ವಿರಾಜಪೇಟೆ: ವಿರಾಜಪೇಟೆಯ ವಿಜಯನಗರದ ನಿವಾಸಿ ಬಿ.ಎ.ಯುಸೂಫ್ ಎಂಬುವರ ತೋಟದ ಲೈನ್ ಮನೆಯಲ್ಲಿ ರಿಸಿದ್ದ ಟಿವಿಯನ್ನು ಕಳವು ಮಾಡಿ ಪಟ್ಟಣದ ಅಂಗಡಿಯೊಂದಕ್ಕೆ ಮಾರಾಟ ಮಾಡಿದ್ದ ಮೂವರು ಆರೋಪಿಗಳನ್ನು ಇಲ್ಲಿನ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಿ.ಎ.ಯುಸೂಫ್ ಅವರು ಪಂಜಾರುಪೇಟೆಯ ಲೈನ್ ಮನೆಯಲ್ಲಿ ಟಿವಿ ಕಾಣದಾದಗ ಕಾರ್ಮಿಕರಾಗಿ ತೋಟದ ಕೆಲಸಕ್ಕೆ ಬರುತ್ತಿದ್ದ ಮೂವರ ಮೇಲೆ ಸಂಶಯಗೊಂಡು ನಗರ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿದ ಪೊಲೀಸರು ಕಾರ್ಮಿಕರಾದ ಮುಗೇಶ್, ಬಾಬು, ಸಜನ್ ಎಂಬುವರುಗಳನ್ನು ವಿಚಾರಣೆಗೊಳಪಡಿಸಿದಾಗ ಟಿವಿ ಕಳವು ಮಾಡಿ ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡರೆನ್ನಲಾಗಿದೆ. ಮೂವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಒಪ್ಪಿಸಿದಾಗ ನ್ಯಾಯಾಧೀಶರು ನ್ಯಾಯಬಂಧನದಲ್ಲಿರಿಸುವಂತೆ ಆದೇಶಿಸಿದ್ದಾರೆ.