ಪ್ರಕೃತಿ ವಿಕೋಪದ ಸಂತ್ರಸ್ತ ವಿದ್ಯಾರ್ಥಿಗಳಿಗೆ ಸಹಾಯ
ಕೊಡಗು

ಪ್ರಕೃತಿ ವಿಕೋಪದ ಸಂತ್ರಸ್ತ ವಿದ್ಯಾರ್ಥಿಗಳಿಗೆ ಸಹಾಯ

December 30, 2018

ವಿರಾಜಪೇಟೆ: ವಿದ್ಯಾರ್ಥಿಗಳಿಗೆ ಓದುವ ಹವ್ಯಾಸವನ್ನು ಬೆಳೆಸಲು ಪೋಷಕರು ಅಸಕ್ತಿ ವಹಿಸಬೇಕು. ಹಾಗೂ ಮನೆಯೇ ಗ್ರಂಥಾಲಯದಂತಿರಬೇಕು. ಇದರಿಂದ ಮುಂದೆ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಗೆ ಸಹಾಯವಾಗಲಿದೆ ಎಂದು ಬಾಳೆಲೆಯ ವಿಜಯಲಕ್ಷ್ಮಿ ಪದವಿ ಪೂರ್ವ ಕಾಲೇಜಿನ ಪ್ರಭಾರ ಪ್ರಾಂಶು ಪಾಲ ಡಾ. ಜೆ.ಸೋಮಣ್ಣ ಹೇಳಿದರು.
ವಿರಾಜಪೇಟೆ ಪ್ರಗತಿ ಶಾಲೆಯಲ್ಲಿ ಆಯೋಜಿಸಲಾಗಿದ್ದ ‘ಜಿಲ್ಲೆಯ ಪ್ರಕೃತಿ ವಿಕೋಪದ ಸಂತ್ರಸ್ತ ವಿದ್ಯಾರ್ಥಿಗಳಿಗೆ ಸಹಾಯಹಸ್ತ’ ಹಾಗೂ ಕ್ರೀಡಾ ದಿನಾ ಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ-ಶಿಕ್ಷಕರಿಗೆ ಮತ್ತು ಪೋಷಕರಿಗೆ ಏರ್ಪ ಡಿಸಲಾಗಿದ್ದ ಕ್ರೀಡಾ ಸ್ಪರ್ಧೆ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿ, ವಿದ್ಯಾರ್ಥಿ ಗಳು ಛಲದಿಂದ ತಮ್ಮ ಗುರಿ ಮುಟ್ಟು ವಂತಾಗಬೇಕು ಎಂದರು.

ಕೊಡಗು ಎಜುಕೇಶನ್ ಹಾಗೂ ಸೋಷಿಯಲ್ ಸರ್ವೀಸ್ ಟ್ರಸ್ಟ್ ಕಾರ್ಯ ದರ್ಶಿ ಮಾರ್ಚಂಡ ಗಣೇಶ್ ಪೊನ್ನಪ್ಪ ಅವರ ಮುಖಾಂತರ ಶಾಲಾ ವಿದ್ಯಾರ್ಥಿ ಗಳು, ಶಿಕ್ಷಕರು, ಆಡಳಿತ ಮಂಡಳಿ ಕಳೆದ ಆಗಸ್ಟ್ ತಿಂಗಳು ಜಿಲ್ಲೆಯಲ್ಲಿ ನಡೆದ ಪ್ರಕೃತಿ ವಿಕೋಪದ ಸಂತ್ರಸ್ತ ವಿದ್ಯಾರ್ಥಿಗಳಿಗಾಗಿ ಸಂಗ್ರಹಿಸಿದ್ದ ರೂ. 25,000 ವಿತರಿಸ ಲಾಯಿತು. ಈ ಸಂದರ್ಭ ಮಾತನಾಡಿದ ಮಾರ್ಚಂಡ ಗಣೇಶ್ ಪೊನ್ನಪ್ಪ ಅವರು, ವಿದ್ಯಾರ್ಥಿಗಳಿಗೆ ಪೋಷಕರ ವರ್ತನೆಗಳು ಮಾದರಿಯಾಗಬೇಕು. ಹಾಗೂ ವಿದ್ಯಾರ್ಥಿ ಗಳು ಟಿವಿ ಮತ್ತು ಮೊಬೈಲ್ ಬಳಕೆಯನ್ನು ಕಡಿಮೆಮಾಡಿ ಪಾಠದ ಕಡೆಗೆ ಹೆಚ್ಚು ಗಮನ ಹರಿಸುವಂತಾಗಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾದಂಡ ಎಸ್.ಪೂವಯ್ಯ ವಹಿಸಿ ಮಾತ ನಾಡಿದರು. ಆಡಳಿತಾಧಿಕಾರಿ ಮಾದಂಡ ತುಂಗಾ ಪೂವಯ್ಯ ಸ್ವಾಗತಿಸಿದರು. ಶಿಕ್ಷಕಿ ಕೋಮಲ ನಿರೂಪಿಸಿದರೆ. ಮುಖ್ಯ ಶಿಕ್ಷಕಿ ಕಾವೇರಮ್ಮ ವಂದಿಸಿದರು.

Translate »