ಮೈಸೂರಲ್ಲಿ ಹೃದಯ ಪಾಲನೆ ಜಾಗೃತಿ ಜಾಥಾ
ಮೈಸೂರು

ಮೈಸೂರಲ್ಲಿ ಹೃದಯ ಪಾಲನೆ ಜಾಗೃತಿ ಜಾಥಾ

February 18, 2019

ಮೈಸೂರು: ಮೈಸೂ ರಲ್ಲಿ ಇಂದು ‘ವಿಶ್ವ ಮಹಿಳೆಯರ ಹೃದಯ ದಿನ’ವನ್ನು ಅರ್ಥಪೂರ್ಣವಾಗಿ ಆಚರಿಸ ಲಾಯಿತು. ಕಾರ್ಡಿಯಾಲಜಿಕಲ್ ಸೊಸೈಟಿ ಆಫ್ ಇಂಡಿಯಾ, ಮೈಸೂರು ಚಾಪ್ಟರ್ ವತಿಯಿಂದ ವಿಶ್ವ ಮಹಿಳೆಯರ ಹೃದಯ ದಿನಾಚರಣೆ ಅಂಗವಾಗಿ ‘Go Red For Women’ ಘೋಷಣೆಯೊಂದಿಗೆ ಮೈಸೂ ರಿನ ಅರಮನೆ ಉತ್ತರ ದ್ವಾರದ ಶ್ರೀ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ವಾಕಥಾನ್ ಮೂಲಕ ವೈದ್ಯರು ಹಾಗೂ ಆಸ್ಪತ್ರೆಗಳ ಸಿಬ್ಬಂದಿಗಳು ಹೃದಯದ ಆರೋಗ್ಯ ರಕ್ಷಣೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.

ಕೆಂಪು ಉಡುಪು ಧರಿಸಿದ ಹೃದ್ರೋಗ ತಜ್ಞರು, ವಿವಿಧ ಖಾಸಗಿ ಆಸ್ಪತ್ರೆಗಳ ಸಿಬ್ಬಂದಿ ಹಾಗೂ ನರ್ಸಿಂಗ್ ವಿದ್ಯಾರ್ಥಿಗಳು ದೊಡ್ಡ ಗಡಿಯಾರ, ಗಾಂಧಿ ಚೌಕ, ಓಲ್ಡ್ ಬ್ಯಾಂಕ್ ರಸ್ತೆ, ಸಯ್ಯಾಜಿರಾವ್ ರಸ್ತೆ, ಡಿ.ದೇವರಾಜ ಅರಸು ರಸ್ತೆ, ಡಿ.ಸುಬ್ಬಯ್ಯ ರಸ್ತೆ ಮೂಲಕ ಸಾಗಿದ ವಾಕಥಾನ್ ಜೆ.ಕೆ.ಮೈದಾನದಲ್ಲಿ ಅಂತ್ಯವಾಯಿತು.

‘ಹೃದಯದ ಆರೋಗ್ಯ ರಕ್ಷಿಸಿ’ ಘೋಷಣಾ ಫಲಕಗಳನ್ನಿಡಿದು ವಾಕಥಾನ್ ನಲ್ಲಿ ಬಂದ ವೈದ್ಯರು, ಆ ಬಗ್ಗೆ ಸಾರ್ವ ಜನಿಕರಿಗೆ ಬಿತ್ತಿಪತ್ರಗಳನ್ನು ವಿತರಿಸಿದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಕೆ.ಜ್ಯೋತಿ ಅವರು ಹಸಿರು ನಿಶಾನೆ ತೋರುವ ಮೂಲಕ ವಾಕಥಾನ್‍ಗೆ ಚಾಲನೆ ನೀಡಿದರು. ಜೆಎಸ್‍ಎಸ್ ಡೆಂಟಲ್ ಕಾಲೇಜಿನ ಮ್ಯಾರ ಥಾನ್ ರನ್ನರ್ ಡಾ.ಉಷಾ ಹೆಗಡೆ, ಬೆಂಗ ಳೂರಿನ ಬಿಎಂಸಿಯ ಮಕ್ಕಳ ಹೃದ್ರೋಗ ತಜ್ಞ ಪ್ರೊ.ಐ.ಬಿ.ವಿಜಯಲಕ್ಷ್ಮಿ, ಕಾರ್ಡಿಯಾ ಲಜಿಕಲ್ ಸೊಸೈಟಿ ಆಫ್ ಇಂಡಿಯಾ ಮೈಸೂರು ಚಾಪ್ಟರ್‍ನ ಅಧ್ಯಕ್ಷ ಡಾ.ಹರ್ಷ ಬಸಪ್ಪ, ಕಾರ್ಯದರ್ಶಿ ಡಾ.ಕೆ.ಎಸ್. ರಜಿತ್, ಡಾ.ಜೆ.ವೀನು, ಡಾ.ಬಿ.ದಿನೇಶ್, ಡಾ.ಡಿ.ಶಶಿರೇಖಾ, ಡಾ.ರಾಜೇಂದ್ರ, ಡಾ.ಎಂ.ಮಂಜಪ್ಪ ಸೇರಿದಂತೆ ಹಲವರು ವಾಕಥಾನ್‍ನಲ್ಲಿ ಪಾಲ್ಗೊಂಡಿದ್ದರು.

ನಂತರ ಮೈಸೂರು ಮೆಡಿಕಲ್ ಕಾಲೇ ಜಿನ ಪ್ಲಾಟಿನಂ ಜುಬಿಲಿ ಹಾಲ್‍ನಲ್ಲಿ ನಡೆದ ಸಮಾರಂಭದಲ್ಲಿ ಖ್ಯಾತ ಪೀಡಿಯಾಟ್ರಿಕ್ ಕಾರ್ಡಿಯಾಲಜಿಸ್ಟ್ ಅವರು ಮಾತನಾಡಿ, ಬದಲಾದ ಜೀವನ ಶೈಲಿ, ನಕಾರಾತ್ಮಕ ಯೋಚನೆಗಳು, ಚಿಂತೆ, ಒತ್ತಡ, ಧೂಮ ಪಾನ, ಮದ್ಯಪಾನ, ತಂಬಾಕು ಸೇವನೆಯು ಹೃದಯಾಘಾತಕ್ಕೆ ಪ್ರಮುಖ ಕಾರಣಗಳು ಎಂದರು. ಪಾಶ್ಚಿಮಾತ್ಯ ಜೀವನ ಶೈಲಿ ಯನ್ನು ಬಿಟ್ಟು, ಭಾರತೀಯ ಸಂಸ್ಕøತಿ ಯನ್ನು ಮೈಗೂಡಿಸಿಕೊಂಡು ಹಣ್ಣು-ತರಕಾರಿಯನ್ನು ಸೇವಿಸಿ, ಸದಾ ಉಲ್ಲಾಸ ದಿಂದಿದ್ದರೆ ಹೃದಯಾಘಾತವನ್ನು ತಡೆಗಟ್ಟ ಬಹುದು ಎಂದು ವಿವರಿಸಿದರು.

ಬೇಕರಿಯ ಜಂಕ್ ಫುಡ್ ತೊರೆದು ಮನೆಯಲ್ಲಿ ತಾಯಿ ಮಾಡಿದ ತಿಂಡಿ-ಊಟ ತಿನ್ನಬೇಕು, ಪ್ರತೀ ದಿನ ಧ್ಯಾನ ಮಾಡಿ ಮನಸ್ಸನ್ನು ಶಾಂತಿಯಿಂದಿರಿಸಿದಲ್ಲಿ ಹೃದಯ ಮಿಡಿತ ಸುಲಲಿತವಾಗುತ್ತದೆ. ಆಗಿಂದಾಗ್ಗೆ ಉಪವಾಸ, ಸೂರ್ಯ ನಮಸ್ಕಾರ ಮಾಡಿ ದಲ್ಲಿ ಹೃದಯ ಹಗುರವಾಗುತ್ತದೆ ಎಂದೂ ಪ್ರೊ. ಐ.ಬಿ.ವಿಜಯಲಕ್ಷ್ಮಿ ಅವರು ಹೃದ ಯದ ಆರೋಗ್ಯ ಪಾಲನೆ ಬಗ್ಗೆ ಅರಿವು ಮೂಡಿಸಿದರು. ಇದೇ ವೇಳೆ ವೈದ್ಯಕೀಯ ಕ್ಷೇತ್ರದಲ್ಲಿ ಅವಿರತ ಸೇವೆ ಸಲ್ಲಿಸಿದ ಹಿರಿಯ ವೈದ್ಯರುಗಳಾದ ಡಾ.ಸೀತಾಲಕ್ಷ್ಮಿ, ಡಾ.ಮಣಿ ಕರ್ಣಿಕ, ಡಾ.ಲಕ್ಷ್ಮಿದೇವಿ, ಡಾ. ಲಲಿತಮ್ಮ ಹಾಗೂ ಡಾ.ಸರಸ್ವತಿ ಅವರನ್ನು ಕಾರ್ಡಿಯಾ ಲಜಿಕಲ್ ಸೊಸೈಟಿ ಆಫ್ ಇಂಡಿಯಾದಿಂದ ಆತ್ಮೀಯವಾಗಿ ಅಭಿನಂದಿಸಲಾಯಿತು.

Translate »