ಸ್ವಾತಂತ್ರ್ಯಾ ನಂತರ 70 ವರ್ಷ ಡಾ.ಅಂಬೇಡ್ಕರ್ ಸಂವಿಧಾನದ ಆಶಯದಂತೆ ಆಡಳಿತ ನಡೆದಿಲ್ಲ
ಮೈಸೂರು

ಸ್ವಾತಂತ್ರ್ಯಾ ನಂತರ 70 ವರ್ಷ ಡಾ.ಅಂಬೇಡ್ಕರ್ ಸಂವಿಧಾನದ ಆಶಯದಂತೆ ಆಡಳಿತ ನಡೆದಿಲ್ಲ

February 9, 2020

 ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ವಿಷಾದ
 ಟಿಆರ್‍ಪಿ ದೃಷ್ಟಿ ಆಧರಿಸಿದ ಪತ್ರಿಕೋದ್ಯಮದ ಬಗ್ಗೆ ಬೇಸರ
ಮೈಸೂರು, ಫೆ.8(ಎಸ್‍ಪಿಎನ್)-ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷಗಳಾ ದರೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ರಚಿಸಿದ ಸಂವಿಧಾನದ ಆಶಯ ದಂತೆ ಆಡಳಿತ ನಡೆದಿಲ್ಲ. ಬದಲಾಗಿ. ತುಕ್ಡೆ ತುಕ್ಡೆ ಗ್ಯಾಂಗ್ ಹರಡಿದ ವಿಚಾರಧಾರೆ ಗಳಿಗೆ ಮನ್ನಣೆ ನೀಡಿ, ಆಡಳಿತ ನಡೆಸಿರು ವುದು ವಿಪರ್ಯಾಸ ಸಂಗತಿ ಎಂದು ರಂಗಾ ಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಬೇಸರ ವ್ಯಕ್ತಪಡಿಸಿದರು.

ಮೈಸೂರು ಜೆಎಲ್‍ಬಿ ರಸ್ತೆಯ ಎಂಜಿ ನಿಯರ್‍ಗಳ ಸಂಸ್ಥೆ ಸಭಾಂಗಣದಲ್ಲಿ ನಡೆದ ಸಾಧ್ವಿ ಅಂತರ್ಜಾಲ ಪತ್ರಿಕೆಗೆ ಚಾಲನೆ ನೀಡಿ ಮಾತನಾಡಿದ ಅವರು, ಸ್ವಾತಂತ್ರ್ಯಾ ನಂತರ ಸಂವಿಧಾನದ ಒಂದು ಭಾಗವಾದ ಮೂಲಭೂತ ಹಕ್ಕುಗಳ ಬಗ್ಗೆ ಹೆಚ್ಚು ಚರ್ಚೆ ಯಾಗಿವೆ. ಆದರೆ, ಸಂವಿಧಾನದ ಸಂಪೂರ್ಣ ಭಾಗಗಳು ಚರ್ಚೆಯಾಗಿಲ್ಲ ಹಾಗೂ ಅದರ ಆಶಯದಂತೆ ಆಡಳಿತ ನಡೆಸದಿರು ವುದು ವಿಪರ್ಯಾಸದ ಸಂಗತಿ ಎಂದರು.

ಭಾರತದಲ್ಲಿ ಕಳೆದ 70 ವರ್ಷಗಳಿಂದ ಆಡಳಿತ ನಡೆಸಿರುವುದು ಒಂದು ಪಕ್ಷವಲ್ಲ, ವ್ಯಕ್ತಿಯಲ್ಲ. ಬದಲಾಗಿ ಒಂದು ವಿಚಾರ ಧಾರೆ, ಅದುವೇ ಎಡಪಂಥೀಯ ವಿಚಾರ ಧಾರೆ. ಇದರಿಂದ ವಿವಿಯಲ್ಲಿ ಓದುತ್ತಿರುವ ಯುವಕರಿಗೆ ದೇಶ ಕಟ್ಟುವ, ಸಮಾಜ ರೂಪಿಸುವ ಶಿಕ್ಷಣ ದೊರಕದಿರುವುದು ವಿಷಾದದ ಸಂಗತಿ. ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ನಮ್ಮ ಜನರಿಗೆ ಸಂವಿ ಧಾನದ ಬಗ್ಗೆ ಅರಿವು ಮೂಡಿಸುವಂತೆ ಕೇಂದ್ರ ಸರ್ಕಾರದಿಂದ 15 ಲಕ್ಷ ಅನು ದಾನ ಬಂದಿದೆ. ಹಾಗಾದರೆ, ಇಷ್ಟು ವರ್ಷ ಆಡಳಿತ ನಡೆಸಿದ ಪಕ್ಷಗಳು, ಅಂಬೇಡ್ಕರ್ ರಚಿತ ಸಂವಿಧಾನವನ್ನು ಪೂರ್ಣ ಪ್ರಮಾಣ ದಲ್ಲಿ ಅನುಷ್ಠಾನಗೊಳಿಸಲಿಲ್ಲ ಎಂದರ್ಥ ಎಂದು ಖಾರವಾಗಿಯೇ ಪ್ರಶ್ನಿಸಿದರು.

ನಾನು ದೇಶಕ್ಕಾಗಿ ಜೀವ ಕೊಡುವ ಯೋಧರ ಕುಟುಂಬದಿಂದ ಬಂದವನು. ಪ್ರತಿ ಸಂದರ್ಭ ದಲ್ಲೂ ಭಾರತದ ಬಗ್ಗೆ ಮಾತನಾಡುವಾಗ ಮೈನವಿರೇಳುತ್ತದೆ. ದೇಶದ ಬಗ್ಗೆ ಮಾತ ನಾಡಿದರೆ, ನಮಗೆ ಮೈಯಲ್ಲಿರುವ ರಕ್ತ ಬಿಸಿಯಾಗುತ್ತದೆ. `ಭಾರತ್ ಮಾತಾಕೀ ಜೈ ಎಂದರೆ’ ನಾವು ಕೋಮುವಾದಿಗಳು ಎಂಬಂತೆ ಕೆಲವರು ನೋಡುತ್ತಾರೆ. ಇದರಿಂದ ಸಮಾ ಜಕ್ಕೆ ಯಾವ ಸಂದೇಶ ಕೊಡುತ್ತಿದ್ದೇವೆ. ನಮ್ಮ ಯುವಕರಿಗೆ ವಿವಿಗಳಲ್ಲಿ ಏನನ್ನು ಕಲಿಸು ತ್ತಿದ್ದಾರೆ. ಅಲ್ಲಿನ ಚಟುವಟಿಕೆಗಳು ಸಮಾಜಕ್ಕೆ ತಿಳಿಯುತ್ತಿಲ್ಲ. ಇದರಿಂದಾಗಿ ತುಕ್ಡೆ ತುಕ್ಡೆ ಗ್ಯಾಂಗ್ ಮನ ಸ್ಥಿತಿ ಹೆಚ್ಚಾಗು ತ್ತಿದೆ ಎಂದು ತೀವ್ರ ಬೇಸರ ವ್ಯಕ್ತಪಡಿಸಿದರು.

ಮೈಸೂರಿನಲ್ಲಿ ಟಿಪ್ಪುವನ್ನು ದೇಶಪ್ರೇಮಿ ಅನ್ನುತ್ತಾರೆ. ಕೊಡಗಿನಲ್ಲಿ ಅದನ್ನು ಒಪ್ಪುವು ದಿಲ್ಲ. ಇತಿಹಾಸದಲ್ಲಿ ಕೊಡವರ ಮೇಲೆ ಆತ ನಡೆಸಿದ ಕ್ರೌರ್ಯ ಬೇರೆ ಯಾವ ರಾಜರೂ ನಡೆಸಿಲ್ಲ. ಈ ಸಂಗತಿ ಬಗ್ಗೆ ಇತಿಹಾಸದಲ್ಲಿ ನಮೂದಿಸಿಲ್ಲ ಏಕೆ?. ಈತ ನನ್ನ ಕುಟುಂಬದ ಐದನೇ ತಲೆಮಾರಿನ ಅಜ್ಜನನ್ನು ಬಲವಂತ ವಾಗಿ ಮತಾಂತರ ಮಾಡಿದ್ದಾನೆ. ಇನ್ನು ಕೆಲವರನ್ನು ಕ್ರೂರವಾಗಿ ಕೊಲೆ ಮಾಡಿದ್ದಾನೆ. ಈತನನ್ನು ನಾವು ಹೇಗೆ ದೇಶಪ್ರೇಮಿ ಎಂದು ಒಪ್ಪಿಕೊಳ್ಳುವುದು. ಇಂತಹ ಅನೇಕ ಸಂಗತಿ ಗಳು ಇತಿಹಾಸದಲ್ಲಿ ತಿರುಚಲಾಗಿದ್ದು, ಅಸ್ಪ ಷ್ಟತೆಯಿಂದ ಕೂಡಿದೆ. ಇನ್ನು ಯಾವುದಕ್ಕೂ ಉತ್ತರ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಪತ್ರಿಕೋದ್ಯಮವನ್ನು ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂದು ಎಲ್ಲರೂ ಕರೆಯುತ್ತಾರೆ. ಆದರೆ, ದೇಶಕ್ಕೆ ಒಳ್ಳೆಯದಾಗುವ ಸಿಎಎ, ಎನ್‍ಸಿಆರ್ ಅಂತಹ ಕಾನೂನುಗಳನ್ನೇ ತಪ್ಪಾಗಿ ಅರ್ಥೈಸುವ ಪತ್ರಿಕೋದ್ಯಮವನ್ನು ಏನೆಂದು ಕರೆಯಬೇಕು. ಒಂದು ವರ್ಗದ ಪತ್ರಕರ್ತರು, ದೇಶಕ್ಕೆ ಒಳ್ಳೆಯದಾಗುವ ಕಾನೂನು ಮತ್ತು ಜನ ಪರ ಯೋಜನೆಗಳನ್ನು ತಮ್ಮ ಟಿಆರ್‍ಪಿ ಗಾಗಿ ಜನಮಾನಸದಲ್ಲಿ ಕೆಟ್ಟದಾಗಿ ಬಿಂಬಿಸಿ ದರೆ, ಅಂತಹ ಪತ್ರಿಕೋದ್ಯಮ, ಪತ್ರಕರ್ತ ರನ್ನು ಏನೆಂದು ಅರ್ಥೈಸಬೇಕು ಎಂದು ಮಾಧ್ಯಮಗಳ ಧೋರಣೆಗಳನ್ನು ಖಂಡಿಸಿದರು.

ನಮ್ಮ ಸಮಾಜದಲ್ಲಿ ಗಂಡ-ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಗಾದೆ ಮಾತಿದೆ. ಗಂಡ-ಹೆಂಡತಿ ಸಣ್ಣ ಜಗಳವಾಡಿದ ದೃಶ್ಯಗಳನ್ನು ಮಾಧ್ಯಮ ಗಳು ದಿನವಿಡೀ ತೋರಿಸುತ್ತಾರೆ. ಮತ್ತೆ ಆ ದಂಪತಿ ಒಂದಾಗಲು ಬಿಡದೇ, ಅವರ ಮನಸ್ಸುಗಳನ್ನು ಕೆಡಿಸುವುದೇ ಮಾಧ್ಯಮ ಗಳ ಕೆಲಸವಾಗುತ್ತಿದೆ. ಇದು ಎಷ್ಟು ಸರಿ? ಇದು ನಿಜವಾದ ಪತ್ರಿಕಾಧರ್ಮವೇ? ಎಡಪಂಥೀಯ ವಿಚಾರಧಾರೆಗಳನ್ನು ಬಲವಂತವಾಗಿ ಸಮಾಜ ದಲ್ಲಿ ಪಸರಿಸುವುದು ಪತ್ರಿಕಾ ಧರ್ಮವೇ?. ದೇಶಕ್ಕಾಗಿ ದುಡಿಯುವ ಉತ್ತಮ ನಾಯಕ ಬೇಕೆಂದು ಕಳೆದ 70 ವರ್ಷಗಳಿಂದ ದೇಶದ ಜನತೆ ಹಂಬಲಿಸಿದ್ದರು. ಇದೀಗ ಪ್ರಧಾನಿ ನರೇಂದ್ರ ಮೋದಿ ಅಧಿಕಾರದಲ್ಲಿರುವುದು ಸುದೈವದ ಸಂಗತಿ ಎಂದರು.

ಅಧಿಕಾರದ ಆಸೆಗಾಗಿ ನೆಹರು ಮಾಡಿದ ತಪ್ಪುಗಳಿಂದ ದೇಶ ಸಾಕಷ್ಟು ನೋವು ಗಳನ್ನು ಅನುಭವಿಸಿದೆ. ಇದನ್ನು ಸರಿಪಡಿಸು ತ್ತಿರುವ ಪ್ರಧಾನಿ ಮೋದಿ ಬಗ್ಗೆ ಅಪಪ್ರ ಚಾರ ಮಾಡುತ್ತಿರುವ ಪತ್ರಕರ್ತರ ನೈತಿಕತೆ ಯನ್ನು ಪ್ರಶ್ನಿಸಿದರು. ಈ ವೇಳೆ `ಸುಧರ್ಮ’ ಪತ್ರಿಕೆ ಸಂಪಾದಕ, `ಪದ್ಮಶ್ರೀ’ ಪ್ರಶಸ್ತಿ ಪುರ ಸ್ಕøತ ಕೆ.ವಿ.ಸಂಪತ್ ಕುಮಾರ್ ಹಾಗೂ ಅವರ ಪತ್ನಿ ವಿಜಯ ಲಕ್ಷ್ಮೀ, `ಮೈಸೂರು ಮಿತ್ರ’ ಮುಖ್ಯ ವರದಿಗಾರ ಎಸ್.ಟಿ.ರವಿ ಕುಮಾರ್, ಹಿರಿಯ ಬರಹಗಾರ ಬನ್ನೂರು ಕೆ.ರಾಜು, ಪೇಪರ್ ಸುಬ್ಬಣ್ಣ, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಬಾಬು, ಬಿ.ರಾಘ ವೇಂದ್ರ, ಚಂದ್ರಶೇಖರ್ ಅವರನ್ನು ಸನ್ಮಾ ನಿಸಲಾಯಿತು. ಇದೇ ವೇಳೆ ಆರ್‍ಎಸ್ ಎಸ್‍ನ ಅಖಿಲ ಭಾರತ ಸಹ ಪ್ರಚಾರ ಪ್ರಮುಖ್ ನರೇಂದ್ರ ಠಾಕೂರ್, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ. ಮಹೇಂದ್ರ, ಸಾಧ್ವಿ ಪತ್ರಿಕೆಯ ಸಂಪಾದಕ ಸಿ.ಮಹೇಶ್ವರನ್ ಉಪಸ್ಥಿತರಿದ್ದರು.

Translate »