ಧನಾತ್ಮಕ ಚಿಂತನೆಯಿಂದ ಯಶಸ್ಸು ಸಾಧ್ಯ
ಕೊಡಗು

ಧನಾತ್ಮಕ ಚಿಂತನೆಯಿಂದ ಯಶಸ್ಸು ಸಾಧ್ಯ

December 30, 2018

ಮಡಿಕೇರಿ: ವಿದ್ಯಾರ್ಥಿಗಳು ಧನಾತ್ಮಕ ಚಿಂತನೆಗಳನ್ನು ಮೈಗೂಡಿಸಿ ಕೊಂಡರೆ ಜೀವನದಲ್ಲಿ ಯಶಸ್ಸು ಗಳಿಸ ಬಹುದು ಎಂದು ಡಿವೈಎಸ್‍ಪಿ ಸುಂದರ್ ರಾಜ್ ಕಿವಿಮಾತು ಹೇಳಿದ್ದಾರೆ.

ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ನಗರದ ಕಾವೇರಿ ಕಲಾಕ್ಷೇತ್ರ ದಲ್ಲಿ 30ನೇ ವರ್ಷದ ಪ್ರತಿಭಾವಂತ ದಲಿತ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾ ರಂಭದಲ್ಲಿ ಅವರು ಮಾತನಾಡಿದರು. ಜ್ಞಾನ ಯಾರೋಬ್ಬರ ಸ್ವತ್ತಲ್ಲ, ಜ್ಞಾನದ ಸಂಪಾದನೆಯನ್ನು ಯಾರು ಕೂಡ ಕಸಿದುಕೊಳ್ಳಲು ಸಾಧ್ಯವಿಲ್ಲ. ಸಾಧಿಸುವ ಛಲವಿದ್ದರೆ ಏನು ಬೇಕಾದರು ಸಾಧಿಸಬ ಹುದು. ಪೋಷಕರು ಕೂಡ ಮಕ್ಕಳ ಆಸಕ್ತಿಗೆ ಅನುಗುಣವಾಗಿ ಪ್ರೋತ್ಸಾಹ ನೀಡಿ ಕಲಿ ಯುವ ವಾತಾವರಣ ಸೃಷ್ಟಿಸಬೇಕು ಎಂದು ಸುಂದರ್ ರಾಜ್ ಸಲಹೆ ನೀಡಿದರು.
ಮನುಷ್ಯನಿಗೆ ಆಹಾರದ ಹಸಿವಿ ನೊಂದಿಗೆ ಜ್ಞಾನದ ಹಸಿವು ಇರಬೇಕು. ಪ್ರತಿ ವಿದ್ಯಾರ್ಥಿಗೂ ತಮ್ಮದೇ ಆದ ಪ್ರತಿಭೆಯಿದ್ದು, ಅದನ್ನು ಅರಿತುಕೊಂಡು ಸಾಧನೆ ಮಾಡಬೇಕೆಂದು ಅವರು ಸಲಹೆ ನೀಡಿದರು.

ಜಿಲ್ಲಾಸ್ಪತ್ರೆಯ ಉಪ ಮುಖ್ಯ ವೈದ್ಯಾ ಧಿಕಾರಿ ಹೆಚ್.ವಿ.ದೇವದಾಸ್ ಮಾತನಾಡಿ, ಶಿಕ್ಷಣ ಶೋಷಿತ ಸಮಾಜದ ಶಕ್ತಿಯಾ ಗಿದೆ. ಕಷ್ಟದಲ್ಲಿರುವವರಿಗೆ ಹಣ ಕೊಡುವ ಬದಲು ಶಿಕ್ಷಣ ಕೊಡಿಸಲು ಸಂಘ ಸಂಸ್ಥೆ ಗಳು ಸಹಕರಿಸಬೇಕು ಎಂದು ಮನವಿ ಮಾಡಿ ದರು. ಪ್ರಸ್ತುತ ರಾಜ್ಯಾಂಗದಲ್ಲಿ ಸ್ಥಾನ ಪಡೆದುಕೊಳ್ಳಲು ಸಾಧ್ಯವಾಗದಿದ್ದರೂ ಕಾರ್ಯಾಂಗದಲ್ಲಿ ಸ್ಥಾನ ಪಡೆದುಕೊಳ್ಳಲು ಸಾಧ್ಯವಿದೆ. ವಿದ್ಯಾರ್ಥಿಗಳು ಈ ದಿಸೆ ಯಲ್ಲಿ ಗಮನಹರಿಸಿ ಸಮಾಜದ ಮುಖ್ಯ ವಾಹಿನಿಗೆ ಬರಬೇಕೆಂದರು.

ಮಡಿಕೇರಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮೀ ಚಂದ್ರಶೇಖರ್ ಮಾತನಾಡಿ, ವಿದ್ಯಾರ್ಥಿ ಗಳು ತಮ್ಮ ಮನೆಯಲ್ಲಿನ ಬಡತನವನ್ನು ಶಾಪ ಎಂದು ಭಾವಿಸದೇ ಆ ಗುಂಗಿ ನಿಂದ ಹೊರಬರಬೇಕು. ಮಕ್ಕಳು ತಮ್ಮ ಪೋಷಕರನ್ನು ಅನುಸರಿಸುವ ಸಾಧ್ಯತೆ ಗಳೇ ಹೆಚ್ಚಿರುತ್ತದೆ. ಹೀಗಾಗಿ ಪೋಷಕರು ಮನೆಯಲ್ಲಿ ಎಚ್ಚರಿಕೆಯಿಂದ ಇರಬೇ ಕೆಂದು ಹೇಳಿದರು.

ಮಡಿಕೇರಿ ಲಯನ್ಸ್ ಕ್ಲಬ್ ಅಧ್ಯಕ್ಷ ಕೆ.ಕೆ. ದಾಮೋಧರ್ ಮಾತನಾಡಿ, ಶಿಕ್ಷಣವು ಹುಲಿಯ ಹಾಲಿನಂತೆ.  ಅದನ್ನು ಪಡೆದವರು ಸಮಾಜದಲ್ಲಿ ಗಟ್ಟಿಯಾಗಿ ನಿಲ್ಲಬಹು ದೆಂದು ಅಭಿಪ್ರಾಯಪಟ್ಟರು. ವಿವಿಧ ಶೈಕ್ಷಣಿಕ ವಿಷಯಗಳಲ್ಲಿ ಸಾಧನೆ ತೋರಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಇದೇ ಸಂದರ್ಭ ಗಣ್ಯರು ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ದ.ಸಂ.ಸ ಜಿಲ್ಲಾ ಸಂಚಾಲಕ ಹೆಚ್.ಎಲ್.ದಿವಾಕರ್. ಮಡಿ ಕೇರಿಯ ಶ್ರೀ ರಾಜರಾಜೇಶ್ವರಿ ದೇವಾಲಯದ ಧರ್ಮಾಧಿಕಾರಿ ಹೆಚ್.ಎಸ್. ಗೋವಿಂದ ಸ್ವಾಮಿ, ವಿಭಾಗೀಯ ಸಂಚಾಲಕ ಎನ್. ವೀರಭದ್ರಯ್ಯ ಇತರರು ಉಪಸ್ಥಿತರಿದ್ದರು.

Translate »