ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ರಚನೆ ಸಮರ್ಥಿಸಿಕೊಂಡ ಜಿಟಿಡಿ
ಮೈಸೂರು

ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ರಚನೆ ಸಮರ್ಥಿಸಿಕೊಂಡ ಜಿಟಿಡಿ

May 30, 2018

ಮೈಸೂರು: ಕೋಮುವಾದಿ ಬಿಜೆಪಿಯನ್ನು ಅಧಿಕಾರ ದಿಂದ ದೂರವಿಡುವುದಕ್ಕಾಗಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ರಚಿಸಲಾ ಗಿದ್ದು, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಐದು ವರ್ಷ ಸುಭದ್ರ ಆಡಳಿತ ನೀಡುವುದ ರೊಂದಿಗೆ ಒಂದು ವಾರದೊಳಗೆ ರೈತರ ಸಾಲ ಮನ್ನಾ ಮಾಡುವುದಕ್ಕೆ ಸಿದ್ದತೆ ನಡೆಸುತ್ತಿದ್ದಾರೆ ಎಂದು ಶಾಸಕ ಜಿ.ಟಿ. ದೇವೇಗೌಡ ತಿಳಿಸಿದ್ದಾರೆ.

ಮೈಸೂರಿನ ಖಾಸಗಿ ಹೋಟೆಲ್‍ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ನಡೆದ ವಿಧಾನಸಭೆ ಚುನಾವಣೆ ವೈಶಿಷ್ಟ್ಯವಾದ ಚುನಾವಣೆಯಾಗಿತ್ತು. ಮೈಸೂರು ಜಿಲ್ಲೆ ಯಲ್ಲಿ ಜೆಡಿಎಸ್ ಐದು, ಬಿಜೆಪಿ ಹಾಗೂ ಕಾಂಗ್ರೆಸ್ ತಲಾ ಮೂರು ಸ್ಥಾನಗಳನ್ನು ಪಡೆದಿವೆ. ಶಾಂತಿಯುತ ಮತದಾನದಲ್ಲಿ ಭಾಗಿಯಾದ ಎಲ್ಲ ಮತದಾರರು ಹಾಗೂ ಜೆಡಿಎಸ್ ಅಭ್ಯರ್ಥಿಗಳ ಗೆಲುವಿಗೆ ಸಹಕರಿಸಿದ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರಿಗೆ ಅಭಾರಿಯಾಗಿದ್ದೇನೆ ಎಂದರು.

ಫಲಿತಾಂಶ ಹೊರ ಬೀಳುತ್ತಿದ್ದಂತೆ ರಾಜ್ಯ ದಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಲಭಿಸದೆ ಅತಂತ್ರ ಪರಿಸ್ಥಿತಿ ನಿರ್ಮಾಣ ವಾಯಿತು. 104 ಸ್ಥಾನ ಪಡೆದಿದ್ದ ಬಿಜೆಪಿ ಸರ್ಕಾರ ರಚನೆ ಮಾಡಿದರೂ ಬಹುಮತ ಸಾಬೀತುಪಡಿಸದ ಕಾರಣ ಬಿ.ಎಸ್.ಯಡಿ ಯೂರಪ್ಪ ರಾಜೀನಾಮೆ ನೀಡಿದರು. ಜಾತ್ಯಾತೀತ ತತ್ವ,ಸಿದ್ಧಾಂತ ಹೊಂದಿರುವ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ರನ್ನು ಭೇಟಿ ಮಾಡಿದ ಕಾಂಗ್ರೆಸ್ ನಾಯ ಕರು ಬೇಷರತ್ ಬೆಂಬಲ ಕೊಡುವುದ ರೊಂದಿಗೆ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವ ಪ್ರಸ್ತಾ ವನೆ ಮುಂದಿಟ್ಟರು. ಕೋಮುವಾದಿ ಬಿಜೆಪಿ ಯನ್ನು ಅಧಿಕಾರದಿಂದ ದೂರವಿಡಲು ಕಾಂಗ್ರೆಸ್ ವರಿಷ್ಠರಾದ ಸೋನಿಯಾ ಗಾಂಧಿ, ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ, ಮಾಜಿ ಪ್ರದಾನಿ ಹೆಚ್.ಡಿ.ದೇವೇಗೌಡ, ಹೆಚ್.ಡಿ. ಕುಮಾರಸ್ವಾಮಿ ಅವರು ಚರ್ಚಿಸಿ ಜಾತ್ಯಾ ತೀತ ನಿಲುವನ್ನು ಹೊಂದಿರುವ ಎರಡು ಪಕ್ಷಗಳು ಸೇರಿ ಆಡಳಿತ ನಡೆಸುವುದಕ್ಕೆ ನಿರ್ಧರಿಸಿ, ಉತ್ತಮವಾದ ನಿಲುವನ್ನು ಪ್ರಕಟಿಸಿದ ಹಿನ್ನೆಲೆಯಲ್ಲಿ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ ಎಂದು ಹೇಳಿದರು.

ಬಿಜೆಪಿ ಬಂದ್ ವಿಫಲ: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಸಾಲ ಮನ್ನಾ ಮಾಡುವುದಿಲ್ಲವೆಂದು ಹೇಳಿಲ್ಲ. ರಾಜ್ಯದ ಜನರು ಪೂರ್ಣ ಬಹುಮತ ನೀಡಿದರೆ, ತಾವು ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ಸಾಲ ಮನ್ನಾ ಮಾಡುತ್ತೇ ನೆಂದು ಹೇಳಿದ್ದು ನಿಜ. ಆದರೆ, ಈಗ ಕಾಂಗ್ರೆಸ್ ಬೆಂಬಲ ಪಡೆದು ಸಮ್ಮಿಶ್ರ ಸರ್ಕಾರ ರಚಿಸಿರುವುದರಿಂದ ಆ ಪಕ್ಷದ ನಾಯಕ ರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಿರ್ಧಾರ ಪ್ರಕಟಿಸಬೇಕು. ಇದರಿಂದಾಗಿ ಒಂದು ವಾರ ಕಾಲ ಸಮಯ ಕೇಳಿದ್ದಾರೆ. ಸಾಲ ಮನ್ನಾ ಮಾಡುವುದಕ್ಕಾಗಿ ರೂಪುರೇಷೆ ಸಿದ್ಧಪಡಿಸುತ್ತಿದ್ದಾರೆ. ಒಂದು ವಾರದೊಳಗೆ ಸಾಲ ಮನ್ನಾ ಮಾಡುವುದು ಖಚಿತ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸರ್ಕಾರಕ್ಕೆ ಕಾಲಾವಕಾಶ ಕೊಡದೆ ಬಂದ್ ಕರೆ ಕೊಟ್ಟಿದ್ದರಿಂದ ಹಿನ್ನಡೆ ಅನು ಭವಿಸಿದ್ದಾರೆ. ರಾಜ್ಯದ ಜನರೂ ಸಮಸ್ಯೆ ಅರ್ಥ ಮಾಡಿಕೊಂಡಿರುವುದರಿಂದ ಬಿಜೆಪಿಯ ಬಂದ್ ಅನ್ನು ವಿಫಲಗೊಳಿಸಿದ್ದಾರೆ. ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಯಡಿ ಯೂರಪ್ಪ ಅವರು ಸಾಲ ಮನ್ನಾ ಮಾಡುವ ವಿಚಾರದಲ್ಲಿ 12 ತಿಂಗಳು ಸಮಯ ತೆಗೆದು ಕೊಂಡಿದ್ದರು. ಆದರೆ ಇದೀಗ ಸಮ ಯಾವಕಾಶ ನೀಡದೆ ಸಾಲ ಮನ್ನಾ ಮಾಡುವಂತೆ ಆತುರದಲ್ಲಿ ಬಂದ್‍ಗೆ ಕರೆ ನೀಡಿದ್ದು ಸರಿಯಲ್ಲ ಎಂದು ಅಸಮಾ ಧಾನ ವ್ಯಕ್ತಪಡಿಸಿದರು.

ಅನಿವಾರ್ಯ ಸ್ಥಿತಿಯಲ್ಲಿ ಒಂದಾಗಿ ದ್ದೇವೆ: ಮೂರು ಪಕ್ಷಕ್ಕೂ ಬಹುಮತ ಬಂದಿರಲಿಲ್ಲ. ನಾವೆಲ್ಲರೂ ಕಾಂಗ್ರೆಸ್ ವಿರುದ್ಧ ಹೋರಾಟ ಮಾಡಿದ್ದೆವು. ಈ ಚುನಾವಣೆ ಯನ್ನು ಜಿದ್ದಾಜಿದ್ದಿಯಾಗಿ ಕಾಂಗ್ರೆಸ್ ವಿರುದ್ಧ ಎದುರಿಸಿದ್ದೆವು. ಆದರೆ, ಅತಂತ್ರ ಸ್ಥಿತಿಯ ಕಾರಣ ಒಂದಾಗಿದ್ದೇವೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಈಗ ಮತ್ತೊಂದು ಚುನಾವಣೆ ಎದುರಿಸಲಾಗದು. ರಾಜ್ಯದ ಅಭಿವೃದ್ಧಿ ಕುಂಠಿತವಾಗಲಿದೆ. ಮೈತ್ರಿ ಸರಕಾರ ರಚನೆ ಮಾಡೋಣ ಎನ್ನುವ ತೀರ್ಮಾನಕ್ಕೆ ಬಂದಿದ್ದರಿಂದ ನಾವೆ ಲ್ಲರೂ ಒಂದಾಗಿ ಅವರ ತೀರ್ಮಾನಕ್ಕೆ ಬದ್ಧರಾದೆವು ಎಂದು ಹೇಳಿದರು.

ಷರತ್ತು ಊಹಾಪೋಹ: ಸÀರ್ಕಾರ ಐದು ವರ್ಷ ಪೂರೈಸಲಿದೆ. ಕಾಂಗ್ರೆಸ್ ಹಲವು ಷರತ್ತು ವಿಧಿಸಿದೆ ಎನ್ನುವುದು ಕೇವಲ ಊಹಾಪೋಹ. ಹೆಚ್.ಡಿ.ಕುಮಾರ ಸ್ವಾಮಿ ಸಿಎಂ ಆಗಿದ್ದರಿಂದ ಜಾತ್ಯಾತೀತ ಪಕ್ಷಗಳು ಒಂದಾಗಿವೆ. ಮುಂದೆ ಬಲಿಷ್ಠ ವಾಗಲಿದೆ. ರಾಜ್ಯದಲ್ಲಿ ಬಿಜೆಪಿಯ ಎಲ್ಲಾ ಹಾದಿಗಳು ಬಂದ್ ಆಗಿವೆ. ಇದರಿಂದಾ ಗಿಯೇ ರಾಜ್ಯ ಬಿಜೆಪಿ ಉಸ್ತುವಾರಿ ಕೆ.ಮುರುಳೀಧರರಾವ್ ಸೇರಿದಂತೆ ಬಿಜೆಪಿ ನಾಯಕರು ಸಮ್ಮಿಶ್ರ ಸರ್ಕಾರದ ವಿರುದ್ದ ಟೀಕೆ ಮಾಡುತ್ತಿದ್ದಾರೆ. ಅಲ್ಲದೆ ಕೆ.ಮುರುಳೀಧರರಾವ್, ಸಮ್ಮಿಶ್ರ ಸರ್ಕಾರ ಪತನವಾದರೆ ಚುನಾವಣೆ ಎದುರಿಸಲು ಸಿದ್ಧವೆಂದು ಹೇಳಿದ್ದಾರೆ. 150ಸೀಟು ಬರುತ್ತೇವೆಂದು ಹೇಳಿದ್ದವರು ಈಗ 104ಕ್ಕೆ ಬಂದಿದ್ದಾರೆ. ಜೆಡಿಎಸ್-ಕಾಂಗ್ರೆಸ್ ಒಂದಾಗಿರುವ ಕಾರಣ ಅವರಿಗೆ ಆತಂಕ ಶುರುವಾಗಿದೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ನಾವು ಜತೆಯಾಗಿ ಸಾಗುತ್ತೇವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಅಡಗೂರು ಹೆಚ್.ವಿಶ್ವನಾಥ್, ಸಾ.ರಾ. ಮಹೇಶ್, ಕೆ.ಮಹದೇವ್, ಪರಾಜಿತ ಅಭ್ಯರ್ಥಿಗಳಾದ ಪ್ರೊ.ಕೆ.ಎಸ್.ರಂಗಪ್ಪ, ಅಬ್ದುಲ್ಲಾ ಅಜೀಜ್, ಕೆ.ವಿ.ಮಲ್ಲೇಶ್, ದಯಾನಂದ ಮೂರ್ತಿ, ನಗರಾಧ್ಯಕ್ಷ ಕೆ.ಟಿ.ಚೆಲುವೇಗೌಡ, ಗ್ರಾಮಾಂತರ ಅಧ್ಯಕ್ಷ ನರಸಿಂಹಸ್ವಾಮಿ, ಜಿಪಂ ಸದಸ್ಯ ಬೀರಿಹುಂಡಿ ಬಸವಣ್ಣ ಇದ್ದರು.
ಕುಮಾರಸ್ವಾಮಿ ಸಿಎಂ ಮಾಡುವುದೇ ನಮ್ಮ ಏಕೈಕ ಗುರಿಯಾಗಿತ್ತು

ಸಚಿವ ಸ್ಥಾನ ನೀಡುವುದು ಮಾಜಿ ಪ್ರಧಾನಿ ದೇವೇಗೌಡರಿಗೆ ಬಿಟ್ಟ ವಿಚಾರ: ಜಿಟಿಡಿ

ನಮ್ಮ ಮುಂದೆ ಇದ್ದ ಗುರಿ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡುವುದೇ ಆಗಿತ್ತು. ಸಮ್ಮಿಶ್ರ ಸರ್ಕಾರ ರಚನೆಯಾಗಿದೆ. ಸಚಿವ ಸಂಪುಟದಲ್ಲಿ ಯಾರಿಗೆ ಸ್ಥಾನ ನೀಡಬೇಕು ಎನ್ನುವುದು ಮಾಜಿ ಪ್ರದಾನಿ ಹೆಚ್.ಡಿ.ದೇವೇಗೌಡರಿಗೆ ಬಿಟ್ಟ ಸಂಗತಿ ಎಂದು ಶಾಸಕ ಜಿ.ಟಿ.ದೇವೇಗೌಡ ತಿಳಿಸಿದ್ದಾರೆ. ನಮಗೆ ಕುಮಾರಸ್ವಾಮಿ ಅವರನ್ನು ಸಿಎಂ ಮಾಡಬೇಕು ಎಂಬ ಹಂಬಲವಿತ್ತು. ಅದನ್ನು ಬಿಟ್ಟರೆ ಬೇರೆ ಯಾವ ಆಸೆ-ಆಕಾಂಕ್ಷೆ ಇರಲಿಲ್ಲ. ಜೆಡಿಎಸ್‍ಗೆ ಸಿಕ್ಕಿರುವ ಸ್ಥಾನಗಳಲ್ಲಿ ಯಾರಿಗೆ ಸಚಿವ ಸ್ಥಾನ ಕೊಟ್ಟರೂ ನÀಮ್ಮದೇನೂ ಅಭ್ಯಂತರವಿಲ್ಲ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಕೈಗೊಳ್ಳುವ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ. ಎರಡು ದಿನದಲ್ಲಿ ಸಚಿವ ಸಂಪುಟ ರಚನೆಯಾಗಲಿದೆ. ಜೆಡಿಎಸ್‍ಗೆ ಹನ್ನೊಂದು ಖಾತೆಗಳು ಲಭಿಸಲಿವೆ. ಅವುಗಳನ್ನು ಯಾರಿಗೆ ಕೊಡಬೇಕು ಎನ್ನುವುದು ಗೌಡರಿಗೆ ಬಿಟ್ಟ ವಿಚಾರ ಎಂದರು.

ನಾವು ಪಕ್ಷಕ್ಕಾಗಿ ದುಡಿದಿದ್ದೇವೆ. ನಮಗೂ ವಯಸ್ಸಾಗಿದೆ. ಪಕ್ಷ ಉಳಿಸುವ ಜತೆಗೆ ಕುಮಾರಣ್ಣ ಸಿಎಂ ಆಗಬೇಕಿತ್ತು. ಇದು ಬಿಟ್ಟರೆ ಬೇರೇನೂ ಇಲ್ಲ ಎಂದರು. ಚುನಾವಣೆಯಲ್ಲಿ ಜಿದ್ದಾಜಿದ್ದಿಯಿಂದ ಹೋರಾಡಿದ್ದ ಕಾರ್ಯಕರ್ತರು ಸ್ವಲ್ಪ ಹೊಂದಾಣ ಕೆ ಮಾಡಿಕೊಳ್ಳಬೇಕಾಗಿದೆ. ರಾಜ್ಯದ ಸ್ಥಿತಿ ಅರಿತ ನಾವು ಅರ್ಥ ಮಾಡಿಕೊಂಡಿದ್ದೇವೆ. ದಿನ ಕಳೆದಂತೆ ಸರಿ ಹೋಗಲಿದೆ ಎಂದು ಅಭಿಪ್ರಾಯಪಟ್ಟರು.

ಭವಾನಿ ರೇವಣ್ಣ ಅಕ್ಕ-ನಾನು ತಮ್ಮ ಇದ್ದಂತೆ: ಇದೇ ವೇಳೆ ಕೆ.ಆರ್.ನಗರ ಶಾಸಕ ಸಾ.ರಾ.ಮಹೇಶ್ ಮಾತನಾಡಿ, ಚುನಾವಣೆಯಲ್ಲಿ ಕಡಿಮೆ ಮತಗಳ ಅಂತರದಲ್ಲಿ ಗೆಲುವು ಸಾಧಿಸುವುದಕ್ಕೆ ಭವಾನಿ ರೇವಣ್ಣ ಅವರ ಆಡಿಯೋ ಕಾರಣವಲ್ಲ. ಅವರೊಬ್ಬರು ಜಿಪಂ ಸದಸ್ಯರು, ಅವರ ಪುತ್ರ ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಗಿದ್ದಾರೆ. ಹೆಚ್.ಡಿ.ರೇವಣ್ಣ ಅವರು ಸಚಿವರಾಗಿದ್ದರು. ನಾನು ಮತ್ತು ಭವಾನಿ ರೇವಣ್ಣ ಅಕ್ಕ-ತಮ್ಮನಂತೆ ಇದ್ದೇವೆ. ಚುನಾವಣೆಯಲ್ಲಿ ಭವಾನಿ ಅವರಿಂದ ಯಾವುದೇ ತೊಂದರೆಯಾಗಲಿಲ್ಲ. ಅವರು ನನ್ನ ವಿರುದ್ಧ ಮಾತಾಡಿಲ್ಲ. ಕೆಲವರು ಅದನ್ನು ತಪ್ಪಾಗಿ ಬಿಂಬಿಸಿದರು. ಮತ್ತೆ ಕೆಲವರು ಜೆಡಿಎಸ್ ಅನ್ನು ಬಿಜೆಪಿಯ ಬಿ-ಟೀಮ್ ಎಂದು ಅಪಪ್ರಚಾರ ಮಾಡಿದ್ದರಿಂದ ಒಂದು ವರ್ಗದ ಮತದಾರರು ಜೆಡಿಎಸ್‍ನಿಂದ ದೂರವಾದರು. ಮತ್ತೊಂದು ವರ್ಗ ಅಭಿವೃದ್ಧಿಗಿಂತ ಜಾತಿಯನ್ನು ಮುಖ್ಯವಾಗಿಟ್ಟುಕೊಂಡ ಕಾರಣ ಮತಗಳ ಅಂತರ ಕಡಿಮೆಯಾಯಿತು ಎಂದು ವಿಶ್ಲೇಷಿಸಿದರಲ್ಲದೆ, 2008 ಮತ್ತು2013ರ ಮತಗಳ ಅಂತರ ನೋಡಿದರೆ ಈ ಬಾರಿ ಕಡಿಮೆಯಾಗಿದೆ. ನಾವು ಅಭಿವೃದ್ಧಿ ಮಾಡಿದರೂ ಒಂದು ವರ್ಗಕ್ಕೆ ಅದು ಬೇಕಿರಲಿಲ್ಲ. ಜಾತಿ ನೋಡಿರುವ ಕಾರಣ ಕಡಿಮೆಯಾಗಿದೆ ಎಂದರು.
ಬಾಕ್ಸ್

36 ಸಾವಿರ ಮತಗಳ ಅಂತರದಿಂದ ಸಿದ್ದು ಯಾಕೆ ಸೋತ್ರು!?

ಕಾಂಗ್ರೆಸ್‍ನಿಂದ ಜೆಡಿಎಸ್‍ಗೆ ಬಂದ ನಂತರ ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ದ ಹರಿಹಾಯುತ್ತಿದ್ದ ಶಾಸಕ ಅಡಗೂರು ಹೆಚ್.ವಿಶ್ವನಾಥ್ ಅವರು ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವಿದ್ದರೂ ಸಿದ್ದರಾಮಯ್ಯ ಅವರನ್ನು ಛೇಡಿಸುವ ಮೂಲಕ ಕಾಂಗ್ರೆಸ್‍ಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದ್ದಾರೆ. ಇಂದು ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರು ಕೆ.ಆರ್.ನಗರದ ಶಾಸಕ ಸಾ.ರಾ.ಮಹೇಶ್ ಅವರ ಕಡಿಮೆ ಅಂತರದ ಗೆಲುವಿಗೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಎ.ಹೆಚ್.ವಿಶ್ವನಾಥ್ ಅವರು, ಶಾಸಕ ಸಾ.ರಾ.ಮಹೇಶ್ ಅವರ ಮತಗಳ ಅಂತರ ಪ್ರಶ್ನೆ ದೊಡ್ಡದಲ್ಲ. ಒಂದು ಮತದಲ್ಲಿ ಗೆದ್ದ ಆರ್.ಧ್ರುವನಾರಾಯಣ್ ಅವರಿಗೆ ವಿಧಾನಸೌಧದ ಒಳಗೆ ಪ್ರವೇಶಿಸುವುದಕ್ಕೆ ಅವಕಾಶ ಮಾಡಿಕೊಡಲಾಯಿತು. ಗೆಲುವಿಗೆ ಮತಗಳ ಅಂತರ ಮುಖ್ಯವಾಗುವುದಿಲ್ಲ. ಕಡಿಮೆ ಮತಗಳ ಅಂತರ ಬಂದಿದ್ದನ್ನು ಕೇಳ್ತೀರಾ? ಯಾಕೇ ಸಿದ್ದರಾಮಯ್ಯನೋರು 36ಸಾವಿರ ಮತಗಳ ಅಂತರದಿಂದ ಸೋತ್ರು ಅಂತ ಯಾಕೇ ಕೇಳಲ್ಲ. ಕೇಳಲು ನಿಮಗೆ ಭಯವೇ?, ಸಿದ್ದರಾಮಯ್ಯ ಅವರು ಬಂದಾಗ ನಾನೇ ಅವರನ್ನು ಪ್ರಶ್ನಿಸಿದೆ ಅಂತ ಕೇಳಿ? ಎಂದ ಅವರು, 36ಸಾವಿರ ಮತದ ಅಂತರದಿಂದ ಸೋಲು ಯಾಕಾಯ್ತು? ಅವರ ಐದು ವರ್ಷದ ಆಡಳಿತ, ಅವರ ಕಾರ್ಯವೈಖರಿ ಹೇಗಿತ್ತು ಎನ್ನುವುದನ್ನು ಗಮನಿಸಬೇಕಿತ್ತು ಎಂದು ಲೇವಡಿ ಮಾಡಿದರು.

Translate »