ಕಾಡಾನೆ ದಾಳಿ: ಮೂವರಿಗೆ ಗಾಯ
ಕೊಡಗು

ಕಾಡಾನೆ ದಾಳಿ: ಮೂವರಿಗೆ ಗಾಯ

December 31, 2018

ಮಡಿಕೇರಿ: ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಕಾಡಾನೆ ದಾಳಿ ನಡೆಸಿದ ಪರಿಣಾಮ 3 ಮಂದಿ ಕಾರ್ಮಿಕರು ಗಾಯಗೊಂಡ ಘಟನೆ ಭಾಗ ಮಂಡಲ ಸಮೀಪದ ಸಣ್ಣ ಪುಲಿಕೋಟು ಎಂಬಲ್ಲಿ ನಡೆದಿದೆ. ಸಣ್ಣ ಪುಲಿಕೋಟು ನಿವಾಸಿಗಳಾದ ಹರೀಶ (38), ಈರಪ್ಪ (52) ಮತ್ತು ಚೇತನ್(22) ಎಂಬುವರೇ ಗಾಯಗೊಂಡ ವ್ಯಕ್ತಿಗಳಾಗಿದ್ದಾರೆ.

ಭಾನುವಾರ ಬೆಳಿಗ್ಗೆ 9 ಗಂಟೆಗೆ ಎಂದಿ ನಂತೆ ತೋಟ ಕೆಲಸಕ್ಕೆ ಹೋಗಿದ್ದ ಸಂದರ್ಭ ತೋಟದ ಒಳಗಿದ್ದ 3 ಕಾಡಾನೆ ಗಳು ಏಕಾಏಕಿ ಕಾರ್ಮಿಕರ ಮೇಲೆ ದಾಳಿ ಮಾಡಲು ಮುಂದಾಗಿದೆ. ಈ ಸಂದರ್ಭ ಚೇತನ್ ಮತ್ತು ಈರಪ್ಪ ಓಡಿ ತಪ್ಪಿಸಿಕೊಂಡಿ ದ್ದಾರೆ. ಮತ್ತೋರ್ವ ಕಾರ್ಮಿಕ ಹರೀಶ ನನ್ನು ಕಾಡಾನೆ ಬೆನ್ನಟ್ಟಿ ಬಂದಿದೆ. ಈ ಸಂದರ್ಭ ಸಹ ಕಾರ್ಮಿಕರು ಬೊಬ್ಬೆ ಹೊಡೆದು ಕಾಡಾನೆಯನ್ನು ಓಡಿಸುವಲ್ಲಿ ಸಫಲರಾಗಿದ್ದಾರೆ.

ಕಾಡಾನೆ ದಾಳಿಯಿಂದ ತಪ್ಪಿಸಿಕೊಳ್ಳಲು ಓಡುವ ಸಂದರ್ಭ ಆಯತಪ್ಪಿ ಬಿದ್ದು, ಹರೀಶ್ ಎಂಬುವರ ತಲೆ, ಎದೆ ಮತ್ತು ಕೈಗೆ ಗಂಭೀರ ಗಾಯವಾಗಿದೆ. ಭಾಗಮಂಡಲ ಮತ್ತು ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಹರೀಶ್‍ಗೆ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಚೇತನ್ ಮತ್ತು ಈರಪ್ಪ ಅವರುಗಳಿಗೆ ಕಾಲಿನ ಭಾಗಕ್ಕೆ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಘಟನೆ ಕುರಿತು ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಿ.ಎಫ್.ಓ. ಜಯಾ ಮತ್ತು ಸಿಬ್ಬಂದಿಗಳು ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿದ್ದ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದರು.

Translate »