆರೋಗ್ಯ ಕಾಪಾಡಿ ಕೊಳ್ಳಲು ಸಾಧ್ಯವಿದೆ. ಆದ್ದರಿಂದ ಪ್ರತಿ ಯೊಬ್ಬರೂ ಯೋಗ ಕಲಿಕೆಗೆ ಆಸಕ್ತಿ ವಹಿಸ ಬೇಕು ಎಂದು ಅವಧೂತ ದತ್ತ ಪೀಠದ ಕಿರಿಯ ಶ್ರೀಗಳಾದ ದತ್ತ ವಿಜಯಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.

ಕುವೆಂಪುನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಯೋಗ ಮಂದಿರ ಟ್ರಸ್ಟ್ ಮತ್ತು ಶ್ರೀ ರಮಣ ಜ್ಞಾನಕೇಂದ್ರದ ಸಹಯೋಗ ದೊಂದಿಗೆ ಆಯೋಜಿಸಿದ್ದ 25ನೇ ವರ್ಷದ ಅಂಗವಾಗಿ ಅಂತರ ಶಾಲಾ ಮತ್ತು ಕಾಲೇಜು ಮಟ್ಟದ `ಮುಕ್ತ ಯೋಗಾಸನ ಸ್ಪರ್ಧೆ-2019’ಕ್ಕೆ ಚಾಲನೆ ನೀಡಿ, ಮಾತನಾಡಿದರು.

ಪ್ರಸ್ತುತ ಯೋಗ ಪ್ರಪಂಚದ್ಯಾಂತ ಆಚರಣೆ ಯಾಗುತ್ತಿದೆ. ಯೋಗದ ಮಹತ್ವವನ್ನು ಪ್ರತಿ ಯೊಬ್ಬರು ತಿಳಿದುಕೊಳ್ಳಬೇಕು. ಇದರಲ್ಲಿ ವಿದೇಶಿಗರು ಹೆಚ್ಚು ಆಕರ್ಷಿತರಾಗುತ್ತಿರು ವುದು ವಿಶೇಷ. ಯೋಗ ಕಲಿತರೆ ವಿದ್ಯಾರ್ಥಿ ಗಳಲ್ಲಿ ತಾಳ್ಮೆ, ವ್ಯಕ್ತಿತ್ವ ವಿಕಸನ, ಕಲಿಕೆಯ ಗುಣಮಟ್ಟ ಹೆಚ್ಚುತ್ತದೆ ಎಂದರು.

ಸಮಾಜ ಜಾತಿ, ಮತ ಎಂಬ ಸಂಕುಚಿತ ಮನೋಭಾವದಿಂದ ಹೊರಬರಬೇಕು ಎಂಬುದೇ ನಾರಾಯಣ ಗುರು ಅವರ ಉಪ ದೇಶ ಎಂದರಲ್ಲದೆ, ಆರೋಗ್ಯ ರಕ್ಷಣೆಗೆ ಯೋಗಾಸನ ಉತ್ತಮ ಸಾಧನವಾಗಿರುವುದ ರಿಂದ ಸರ್ಕಾರ ಹೆಚ್ಚು ಪ್ರಾಶಸ್ತ್ಯ ನೀಡು ತ್ತಿದೆ. ಇದಕ್ಕೆ ಬ್ರಹ್ಮಶ್ರೀ ನಾರಾಯಣ ಗುರು ಯೋಗ ಮಂದಿರ ಟ್ರಸ್ಟ್ ಮತ್ತು ಶ್ರೀ ರಮಣ ಜ್ಞಾನಕೇಂದ್ರದ ಪದಾಧಿಕಾರಿಗಳು ನೆರ ವಾಗುತ್ತಿರುವುದು ಎಲ್ಲರೂ ಮೆಚ್ಚುವ ವಿಷಯ. ಆದ್ದರಿಂದ ಪೋಷ ಕರು ತಮ್ಮ ತಮ್ಮ ಮಕ್ಕಳಿಗೆ ಯೋಗ ಕಲಿಕೆಗೆ ಸಹಕರಿಸ ಬೇಕು ಎಂದು ಸಲಹೆ ನೀಡಿದರು.

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರು, ಕಳೆದ 50 ವರ್ಷಗಳಿಂದ ಮೈಸೂ ರಿನ ಆಶ್ರಮದಲ್ಲಿ ಕ್ರಿಯಾ ಯೋಗವನ್ನು ಸಾವಿರಾರು ಮಂದಿ ಭಕ್ತರಿಗೆ ಹೇಳಿಕೊಡು ತ್ತಿದ್ದಾರೆ. ಇದರಿಂದ ಭಕ್ತರು ಯೋಗವನ್ನು ಕಲಿತು ಉತ್ತಮ ಆರೋಗ್ಯ ಕಾಪಾಡಿ ಕೊಳ್ಳಲು ಮುತುವರ್ಜಿ ವಹಿಸಿದ್ದಾರೆ. ಇಂದಿನ ಸ್ಪರ್ಧೆಗೆ ರಾಜ್ಯದ ನಾನಾ ಮೂಲೆಗಳಿಂದ ಆಗಮಿಸಿರುವ ಯೋಗಾಪಟುಗಳು ಸ್ಪರ್ಧೆ ಯಲ್ಲಿ ಭಾಗವಹಿಸಿ, ಉತ್ತಮ ಪ್ರದರ್ಶನ ನೀಡಬೇಕೆಂದು ಸಲಹೆ ನೀಡಿದರು.

ಮೈಸೂರಿನ ಆಯುಷ್‍ನ ಪ್ರಾಧ್ಯಾಪಕಿ ಡಾ.ಬಿ.ಎಸ್.ಸೀತಾಲಕ್ಷ್ಮಿ ಮಾತನಾಡಿ, ವಿದ್ಯಾರ್ಥಿಗಳಿಗೆ ಯೋಗ ಕಲಿಕೆಯಿಂದ ಸಾಕಷ್ಟು ಪ್ರಯೋಜನಗಳಿವೆ. ಉತ್ತಮ ಆರೋಗ್ಯ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಹೆಚ್ಚು ಅನುಕೂಲ ವಾಗಲಿದೆ ಎಂದರು. ವೇದಿಕೆಯಲ್ಲಿ ಡಾ.ಲಕ್ಷ್ಮಿ ನಾರಾಯಣ ಶೆಣೈ, ಸಮಾಜ ಸೇವಕ ಕೆ. ರಘುರಾಂ, ಮೈಸೂರು ಯೋಗ ಒಕ್ಕೂಟದ ಗೌರವಾಧ್ಯಕ್ಷ ಡಾ.ಎ.ಎಸ್.ಚಂದ್ರ ಶೇಖರ್, ಶ್ರೀರಮಣ ಜ್ಞಾನ ಕೇಂದ್ರದ ಕಾರ್ಯದರ್ಶಿ ಗೀತಾ ಚರಣ್, ಎಂ.ಪಿ.ಪ್ರಭುಸ್ವಾಮಿ, ಡಾ. ಬಿ.ಪಿ.ಮೂರ್ತಿ, ಎಸ್.ವಿ.ವೆಂಕಟೇಶಯ್ಯ, ಎಂ.ಎಸ್.ರಮೇಶ್‍ಕುಮಾರ್ ಇದ್ದರು.

Translate »